More

    ಪ್ರೀತಿಸಿ ಮದ್ವೆಯಾದುದಕ್ಕೆ ಪತಿಯ ಮನೆಯಲ್ಲಿ ನೋ ಎಂಟ್ರಿ: ಮಗುವಿನ ಜತೆ ಬಂಗಲೆ ಎದುರು ವಿಧವೆ ಪತ್ನಿ ಧರಣಿ

    ತುಮಕೂರು: ಪತಿಯ ಸಾವಿನ ನಂತರ ಮನೆಯೊಳಗೆ ಸೇರಿಸುತ್ತಿಲ್ಲವೆಂದು ಪತ್ನಿ ತನ್ನ ಪುಟ್ಟ ಮಗುವಿನೊಂದಿಗೆ ಪತಿಯ ಮನೆ ಮುಂದೆ ಧರಣಿ ನಡೆಸುತ್ತಿರುವ ಘಟನೆ ವಿದ್ಯಾನಗರದ 4ನೇ ಕ್ರಾಸ್​​ನಲ್ಲಿ ನಡೆದಿದೆ.

    ಪತಿ ಜಿತೇಂದ್ರ ಕುಮಾರ್ ಮೂರು ತಿಂಗಳ ಹಿಂದೆ ಅನಾರೋಗ್ಯದಿಂದ ನಿಧನ ಹೊಂದಿದ್ದರು. ಬಳಿಕ ಪತಿಯ ಸಹೋದರಿಯರು ನನ್ನನ್ನು ಮನೆಗೆ ಸೇರಿಸುತ್ತಿಲ್ಲ ಎಂದು ಪತ್ನಿ ಮಂಜುಳಾ ಆರೋಪಿಸಿದ್ದಾರೆ.

    ಹಿನ್ನೆಲೆ: 2019ರಲ್ಲಿ ಮಂಜುಳಾ ಮತ್ತು ಜಿತೇಂದ್ರ ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದರು. ಇವರ ವಿವಾಹಕ್ಕೆ ಮನೆಯವರ ವಿರೋಧವಿತ್ತು. ಬಳಿಕ ಬಾಡಿಗೆ ಮನೆ ಮಾಡಿ ಬೆಂಗಳೂರಿನಲ್ಲಿ ವಾಸವಾಗಿದ್ದರು. ಆಗಾಗ ತುಮಕೂರಿನ ಮನೆಗೆ ಬಂದು ಹೋಗುತ್ತಿದ್ದರು. ಈ ದಂಪತಿಗೆ ಎರಡೂವರೆ ವರ್ಷದ ಹೆಣ್ಣು ಮಗುವಿದೆ.

    ಜಿತೇಂದ್ರ ತುಮಕೂರಿನಲ್ಲಿ ರೈಸ್​​ಮಿಲ್ ಮಾಲೀಕರಾಗಿದ್ದರು. ಕೋಟ್ಯಂತರ ರೂಪಾಯಿ ಆಸ್ತಿ ಹೊಂದಿದ್ದರು ಎನ್ನಲಾಗಿದೆ. ಇವರಿಗೆ 5 ಜನ ಸಹೋದರಿಯರಿದ್ದು, ತುಮಕೂರಿನ ವಿದ್ಯಾನಗರದ ಮನೆಯಲ್ಲಿ ವಾಸವಾಗಿದ್ದಾರೆ. ಇದೀಗ ಸಹೋದರನ ಸಾವಿನ ನಂತರ ಆಸ್ತಿಯನ್ನು ಹೆಂಡತಿಗೆ ಕೊಡಬೇಕಾಗುತ್ತದೆ ಎಂದು ಸಹೋದರಿಯರು ಮನೆಯೊಳಗೆ ಸೇರಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಪತ್ನಿ ಮಂಜುಳಾ ಆರೋಪಿಸಿದ್ದಾರೆ. (ದಿಗ್ವಿಜಯ ನ್ಯೂಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts