More

    ಗಂಡನ ಕಳ್ಳಾಟವನ್ನು ಪೊಲೀಸರೆದುರೇ ಬಯಲು ಮಾಡಿದ ಹೆಂಡತಿ! ಮುಂದಾಗಿದ್ದು ಹೈ ಡ್ರಾಮ..

    ಭೋಪಾಲ್​: ಧರ್ಮಪತ್ನಿಯನ್ನು ಬಿಟ್ಟು ಬೇರೊಬ್ಬ ಹೆಂಗಸಿನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಗಂಡನಿಗೆ ಆತನ ಹೆಂಡತಿಯೇ ತಕ್ಕ ಪಾಠ ಕಲಿಸಿರುವ ಘಟನೆ ಮಧ್ಯಪ್ರದೇಶದ ಅಗರ್​ ಮಾಲ್ವಾ ಜಿಲ್ಲೆಯಲ್ಲಿ ನಡೆದಿದೆ. ಪೊಲೀಸರ ಸಮ್ಮುಖದಲ್ಲಿ ಹೈ ಡ್ರಾಮಾವೊಂದು ನಡೆದಿರುವುದಾಗಿ ಹೇಳಲಾಗಿದೆ.

    ಜಿಲ್ಲೆಯ ಹೆಂಡತಿಯೊಬ್ಬಳಿಗೆ ತನ್ನ ಗಂಡ ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ಅನುಮಾನವಿತ್ತಂತೆ. ಒಂದು ದಿನ ಗ್ರಾಮದ ಮನೆಯೊಂದರೊಳಗೆ ಗಂಡ ಮತ್ತು ಆತನೊಂದಿಗೆ ಇನ್ನೋರ್ವ ಮಹಿಳೆ ಇರುವುದನ್ನು ಕಂಡ ಹೆಂಡತಿ ತಕ್ಷಣ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾಳೆ. ಪೊಲೀಸರನ್ನು ಕರೆದುಕೊಂಡು ಬಂದು ಅವರ ಬಳಿಯೇ ಬಾಗಿಲು ತಟ್ಟುವಂತೆ ಹೇಳಿದ್ದಾಳೆ. ಬಾಗಿಲು ತೆರೆದಾಗ ಮಹಿಳೆಯ ಗಂಡ ಅಲ್ಲಿ ಬೇರೊಬ್ಬ ಹೆಂಗಸಿನೊಂದಿಗಿರುವುದು ಕಂಡುಬಂದಿದೆ.

    ಹೊರಬಂದ ಗಂಡನಿಗೆ ಮಹಿಳೆ ಸರಿಯಾಗಿ ಥಳಿಸಿದ್ದಾಳೆ. ಆತನೊಂದಿಗಿದ್ದ ಮಹಿಳೆಯ ಮೇಲೂ ಹಲ್ಲೆ ಮಾಡಿದ್ದಾಳೆ. ಮಹಿಳೆಯನ್ನು ಸಮಾಧಾನಪಡಿಸಿದ ಪೊಲೀಸರು ಎಲ್ಲರನ್ನು ಸ್ಟೇಷನ್​ಗೆ ಕರೆದೊಯ್ದು ಬುದ್ಧಿ ಹೇಳಿ ಕಳುಹಿಸಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್​)

    ಒಂದೇ ದಿನದಲ್ಲಿ ಮೂವರು ಯುವತಿಯರ ದಿಢೀರ್​ ನಾಪತ್ತೆ! ಒಂದೊಂದು ಪ್ರಕರಣವೂ ವಿಭಿನ್ನ

    6 ವಾರಗಳ ನಂತರ ಇಳಿದ ಸೋಂಕು ಸಂಖ್ಯೆ ; 1.73 ಲಕ್ಷ ಹೊಸ ಪ್ರಕರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts