More

    ಗುತ್ತಿಗೆದಾರ ಸಂತೋಷ್ ಉಡುಪಿಗೆ ಬಂದಿದ್ದೇಕೆ?; ಉದ್ದೇಶ ಏನಿತ್ತು?

    ಉಡುಪಿ: ಸಚಿವ ಈಶ್ವರಪ್ಪ ವಿರುದ್ಧ ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ಗುತ್ತಿಗೆದಾರ ಸಂತೋಷ್ ವಿಚಾರ ಇದೀಗ ರಾಜಕೀಯ ಹಾಗೂ ಸಾಮಾಜಿಕವಾಗಿ ಭಾರಿ ಚಾಲ್ತಿಯಲ್ಲಿದ್ದು, ಅಷ್ಟಕ್ಕೂ ಸಂತೋಷ್ ಉಡುಪಿಗೆ ಬಂದಿದ್ದೇಕೆ ಎಂಬ ವಿಷಯವೊಂದು ಕುತೂಹಲ ಕೆರಳಿಸಿದೆ.

    ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್​, ಸ್ನೇಹಿತರೊಂದಿಗೆ ಉಡುಪಿಗೆ ಬಂದು ಉಡುಪಿಯ ಕೆಎಸ್ಆರ್​ಟಿಸಿ ಬಸ್ ನಿಲ್ದಾಣ ಸಮೀಪದ ಶಾಂಭವಿ ಹೋಟೆಲ್ಸ್ ಬೋರ್ಡಿಂಗ್ ಆ್ಯಂಡ್ ಲಾಡ್ಜಿಂಗ್​ನ ರೂಂ ನಂಬರ್ 207ರಲ್ಲಿ ಸಂತೋಷ್​ ಶವವಾಗಿ ಪತ್ತೆಯಾಗಿದ್ದಾರೆ.

    ಆದರೆ ಸಂತೋಷ್ ಉಡುಪಿಗೆ ಬಂದಿದ್ದು ಏಕೆ ಎಂಬ ಕುರಿತು ಇದೀಗ ಹಲವರಲ್ಲಿ ಕುತೂಹಲ ಮೂಡಿಸಿದೆ. ಸೋಮವಾರ-ಮಂಗಳವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉಡುಪಿ ಪ್ರವಾಸದಲ್ಲಿದ್ದರು. ಈ ಸಂದರ್ಭದಲ್ಲಿ ಸಿಎಂ ಅವರನ್ನು ಭೇಟಿಯಾಗಿ ತಮ್ಮ ಬಾಕಿ ಹಣ ಪಾವತಿ ಕುರಿತು ಬೇಡಿಕೆ ಇಡಲು ಬಂದಿದ್ದರು. ಆದರೆ ಸಿಎಂ ಭೇಟಿ ಸಾಧ್ಯವಾಗದ್ದರಿಂದ ಲಾಡ್ಜ್​ನಲ್ಲಿ ತಂಗಿರುವ ಸಾಧ್ಯತೆ ಇದ್ದು, ಬಳಿಕ ಮಾನಸಿಕ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ. ಇನ್ನು ಸಂತೋಷ್ ಈ ಹಿಂದೆಯೂ ಬಾಕಿ ಹಣ ಪಾವತಿ ವಿಚಾರವನ್ನು ಮುಖ್ಯಮಂತ್ರಿ ಗಮನಕ್ಕೆ ತಂದಿದ್ದರು.

    ಆಟವಾಡುತ್ತಿದ್ದಾಗ ಮಹಡಿಯಿಂದ ಕೆಳಕ್ಕೆ ಬಿದ್ದು ನಾಲ್ಕು ವರ್ಷದ ಮಗು ಸಾವು!

    ರೌಡಿಯ ಹೆಂಡ್ತಿಗೇ ಮೆಸೇಜ್ ಮಾಡ್ತಿದ್ದ ಕಿಡಿಗೇಡಿ!; ಬಳಿಕ ರಸ್ತೆಯಲ್ಲಿದ್ದ ವಾಹನಗಳ ಗಾಜು ಪುಡಿಪುಡಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts