More

    ಉಗ್ರ ಸಲಾಲುದ್ದೀನ್ ಮನೆ ಮೇಲೆ ಗ್ರೆನೇಡ್ ದಾಳಿ ನಡೆದರೂ, ಎಫ್​ಐಆರ್​ನಲ್ಲಿ ಸಿಲಿಂಡರ್ ಸ್ಫೋಟ ಆಗಿದ್ದೇಕೆ?

    ನವದೆಹಲಿ: ತಿರುಗಿಬಿದ್ದ ಪ್ರತ್ಯೇಕತಾವಾದಿಗಳನ್ನು ಮಟ್ಟಹಾಕಲು ಐಎಸ್​ಐ ಸಾಕಷ್ಟು ಪ್ರಯತ್ನವನ್ನೂ ಮಾಡಿದೆ. ಪಾಕ್ ಆಕ್ರಮಿತ ಕಾಶ್ಮೀರದ ಪ್ರಧಾನಿ ರಾಜಾ ಫಾರೂಕ್ ಹೈದರ್​ ಪರ ಒಲವುಳ್ಳ ಗುಂಪಿನ ಸದಸ್ಯ ಹಿಜ್ಬುಲ್ ಮುಜಾಹಿದ್ದೀನ್​ ಮುಖ್ಯಸ್ಥ ಸೈಯದ್ ಸಲಾಲುದ್ದೀನ್ ಮನೆ ಮೇಲೆ ಹ್ಯಾಂಡ್​ ಗ್ರೆನೇಡ್ ದಾಳಿ ನಡೆಸುವ ಮೂಲಕ ಐಎಸ್​ಐ ಎಚ್ಚರಿಕೆ ಸಂದೇಶ ರವಾನಿಸಿತ್ತು. ಈ ದಾಳಿ ಮೇ ತಿಂಗಳಲ್ಲಿ ನಡೆದಿತ್ತು.

    ಸೈಯದ್​ ಸಲಾಲುದ್ದೀನ್ ಜಾಗತಿಕವಾಗಿ ಮೋಸ್ಟ್ ವಾಂಟೆಡ್​ ಉಗ್ರ. ಕಾಶ್ಮೀರ ಭಾಗದಲ್ಲಿನ ಉಗ್ರ ಚಟುವಟಿಕೆಗೆ ಈತನ ಕುಮ್ಮಕ್ಕು ಇದ್ದೇ ಇದೆ. ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸವಲತ್ತಿನ ಆರ್ಟಿಕಲ್ 370 ಅನ್ನು ಭಾರತ ಸರ್ಕಾರ ಕಳೆದ ವರ್ಷ ರದ್ದುಗೊಳಿಸಿದ ವೇಳೆ, ಸಲಾಲುದ್ದೀನ್ ನಿಷ್ಕ್ರಿಯನಾಗಿದ್ದ ಅಥವಾ ಆತನಿಂದ ಏನೂ ಮಾಡಲು ಸಾಧ್ಯವಾಗದೇ ಹೋಯಿತು. ಪರಿಸ್ಥಿತಿ ಸಂಪೂರ್ಣವಾಗಿ ಭಾರತದ ಹಿಡಿತದಲ್ಲಿತ್ತು. ಇದು ಐಎಸ್​ಐಗೆ ಅಸಾಧ್ಯವಾದ ಕಿರಿಕಿರಿಯನ್ನು ಉಂಟುಮಾಡಿತ್ತು.

    ಇದನ್ನೂ ಓದಿ:  ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿಗಳಿಗೆ ಮಗ್ಗುಲ ಮುಳ್ಳಾಗತೊಡಗಿವೆ ಚೀನಾ, ಪಾಕ್​

    ಸಲಾಲುದ್ದೀನ್​ನ ಈ ನಿಷ್ಕ್ರಿಯತೆ ಮತ್ತು ಭಿನ್ನಮತ ಐಎಸ್​ಐಗೆ ಗಂಟಲಲ್ಲಿ ಸಿಕ್ಕ ಬಿಸಿ ತುಪ್ಪದಂತಾಗಿತ್ತು. ಹೀಗಾಗಿಯೇ ಮೇ ತಿಂಗಳಲ್ಲಿ ಆತನನ್ನು ಎಚ್ಚರಿಸುವ ಸಲುವಾಗಿ ಇಸ್ಲಾಮಾಬಾದಿನಲ್ಲಿರುವ ಆತನ ಮನೆ ಮೇಲೆ ಹ್ಯಾಂಡ್ ಗ್ರೆನೇಡ್ ದಾಳಿ ಸಂಘಟಿಸಿತ್ತು. ಆದಾಗ್ಯೂ, ಪೊಲೀಸರು ಈ ದಾಳಿಯನ್ನು ಅಡುಗೆ ಸಿಲಿಂಡರ್ ಸ್ಫೋಟ ಎಂದು ದಾಖಲಿಸಿಕೊಂಡು ಕೇಸ್ ಕ್ಲೋಸ್ ಮಾಡಿದ್ದಾರೆ. ಐಎಸ್​ಐ ನಂಬಿಕೆ ಕಳೆದುಕೊಂಡಿದೆ ಎಂದು ಸೈಯದ್ ಸಲಾಲುದ್ದೀನ್​ಗೆ ಕೊಟ್ಟ ನೇರ ಎಚ್ಚರಿಕೆ ಇದಾಗಿತ್ತು.

    ಈ ಬೆಳವಣಿಗೆ ಮರೆಯಾಗುತ್ತಲೇ ಕಾಶ್ಮೀರದಲ್ಲೊಂದು ಬೆಳವಣಿಗೆ ಗಮನಸೆಳೆಯಿತು. ಹುರಿಯತ್ ಕಾನ್ಫರೆನ್ಸ್​ನ ಹಿರಿಯ ನಾಯಕ ಗೀಲಾನಿ, ರಾಜೀನಾಮೆ ಪ್ರಹಸನ ಅದು. ತಾನು ವೇದಿಕೆಯ ಮುಂಚೂಣಿಯಿಂದ ಹಿಂದೆ ಸರಿಯುತ್ತಿರುವುದಾಗಿ ಆತ ಘೋಷಿಸಿದ್ದರು. ಆತನ ಈ ನಡೆಯ ಹಿನ್ನೆಲೆಯಲ್ಲಿ ಬಹುದೊಡ್ಡ ಸಮರವೇ ನಡೆದಿದೆ ಎಂಬುದು ಒಳಸುಳಿ.

    ಐಎಸ್​ಐ ವಿರುದ್ಧವೇ ತಿರುಗಿ ಬಿದ್ದಿದ್ದಾರೆ ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts