ಬೆಂಗಳೂರು: ಕನ್ನಡ ಚಿತ್ರರಂಗದ ಪ್ರತಿಭಾವಂತ ಹಿರಿಯ ನಟ ಅಶ್ವತ್ಥ್ ಯಾರಿಗೆ ಗೊತ್ತಿಲ್ಲ ಹೇಳಿ.. ಪೋಷಕ ಕಲಾವಿದರಾಗಿ ಅವರು ನಟಿಸಿದ್ದ ಹಲವಾರು ಪಾತ್ರಗಳು ಇಂದಿಗೂ ಸಿನಿಪ್ರಿಯರ ಮನಸಲ್ಲಿ ಅಚ್ಚಳಿಯದೇ ಉಳಿದಿವೆ. ಅಂಥ ಮಹಾನ್ ನಟ ಅವರು.
ಹೌದು.. ಈಗ ಪ್ರಸ್ತಾಪಿಸುತ್ತಿರುವುದು ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ರಾಮಾಚಾರಿ’ ಚಿತ್ರದಲ್ಲಿ ಚಾಮಯ್ಯ ಮೇಷ್ಟ್ರ ಪಾತ್ರ ಮಾಡಿದ್ದ ಅದೇ ಅಶ್ವತ್ಥ್ ಅವರ ಕುರಿತು. ಅಂಥ ಹಲವಾರು ಪಾತ್ರಗಳನ್ನು ಮಾಡಿದ್ದ ಅವರು ಇಂದಿಗೂ ತಮ್ಮ ಆ ಪಾತ್ರಗಳಿಂದಾಗಿ ಜನರ ಮನಸಲ್ಲಿ ಜೀವಂತವಿದ್ದಾರೆ.
ಹಾಗಂತ ಅವರು ಆರಂಭದಿಂದಲೇ ಪೋಷಕ ನಟರಾಗಿ ಬಂದವರಲ್ಲ. ನಾಯಕನಾಗಿ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರೂ ಪೋಷಕ ನಟರಾಗಿದ್ದೇಕೆ ಎಂಬ ಬಗ್ಗೆ ಹಲವರಿಗೆ ಕುತೂಹಲ ಇದ್ದಿರಬಹುದು. ಅದನ್ನು ಹೇಳಲು ಅವರ ಪುತ್ರ ಶಂಕರ್ ಅಶ್ವತ್ಥ್ ಮುಂದಾಗಿದ್ದಾರೆ.
ಇದನ್ನೂ ಓದಿ: ‘ಇವತ್ತು ಹುಟ್ಟಿದ ದಿನ, ಬೇಡ..’ ಎಂದರೂ ಕೇಳದೆ ಮನೆಯಿಂದ ಹೋದಳು: ಜನ್ಮದಿನವೇ ಸಾವಿನ ದಿನವಾಯ್ತು!
‘ನಾಯಕನಾಗೇ ಕನ್ನಡ ಚಿತ್ರರಂಗಕ್ಕೆ ಬಂದು ಕೆಲವೇ ವರ್ಷಗಳಲ್ಲಿ ಪೋಷಕ ನಟ ಆಗಿದ್ದು ಹೇಗೆ ಯಾಕೆ? ಯಾರದ್ದಾದರೂ ಕೈವಾಡ ಅಥವಾ ಪವಾಡ ನಡೀತಾ ಏನು?’ ಎಂಬ ಕ್ಯಾಪ್ಷನ್ನೊಂದಿಗೆ ಅವರು ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಆ ಮೂಲಕ ತಮ್ಮ ತಂದೆಯ ಕುರಿತ ಒಂದು ರಹಸ್ಯವನ್ನು ತಿಳಿಸಲಿರುವುದಾಗಿ ಹೇಳಿಕೊಂಡಿದ್ದಾರೆ.
ಅವರ ವಿಡಿಯೋದಲ್ಲಿನ ಮಾತುಗಳು ಹೀಗಿವೆ..
‘ನಮಸ್ಕಾರ.. ಒಂದು ಒಳಗಿನ ರಹಸ್ಯವನ್ನು ತಮ್ಮ ಮುಂದೆ ಹೇಳಬೇಕು ಎಂದು ಇಷ್ಟಪಡುತ್ತಿದ್ದೇನೆ. 50ರ ದಶಕದಲ್ಲೇ ನನ್ನ ತಂದೆ ಚಿತ್ರರಂಗಕ್ಕೆ ನಾಯಕನಾಗಿ ಬಂದು, ನಾಲ್ಕೈದು ಚಿತ್ರಗಳಲ್ಲಿ ನಾಯಕನಾಗೇ ಅಭಿನಯಿಸಿ, ಅಂದಿನ ಘಟಾನುಘಟಿ ನಾಯಕಿಯರಾದ ಸಂಧ್ಯಾ, ಬಿ.ಸರೋಜಾದೇವಿ ಇಂಥವರ ಜೊತೆಯೆಲ್ಲ ನಾಯಕ ಪಾತ್ರದಲ್ಲೇ ಅಭಿನಯಿಸಿ ಕೆಲವೇ ವರ್ಷಗಳಲ್ಲಿ ಪೋಷಕ ಕಲಾವಿದರಾದರು, ಯಾಕೆ?
ತಿಳ್ಕೊಳೋದಕ್ಕೆ ಇಷ್ಟ ಇದ್ರೆ ಯೆಸ್ ಅಂತ ಕಮೆಂಟ್ ಮಾಡಿ.. ಧನ್ಯವಾದ..’
ಇದನ್ನೂ ಓದಿ: ಪ್ರೀತಿಸುವ ನಾಟಕ, ಐದೇ ತಿಂಗಳಲ್ಲಿ ಲಿವಿಂಗ್ ಟುಗೆದರ್; ಅವಳಾಗುತ್ತಿದ್ದಂತೆ ಗರ್ಭಿಣಿ, ಇವನು ಪರಾರಿ…
ಕೆಲವು ಗಂಟೆಗಳ ಹಿಂದಷ್ಟೇ ಅವರು ಈ ವಿಡಿಯೋ ಹಾಕಿಕೊಂಡಿದ್ದು, ಅದನ್ನು ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ಮಾತ್ರವಲ್ಲ ನೂರಾರು ಮಂದಿ ಯೆಸ್ ಎಂದು ಕಮೆಂಟ್ ಕೂಡ ಮಾಡಿದ್ದಾರೆ. ಹಾಗಾದರೆ ಶಂಕರ್ ಅವರು ಅಶ್ವತ್ಥ್ ಕುರಿತು ಹೇಳಲಿರುವ ರಹಸ್ಯ ಯಾವುದು, ಅದನ್ನು ಹೇಳುತ್ತಾರಾ ಎಂಬ ಕುತೂಹಲ ಹಲವರಲ್ಲಿ ಕೆರಳಿದೆ.
ಶಂಕರ್ ಅಶ್ವತ್ಥ್ ಮಾತನಾಡಿರುವ ವಿಡಿಯೋ ಲಿಂಕ್: https://fb.watch/aJUqqj-Lgi/
ರಾಜ್ಯದ ಜಿಲ್ಲಾ ಉಸ್ತುವಾರಿಯಲ್ಲಿ ಹಠಾತ್ ಬದಲಾವಣೆ: ನಿಮ್ಮ ಜಿಲ್ಲೆಗೆ ಯಾವ ಸಚಿವರು? ಇಲ್ಲಿದೆ ನೋಡಿ ಪಟ್ಟಿ…