More

    ಆಫ್ಘಾನ್​ ವಿರುದ್ಧ ಸೋಲು: ಮೈದಾನದಲ್ಲಿ ಪಾಕ್​ ಆಲ್​ರೌಂಡರ್​ ಇಫ್ತಿಕರ್​ ನಡೆ ಕಂಡು ತಬ್ಬಿಬ್ಬಾದ ಫ್ಯಾನ್ಸ್​! ವಿಡಿಯೋ ವೈರಲ್​​

    ನವದೆಹಲಿ: ಸೋಮವಾರ (ಅ.23) ನಡೆದ ವಿಶ್ವಕಪ್​ ಪಂದ್ಯದಲ್ಲಿ ಬಲಿಷ್ಠ ಪಾಕಿಸ್ತಾನ ತಂಡದ ವಿರುದ್ಧ ಅಫ್ಘಾನಿಸ್ತಾನ ಅಮೋಘ ಜಯದಾಖಲಿಸಿರುವುದು ಹಲವರ ಹುಬ್ಬೇರಿಕೆ ಕಾರಣವಾದರೆ, ಪಾಕ್​ ಕ್ರೀಡಾಭಿಮಾನಿಗಳಿಗೆ ಭಾರೀ ಮುಖಭಂಗವಾಗಿದೆ. ಇದರ ನಡುವೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅದನ್ನು ನೋಡಿ ಕ್ರೀಡಾಭಿಮಾನಿಗಳು ತಬ್ಬಿಬ್ಬಾಗಿದ್ದಾರೆ.

    ವಿಡಿಯೋದಲ್ಲಿ ಪಾಕಿಸ್ತಾನಿ ಆಲ್​ರೌಂಡರ್​ ಇಫ್ತಿಕರ್​ ಅಹ್ಮದ್ ಮೈದಾನದಲ್ಲೇ ಯಾರೊಂದಿಗೋ ಮಾತನಾಡುತ್ತಿರುವ ದೃಶ್ಯವಿದೆ. ಆದರೆ, ಅವರು ಯಾರೊಂದಿಗೆ ಮಾತನಾಡುತ್ತಿದ್ದಾರೆ ಎಂಬುದು ವಿಡಿಯೋದಲ್ಲಿ ಗೋಚರವಾಗಿಲ್ಲ. ನೋಡುಗರಿಗೆ ಇಫ್ತಿಕರ್​, ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಅನಿಸುತ್ತದೆ. ಸದ್ಯ ವಿಡಿಯೋ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದು, ಇಫ್ತಿಕರ್​, ಯಾರೊಂದಿಗೆ ಮಾತನಾಡುತ್ತಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ.

    ವಿಡಿಯೋವನ್ನು ತಮ್ಮ ಫ್ರೆಂಡ್ಸ್​ ಗ್ರೂಪ್​ಗಳಲ್ಲಿ ಶೇರ್​ ಮಾಡಿಕೊಳ್ಳುತ್ತಿರುವ ಅಭಿಮಾನಿಗಳು ಇಫ್ತಿಕರ್​, ಯಾರೊಂದಿಗೆ ಮಾತನಾಡುತ್ತಿದ್ದಾರೆ ಎಂಬುದನ್ನು ವಿವರಿಸುವಂತೆ ಕೇಳಿದ್ದಾರೆ. ಆದರೆ, ಈ ನಿಗೂಢತೆಯನ್ನು ಪರಿಹರಿಸಲು ಯಾವುದೇ ಒಂದು ಸಣ್ಣ ಸುಳಿವು ಕೂಡ ಇಲ್ಲ. ನಿಮಗೇನಾದರೂ ಗೊತ್ತಾದರೆ ಕಾಮೆಂಟ್​ ಮೂಲಕ ನಮಗೆ ತಿಳಿಸಿ.

    ಪಂದ್ಯದ ನಂತರ ಸೋಲಿನ ಬಗ್ಗೆ ಮಾತನಾಡಿದ ಇಫ್ತಿಕರ್​, ಪಾಕಿಸ್ತಾನದ ಸ್ಪಿನ್ನರ್​ಗಳು ವಿಶ್ವಕಪ್​ನಲ್ಲಿ ಈವರೆಗೂ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಿಲ್ಲ ಎಂದು ಅಸಮಾಧಾನ ಹೊರಹಾಕಿದರು. ನಾನು ಮತ್ತು ನವಾಜ್ ಸೇರಿದಂತೆ ನಮ್ಮ ತಂಡದಲ್ಲಿ ಫಿಂಗರ್ ಸ್ಪಿನ್ನರ್‌ಗಳಿದ್ದಾರೆ. ಹೌದು, ನಮ್ಮ ತಂಡದ ಸ್ಪಿನ್ನರ್​ಗಳ ಪಾತ್ರ ಇಲ್ಲಿ ಪರಿಣಾಮಕಾರಿಯಾಗಿಲ್ಲ. ಆದರೆ ನಾವು ಸುಧಾರಿಸಲು ಪ್ರಯತ್ನಿಸುತ್ತಲೇ ಇರುತ್ತೇವೆ ಎಂದರು.

    ನಾವು ಕ್ಷೇತ್ರ ರಕ್ಷಣೆ ಸಮಯದಲ್ಲಿ ಸಾಕಷ್ಟು ತಪ್ಪುಗಳನ್ನು ಮಾಡಿದ್ದೇವೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ, ನಾವು ಸುಧಾರಿಸಬೇಕಿದೆ. ಈಗ ನಮ್ಮಲ್ಲಿರುವ ಏಕೈಕ ಆಯ್ಕೆ ಇದೊಂದೆ ಆಗಿದೆ. ನೀವು ವಿಶ್ವ ದರ್ಜೆಯ ತಂಡದ ವಿರುದ್ಧ ಆಡುತ್ತಿದ್ದರೆ, ನೀವು ಎಲ್ಲ ವಿಭಾಗಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಬೇಕು. ಆಗ ಮಾತ್ರ ನೀವು ಆಟದಲ್ಲಿ ಉಳಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

    ಪಾಕಿಸ್ತಾನ ಹ್ಯಾಟ್ರಿಕ್​ ಸೋಲಿನಿಂದ ಕಂಗೆಟ್ಟಿದ್ದು, ಸೆಮಿಸ್​ ಪ್ರವೇಶಿಸಲು ಉಳಿದ ಎಲ್ಲ ಪಂದ್ಯಗಳನ್ನು ದಾಖಲೆ ಅಂತರದಲ್ಲಿ ಗೆಲ್ಲಲ್ಲೇಬೇಕಾದ ಅನಿವಾರ್ಯತೆಯನ್ನು ಸೃಷ್ಟಿ ಮಾಡಿಕೊಂಡಿದೆ. (ಏಜೆನ್ಸೀಸ್​)

    ದಸರಾ ಗಜಪಡೆ ತೂಕದಲ್ಲಿ ಈ ಬಾರಿಯೂ ಮಾಜಿ ಕ್ಯಾಪ್ಟನ್ ಅರ್ಜುನನೇ ಬಲಶಾಲಿ! ಅಭಿಮನ್ಯು ತೂಕವೆಷ್ಟು?

    ಹುಲಿ ಉಗುರು ಪ್ರಕರಣ: ಪ್ರಭಾವಿಗಳಿಗೆ ಎದುರಾಯ್ತಾ ಸಂಕಷ್ಟ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts