More

    ಮತ್ತೆ ಶಾಲೆ ಯಾವಾಗ ತೆರೆಯುತ್ತೆ ? ಕೇಂದ್ರ ಸರ್ಕಾರ ಏನು ಹೇಳುತ್ತೆ ನೋಡಿ

    ನವದೆಹಲಿ : ಕರೊನಾ ಎರಡನೇ ಅಲೆ ತಣ್ಣಗಾಗುತ್ತಿರುವಂತೆ ಬಹುತೇಕ ರಾಜ್ಯಗಳು ನಿರ್ಬಂಧಗಳನ್ನು ಸಡಿಲಿಸುತ್ತಾ ಸಹಜ ಜನಜೀವನಕ್ಕೆ ಹೆಚ್ಚು ಅವಕಾಶ ಮಾಡಿಕೊಡುತ್ತಿವೆ. ಆದರೆ ಪುಟ್ಟ ಮಕ್ಕಳ ಶಾಲೆಗಳು ಮಾತ್ರ 2020 ರ ಮಾರ್ಚ್​ನಲ್ಲಿ ಮುಚ್ಚಿದ್ದು, ಈವರೆಗೂ ತೆರೆಯಲಾಗಿಲ್ಲ. ಶಾಲೆ ಮತ್ತೆ ಯಾವಾಗ ತೆರೆಯುತ್ತೆ ? ಮಕ್ಕಳು ಮತ್ತೆ ಮೊದಲಿನಂತೆ ಸಹಪಾಠಿಗಳೊಂದಿಗೆ ಆಟವಾಡಿಕೊಂಡು ನೇರವಾಗಿ ಶಿಕ್ಷಕರ ಪಾಠ ಕೇಳಿ ಕಲಿಯುವ ಸಂದರ್ಭ ಯಾವಾಗ ಒದಗುತ್ತೆ ? ಎಂಬ ಪ್ರಶ್ನೆ ಪಾಲಕರನ್ನು ಕಾಡುತ್ತಿದೆ.

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸರ್ಕಾರದ ನೀತಿ ಆಯೋಗದ ಅಧ್ಯಕ್ಷ ಡಾ. ವಿ.ಕೆ.ಪೌಲ್​ ಅವರು, ಶಾಲೆಗಳನ್ನು ಮತ್ತೆ ತೆರೆಯುವ ನಿರ್ಧಾರವನ್ನು ದಿಢೀರನೇ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅದಕ್ಕಾಗಿ ಹಲವಾರು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ ಎಂದಿದ್ದಾರೆ. ಈ ಪ್ರಶ್ನೆ ಆಗಾಗ ಏಳುತ್ತಲೇ ಇದೆ ಎಂದಿರುವ ಅವರು, “ಲಸಿಕಾಕರಣದ ವ್ಯಾಪಕತೆ ಹೆಚ್ಚಾದಂತೆ, ಶಿಕ್ಷಕರು ಲಸಿಕೆಗೊಳಪಟ್ಟು, ನಾವು ಅಭ್ಯಾಸಗಳನ್ನು ಬದಲಿಸಿಕೊಂಡು ಸಾಮಾಜಿಕ ಅಂತರವನ್ನು ನಮ್ಮ ದಿನನಿತ್ಯದ ಜೀವನದಲ್ಲಿ ಪಾಲಿಸಿದಂತೆ, ಶಾಲೆಗಳನ್ನು ತೆರೆಯಬಹುದಾದಂಥ ಸಮಯ ಬರಬಹುದು” ಎಂದಿದ್ದಾರೆ.

    ಇದನ್ನೂ ಓದಿ: ನದಿ ದಾಟಲು ಯತ್ನಿಸಿ ಕೊಚ್ಚಿ ಹೋದ ಈ ಯುವಕ ಬಚಾವ್ ಆಗಿದ್ದು ಹೇಗೆ ನೋಡಿ!

    ಮಾತು ಮುಂದುವರೆಸಿದ ಡಾ. ಪೌಲ್, “ಆದರೆ, ಹಲವು ದೇಶಗಳಲ್ಲಿ ಶಾಲೆಗಳನ್ನು ಮತ್ತೆ ತೆರೆಯಲಾದಾಗ, ಕರೊನಾ ಔಟ್​ಬ್ರೇಕ್​ (ವ್ಯಾಪಕ ಹಬ್ಬುವಿಕೆ) ಕಂಡುಬಂದು ಮತ್ತೆ ಮುಚ್ಚಬೇಕಾಯಿತು ಎನ್ನುವುದನ್ನು ನಾವು ನೆನಪಿಸಿಕೊಳ್ಳಬೇಕು. ಸಾಂಕ್ರಾಮಿಕವು ನಮಗೆ ಹಾನಿ ಉಂಟುಮಾಡುವುದಿಲ್ಲ ಎಂಬುದಾಗಿ ಹೆಚ್ಚು ವಿಶ್ವಾಸ ಮೂಡದ ವಿನಃ ನಾವು ನಮ್ಮ ಮಕ್ಕಳು ಮತ್ತು ಶಿಕ್ಷಕರನ್ನು ಆ ಸನ್ನಿವೇಶಕ್ಕೆ ಈಡುಮಾಡುವುದಿಲ್ಲ” ಎಂದು ಹೇಳಿದ್ದಾರೆ.

    ಶಾಲೆಗಳನ್ನು ಪುನಃ ತೆರೆಯುವ ಬಗೆಗಿನ ಚರ್ಚೆಯು ದೊಡ್ಡ ಮಾತುಕತೆಯ ವಿಚಾರವಾಗಿದೆ. ಆದರೆ ಮಕ್ಕಳಲ್ಲಿ ಸೆರೋ ಪ್ರಿವಲೆನ್ಸ್​​ ಸಮಾನವಾಗಿದೆ ಎಂಬ ಮಾಹಿತಿಯು ಉಪಯುಕ್ತವಾದ ಡೇಟಾ ಎಂದ ಡಾ.ಪೌಲ್​, ಈ ಬಗ್ಗೆ ಮತ್ತಷ್ಟು ಡೇಟಾಗಳನ್ನು ಪರಿಗಣಿಸುವ ಅಗತ್ಯವಿದೆ ಎಂದಿದ್ದಾರೆ. (ಏಜೆನ್ಸೀಸ್)

    ಪಾಟ್ನದಿಂದ ಲೂಧಿಯಾನಕ್ಕೆ ಗಂಡನನ್ನು ಅರಸಿ ಬಂದ ಯುವತಿ! ಅಪೂರ್ಣ ಮೊಬೈಲ್ ಸಂಖ್ಯೆ ಹಿಡಿದು ಹುಡುಕಾಟ!

    ಹೌಸಿಂಗ್​ ಸೊಸೈಟಿಯಲ್ಲಿ ಅನಧಿಕೃತ ಲಸಿಕಾ ಕಾರ್ಯಕ್ರಮ : ನಾಲ್ವರ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts