More

    ಹಿರಿಯರಲ್ಲದವರು ಯಾರು?

    ಸಾಮಾನ್ಯವಾಗಿ ನಾವು ವಯಸ್ಸು ಹೋದವರು, ತಲೆನಡುಗಿ ನೆರೆತೆರೆಹೆಚ್ಚಿ ಕೋಲು ಹಿಡಿದವರು, ಒಂದು ಮಾತನಾಡುವಲ್ಲಿ ಒಂಬತ್ತನಾಡುವವರು ಮೊದಲಾದವರನ್ನು ಹಿರಿಯರು ಎಂದು ತಿಳಿದಿದ್ದೇವೆ. ಇದನ್ನೇ ಅಲ್ಲಮ ಪ್ರಭುಗಳ ಭಾಷೆಯಲ್ಲಿ ಕೇಳಿ, ಹಿರಿಯರು ಅಲ್ಲದವರು ಯಾರು? ಎಂಬುದನ್ನು ಹೇಳುತ್ತಾರೆ: ‘ಆದ್ಯರಲ್ಲ ವೇದ್ಯರಲ್ಲ ಸಾಧ್ಯರಲ್ಲದ ಹಿರಿಯರ ನೋಡಾ/ತನುವಿಕಾರ ಮನವಿಕಾರ ಇಂದ್ರೀಯ ವಿಕಾರ ಹಿರಿಯರು ನೋಡಾ| ಶಿವಜ್ಞಾನ ಶಿವಚಿಂತೆವುಳ್ಳವರ ಕಂಡಡೆ ಅಳವಾಡಿ ನುಡಿಯುವರು/ ಗುಹೇಶ್ವರನರಿಯದ ಕರ್ವಿುಗಳು’. ಆದ್ಯರು-ಅಂದರೆ ಶಿವನ ಅರಿವನ್ನು ಜನ್ಮದೊಂದಿಗೆ ಹೊತ್ತು ಬಂದವರು. ಸಹ+ಜ=ಸಹಜ ಸ್ವಾಭಾವಿಕ. ವೇದ್ಯರು- ಅಂದರೆ ಗುರು ಮುಖಾಂತರ ತತ್ವ ಶ್ರವಣ ಮಾಡಿದವರು. ಮನನ ನಿದಿಧ್ಯಾಸನ ಮಾಡುತ್ತಾ ಸಾಧನೆಯ ಸಿದ್ಧತೆಯಲ್ಲಿ ತೊಡಗಿದವರು.

    ಪರಮಾತ್ಮನ ಅನುಭವಕ್ಕೆ ಸಮೀಪ ವರ್ತಿಗಳಾಗಿ ಇರುವವರು. ಸಾಧ್ಯರು-ಅಂದರೆ ಸ್ವಂತ ಸಾಧನೆಯ ಮೂಲಕ ಸಿದ್ಧಿಯನ್ನು ಪಡೆದವರು ಅನುಭವಿಗಳು ಆತ್ಮಜ್ಞಾನಿಗಳು. ಇನ್ನು ಈ ಮೂವರ ಪಂಕ್ತಿಗೆ ಸೇರದ (ಆದ್ಯ ವೇದ್ಯ ಸಾಧ್ಯ) ಹಿರಿಯರನ್ನು ಕುರಿತು ಪ್ರಭುಗಳು ವಿಡಂಬಿಸುತ್ತಾರೆ ‘ತನುವಿಕಾರವುಳ್ಳವರು ಹಿರಿಯರೇ? ಹಸಿವು ತೃಷೆ, ಷಡ್ಭಾವ ವಿಕಾರಗಳಿಗೆ ಬಲಿಯಾದವರು ಹಿರಿಯರಲ್ಲ! ‘ಮನವಿಕಾರವುಳ್ಳವರು ಹಿರಿಯರೇ? ವಿದುರ ನೀತಿಯಲ್ಲಿ ಕೇಳಿ – ‘ಧರೆಯೊಳಗೆ ಖಡುಮೂರ್ಖರಿವರಿಬ್ಬರು ಕಾಣಾ ದೋಧನನು ದಶಶಿರನು’(ರಾವಣನು) ಮನದ ವಿಕಾರಕ್ಕೆ ಒಳಗಾಗಿ ಹೆಣ್ಣು ಮಣ್ಣಿಗೆ ಬಡಿದಾಡಲಿಲ್ಲವೇ? ಎಂದು ಪ್ರಶ್ನಿಸುತ್ತಾನೆ ವಿದುರ. ಇಂದ್ರಿಯ ವಿಕಾರದ ಹಿರಿಯರು-ಅಂದರೆ ಕಣ್ಣು, ಕಿವಿ, ಬಾಯಿ, ಕೈ ಕಾಲು ಮೊದಲಾದ ಇಂದ್ರಿಯಾದಿಗಳು ವಿಷಯಕ್ಕೆ ಹರಿಯುತ್ತವೆ.

    ನೋಡಬಾರದ್ದನ್ನು ಕೇಳಬಾರದ್ದನ್ನು, ಮುಟ್ಟಬಾರದ್ದನ್ನ, ತಿನ್ನಬಾರದ್ದನ್ನ, ಕುಡಿಯಬಾರದ್ದನ್ನ, ಹೋಗಬಾರದ ಸ್ಥಳಗಮನಕ್ಕೆ, ಇಂದ್ರಿಯ ವಿಕಾರಕ್ಕೆ ಹರಿಯುವವರೆಲ್ಲ ಹಿರಿಯರೆ? ವ್ಯಸನಗಳಿಗೆ ದಾಸರಾಗಿ ವ್ಯವಹರಿಸುತ್ತಿರುವವರು ಹಿರಿಯರೇ? ಶಿವಚಿಂತೆ, ಶಿವಜ್ಞಾನವುಳ್ಳ ಶರಣರ ಕಂಡರೆ ಅಪಹಾಸ್ಯ ಮಾಡುತ್ತ ತಮ್ಮ ಪ್ರತಿಷ್ಠೆಗಾಗಿ ಇನ್ನೊಬ್ಬರ ಬದುಕನ್ನು ಹಾಳು ಮಾಡುವವರು, ತಮ್ಮ ಸ್ವಾರ್ಥಕ್ಕೆ ಇನ್ನೊಬ್ಬರ ಮನೆಮನ ಗೌರವಕ್ಕೆ ಧಕ್ಕೆ ತರುವವರು, ಇಂದ್ರಿಯ ವಿಕಾರಿಗಳು ಹಿರಿಯರೇ? ಅಲ್ಲಲ್ಲ!

    5 ರೂ. ಪಾರ್ಲೆ-ಜಿ ಬಿಸ್ಕತ್​ ಬೆಲೆ ದುಬೈ, ಪಾಕಿಸ್ತಾನ ರಾಷ್ಟ್ರಗಳಲ್ಲಿ ಎಷ್ಟಿದೆ ಗೊತ್ತಾ? ಕೇಳಿದ್ರೆ ದಂಗಾಗ್ತೀರಾ!

    ಈತ ಕ್ರೀಸ್​ಗೆ ಬಂದ್ರೆ ಬೌಲರ್​ಗಳೇ ಬೆವರುತ್ತಾರೆ! ಅಜಯ್​ ಜಡೇಜಾ ಹೆಸರಿಸಿದ ಸ್ಟಾರ್​ ಬ್ಯಾಟ್ಸ್​ಮನ್ ಇವರೇ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts