More

    ಉಪ್ಪಿ ಕಬ್ಜ ಚಿತ್ರಕ್ಕೆ ನಾಯಕಿ ಯಾರು!; ನಿರ್ದೇಶಕ ಆರ್. ಚಂದ್ರು ಸ್ಪಷ್ಟನೆ

    ಬೆಂಗಳೂರು: ಕಳೆದ ಒಂದು ತಿಂಗಳಿನಿಂದ ಉಪೇಂದ್ರ ಅಭಿನಯದ ‘ಕಬ್ಜ’ ಚಿತ್ರದ ಚಿತ್ರೀಕರಣ ಸತತವಾಗಿ ನಡೆಯುತ್ತಿದ್ದು, ಈ ತಿಂಗಳ ಕೊನೆಯ ಹೊತ್ತಿಗೆ, ಬಹುತೇಕ ಚಿತ್ರೀಕರಣ ಮುಗಿದಂತಾಗುತ್ತದೆ. ಆದರೂ ಚಿತ್ರದ ನಾಯಕಿಯ ಆಯ್ಕೆ ಇನ್ನೂ ಅಂತಿಮವಾಗಿಲ್ಲ. ಈ ಮೊದಲು ಚಿತ್ರಕ್ಕೆ ಕಾಜಲ್ ಅಗರ್​ವಾಲ್ ನಾಯಕಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ, ಆ ಜಾಗಕ್ಕೆ ಆಶಾ ಭಟ್ ಬರುವ ಸಾಧ್ಯತೆ ಇದೆ ಎಂದು ಕಳೆದೆರೆಡು ದಿನಗಳಿಂದ ಸುದ್ದಿ ಕೇಳಿ ಬರುತ್ತಲೇ ಇದೆ.

    ‘ರಾಬರ್ಟ್’ ಚಿತ್ರದ ಯಶಸ್ಸಿನ ನಂತರ ಆಶಾ ಭಟ್​ಗೆ ಸಹಜವಾಗಿಯೇ ಕನ್ನಡ ಚಿತ್ರರಂಗದಲ್ಲಿ ಆಫರ್​ಗಳು ಹೆಚ್ಚಿವೆ. ಆದರೆ, ಇದುವರೆಗೂ ಆಶಾ ಯಾವೊಂದು ಸಿನಿಮಾ ಸಹ ಒಪ್ಪಿಕೊಂಡಿಲ್ಲ. ಆಶಾ ಭಟ್ ಮುಂದಿನ ನಡೆ ಏನಿರಬಹುದು ಎಂಬ ಕುತೂಹಲ ಸಹಜವಾಗಿಯೇ ಎಲ್ಲರಲ್ಲೂ ಇದೆ. ಈ ಮಧ್ಯೆ, ‘ಕಬ್ಜ’ ಚಿತ್ರದಲ್ಲಿ ಆಶಾ ನಟಿಸುವ ಸಾಧ್ಯತೆ ಇದೆ ಎಂಬ ಸುದ್ದಿಯೊಂದು ಗಾಂಧಿನಗರದಲ್ಲಿ ಕೇಳಿಬಂದಿದ್ದು, ಈ ಸುದ್ದಿಯನ್ನು ನಿರ್ದೇಶಕ ಆರ್. ಚಂದ್ರು ಅಲ್ಲಗೆಳೆದಿದ್ದಾರೆ.ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಅವರು. ‘ನಮ್ಮ ಚಿತ್ರಕ್ಕೆ ನಾಯಕಿಯ ಆಯ್ಕೆ ಇನ್ನೂ ಅಂತಿಮವಾಗಿಲ್ಲ. ಸದ್ಯ ನಾಯಕಿ ವಿಚಾರದಲ್ಲಿ ಕೇಳಿಬರುತ್ತಿರುವ ಸುದ್ದಿ ಸುಳ್ಳಾಗಿದ್ದು, ಆದಷ್ಟು ಬೇಗ ಚಿತ್ರದ ನಾಯಕಿ ಯಾರು ಎಂಬ ವಿಷಯವನ್ನು ನಾನೇ ಖುದ್ಧಾಗಿ ಪ್ರಕಟಿಸುತ್ತೇನೆ’ ಎಂದು ಹೇಳಿದ್ದಾರೆ. ‘ಕಬ್ಜ’ ಚಿತ್ರಕ್ಕಾಗಿ ಮಿನರ್ವ ಮಿಲ್​ನಲ್ಲಿ 40ಕ್ಕೂ ಹೆಚ್ಚು ಸೆಟ್​ಗಳನ್ನು ನಿರ್ವಿುಸಲಾಗಿದ್ದು, ಚಿತ್ರೀಕರಣ ಪ್ರಗತಿಯಲ್ಲಿದೆ. ಸದ್ಯದಲ್ಲೇ ಸುದೀಪ್ ಅವರು ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದು, ನಾಯಕಿಯ ಎಂಟ್ರಿ ಸಹ ಇದೇ ಹಂತದ ಚಿತ್ರೀಕರಣದಲ್ಲಿ ಆಗಲಿದೆ ಎಂದು ಹೇಳಲಾಗುತ್ತಿದೆ.

    ರಾಜ್ಯದ ಹಲವೆಡೆ ಹತ್ತು ದಿನ ನೈಟ್ ಕರ್ಫ್ಯೂ; ನಿಯಮ ಪಾಲಿಸದಿದ್ದರೆ ಮುಂದಿದೆ ಲಾಕ್​ಡೌನ್​!?

    ಕರೊನಾ ಪರೀಕ್ಷೆಗೆ 200 ರೂ. ಪಡೆದ ಸರ್ಕಾರಿ ಆಸ್ಪತ್ರೆ ಡಾಕ್ಟರ್​; ಕೋಣನಕುಂಟೆ ಪಿಎಚ್‌ಸಿಯಲ್ಲಿ ಭ್ರಷ್ಟಾಚಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts