ವಿಜಯಪುರ: ಶಕ್ತಿ ದೇವತೆ ದ್ಯಾಬೇರಿಯ ವಾಗ್ದೇವಿ ದೇವಸ್ಥಾನದ ಗರ್ಭಗುಡಿಗೆ ಹೋಗಲು ಸಿಎಂ ಸಿದ್ದರಾಮಯ್ಯ ನಿರಾಕರಿಸಿದ್ದೇಕೆ? ಹೀಗೊಂದು ಜಿಜ್ಞಾಸೆ ಇದೀಗ ಭಕ್ತರ ಮನದಲ್ಲಿ ಕಾಡುತ್ತಿದೆ.
ಹೌದು, ಮಂಗಳವಾರ ನಾಗಠಾಣ ವಿಧಾನ ಸಭೆ ಕ್ಷೇತ್ರದ, ವಿಜಯಪುರ ತಾಲೂಕಿನ ದ್ಯಾಬೇರಿ (ದೇವಿಪುರ) ಗ್ರಾಮದಲ್ಲಿ ಶ್ರೀ ವಾಗ್ದೇವಿ ಸೇವಾ ಸಮಿತಿಯಿಂದ ದೇವಸ್ಥಾನದ ನೂತನ ಕಟ್ಟಡಗಳ ಉದ್ಘಾಟನೆ, ಮೂರ್ತಿ ಪ್ರಾಣ ಪ್ರತಿಷ್ಟಾಪನೆ ಹಾಗೂ ಕಳಸಾರೋಹಣ ಸಮಾರಂಭ ಆಯೋಜಿಸಲಾಗಿತ್ತು. ಸಿಎಂ ಸಿದ್ದರಾಮಯ್ಯ ಉದ್ಘಾಟನೆ ನೆರವೇರಿಸಲು ಆಗಮಿಸಿದ್ದರು. ಈ ವೇಳೆ ದೇವಸ್ಥಾನದ ಗರ್ಭಗುಡಿವರೆಗೂ ಬಂದ ಸಿದ್ದರಾಮಯ್ಯ ಗರ್ಭಗುಡಿ ಹೊರಗಡೆಯೇ ನಿಂತರು. ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಗರ್ಭಗುಡಿಗೆ ಆಹ್ವಾನ ನೀಡಿದರೂ ನಿರಾಕರಿಸಿದ ಸಿಎಂ ಸಿದ್ದರಾಮಯ್ಯ ಹೊರಗಡೆ ನಿಂತುಕೊಂಡೇ ಆರತಿ ಬೆಳಗುವಂತೆ ಪೂಜಾರಿಗಳಿಗೆ ತಿಳಿಸಿದರು. ಬಳಿಕ ಎಂ.ಬಿ. ಪಾಟೀಲರನ್ನು ಕಳುಹಿಸಿ ತಮ್ಮ ಪರ ಪುಷ್ಪ ಸಮರ್ಪಿಸಲು ತಿಳಿಸಿದರು.
ಸದ್ಯ ಸಿದ್ದರಾಮಯ್ಯ ಪರವಾಗಿ ಎಂ.ಬಿ. ಪಾಟೀಲ ಪುಷ್ಪ ಸಮರ್ಪಿಸಿದ ಮತ್ತು ಸಿಎಂ ಸಿದ್ದರಾಮಯ್ಯ ದೇವಸ್ಥಾನ ಪ್ರವೇಶಿಸದ ವಿಡಿಯೋ ದೃಶ್ಯಾವಳಿಗಳು ವ್ಯಾಪಕವಾಗಿ ಹರಿದಾಡುತ್ತಿದ್ದು, ಸಿದ್ದರಾಮಯ್ಯನವರೇಕೆ ಗರ್ಭಗುಡಿ ಪ್ರವೇಶಿಸಲಿಲ್ಲ? ಈ ಹಿಂದೆ ಮಾಂಸಾಹಾರ ಸೇವಿಸಿ ದೇವಸ್ಥಾನ ಪ್ರವೇಶಿಸಿದ್ದರೆ? ಅದೇ ಕಾರಣಕ್ಕೆ ಹೊರಗೆ ನಿಂತರೇ? ಹಾಗೊಂದು ವೇಳೆ ಮಾಂಸಾಹಾರ ಸೇವಿಸಿದ್ದರೂ ವಾಗ್ದೇವಿಗೆ ಪ್ರಾಣಿ ಬಲಿ ಕೊಡಲಾಗುತ್ತದೆ, ಅದಕ್ಕೇನು ಸಂಬಂಧ? ವಿಷಯ ಅದಲ್ಲವಾದರೆ ಸಿದ್ದರಾಮಯ್ಯ ಹೊರಗಡೆ ನಿಂತಿದ್ದೇಕೆ? ಎಂಬ ಚರ್ಚೆ ಶುರುವಾಗಿದೆ.
ಮೋಸ್ಟ್ ವಾಂಟೆಡ್ ಉಗ್ರ ಮಸೂದ್ ಅಜರ್ ನಿಜವಾಗ್ಲೂ ಸತ್ತಿದ್ದಾನೆಯೇ? ಇಲ್ಲಿದೆ ಅಸಲಿ ಸಂಗತಿ…
ಮೆಟಾವರ್ಸ್ ವಿಡಿಯೋ ಗೇಮ್ನಲ್ಲಿ ಯುವತಿ ಮೇಲೆ ಅತ್ಯಾಚಾರ: ಸಂತ್ರಸ್ತೆ ಹೇಳಿಕೆ ಕೇಳಿ ಪೊಲೀಸರೇ ಶಾಕ್