More

    ಅತ್ತಾಗ ಮೂಗು ಸೋರುವುದು ಏಕೆ ಗೊತ್ತಾ? ಇಲ್ಲಿದೆ ನೋಡಿ ಶಾಕಿಂಗ್ ಸಂಗತಿ

    ಬೆಂಗಳೂರು: ಸಾಮಾನ್ಯವಾಗಿ ನಾವೆಲ್ಲಾ ಹಲವು ಸಂದರ್ಭಗಳಿಗೆ ಕಣ್ಣೀರಿಡುತ್ತೇವೆ. ಯಾರಾದರೂ ಸಾವನ್ನಪ್ಪಿದಾಗ, ಆತ್ಯಾಪ್ತರಿಗೆ ನೋವಾದಾಗ, ಮನಸ್ಸಿಗೆ ಘಾಸಿಯಾದಾಗ ಹೀಗೆ ಹಲವಾರು ವಿಷಯಗಳಿಗೆ ಕಂಬನಿ ಮಿಡಿಯುತ್ತೇವೆ. ಯಾವ ವೇಳೆ ಅತ್ತರು ಕೂಡ ನಮ್ಮ ಕಣ್ಣಿನಲ್ಲಿ ನೀರು ಬಂದರೆ, ತಕ್ಷಣವೇ ಮೂಗು ಸೋರುವುದು ಶುರುವಾಗುತ್ತದೆ. ಅಸಲಿಗೆ ಶೀತವೇನು ಆಗಿರುವುದಿಲ್ಲ! ಆದ್ರೂ ಸಹ ನೀರು ಬರುವುದು ಹೇಗೆ ಎಂಬ ಪ್ರಶ್ನೆ ಅನೇಕರಲ್ಲಿ ಕಾಡುವುದಂತು ನಿಜವೇ ಸರಿ.

    ಇದನ್ನೂ ಓದಿ: ಮಂಡ್ಯದಲ್ಲಿ ನಾಮಪತ್ರ ಸಲ್ಲಿಸಿದ ಎಚ್​ಡಿಕೆ! ಗೋವಾ ಸಿಎಂ ಪ್ರಮೋದ್ ಸಾವಂತ್ ಸಾಥ್​

    ಶೀತ, ನೆಗಡಿ ಸಮಸ್ಯೆಗಳು ಉಲ್ಬಣಗೊಂಡರೆ ಮೂಗು ಸೋರುತ್ತದೆ. ಅಥವಾ ಶೀತ ವೇಗವಾಗಿ ಆವರಿಸಿಕೊಳ್ಳುವಂತ ಪದಾರ್ಥಗಳನ್ನು ಸೇವಿಸಿದರೆ ಮೂಗಿನಿಂದ ನೀರು ಇಳಿಯುವುದು ಸಾಮಾನ್ಯ. ಆದರೆ, ನಾವು ಅತ್ತಾಗಲೆಲ್ಲಾ ಮೂಗು ಸೋರುವುದಕ್ಕೆ ಕಾರಣ ‘ಲ್ಯಾಕ್ರಿಮಲ್ ಪಂಕ್ಟಮ್’. ಹೌದು, ನೀವು ನಿಮ್ಮ ಕಣ್ಣನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದೇನು ಎಂಬುದು ತಿಳಿಯುತ್ತದೆ.

    ನಿಮ್ಮ ಕಣ್ಣಿನ ರೆಪ್ಪೆಯ ಕೆಳಭಾಗದಲ್ಲಿ ಒಂದು ಚಿಕ್ಕ ರಂಧ್ರವಿರುತ್ತದೆ. ಬಹುಶಃ ಇದನ್ನು ಅನೇಕರು ಗಮನಿಸಿರುವುದಿಲ್ಲ. ಗಮನಿಸಿದ್ದರೂ ಏನಿದು ಎಂದು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಿರುವುದಿಲ್ಲ. ಕಣ್ಣಿನ ಕೆಳಗಿರುವ ರಂಧ್ರವು, ನಿಮ್ಮ ಕಣ್ಣಿನಿಂದ ಹೊರಹೊಮ್ಮುವ ನೀರನ್ನು ಬರಿದಾಗಿಸಿ, ಅದನ್ನು ಮೂಗಿನ ನಾಳಕ್ಕೆ ಹರಿಸುತ್ತದೆ. ಇದರಿಂದಲೇ ಕಣ್ಣಲ್ಲಿ ನೀರು ಬಂದ ಕ್ಷಣವೇ, ಮೂಗಿನಿಂದ ಸೋರಿಕೆ ಶುರುವಾಗುತ್ತದೆ.

    2021ರಲ್ಲಿ ಮುಂಬೈ ಇಂಡಿಯನ್ಸ್​ ಬಿಟ್ಟಿದ್ದೂ ಇದೇ ಕಾರಣಕ್ಕೆ… ಮುಖಕ್ಕೆ ಹೊಡದಂಗೆ ಹೇಳಿದ್ರು ರವಿಶಾಸ್ತ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts