More

    ಕೆಎಲ್ ರಾಹುಲ್ ಶತಕ ಪೂರೈಸಿದ ಬಳಿಕ ಕಿವಿ ಮುಚ್ಚಿಕೊಂಡಿದ್ದು ಯಾಕೆ ಗೊತ್ತೇ?

    ಪುಣೆ: ಟಿ20 ಸರಣಿಯಲ್ಲಿ ಸತತ ವೈಫಲ್ಯ ಅನುಭವಿಸಿ ಕೊನೇ ಪಂದ್ಯಕ್ಕೆ ತಂಡದಿಂದಲೂ ಹೊರಬಿದ್ದಿದ್ದ ಕನ್ನಡಿಗ ಕೆಎಲ್ ರಾಹುಲ್, ಪ್ರವಾಸಿ ಇಂಗ್ಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕದ ಮೂಲಕ ಟೀಕಾಕಾರರಿಗೆ ದಿಟ್ಟ ಉತ್ತರ ನೀಡಿದರು. ಮೊದಲ ಏಕದಿನದಲ್ಲಿ ಅಜೇಯ 62 ರನ್ ಬಾರಿಸಿದ್ದ ರಾಹುಲ್ ಈ ಬಾರಿ ಸರಿಸುಮಾರು ಒಂದು ವರ್ಷದ ಬಳಿಕ ಮೂರಂಕಿ ತಲುಪಿದ ಸಾಧನೆ ಮಾಡಿದರು. ಈ ವೇಳೆ ಅವರು ಎರಡೂ ಕಿವಿ ಮುಚ್ಚಿಕೊಂಡು ಸಂಭ್ರಮಿಸಿದ್ದು, ಕ್ರಿಕೆಟ್ ಪ್ರೇಮಿಗಳಲ್ಲಿ ಕುತೂಹಲ ಸೃಷ್ಟಿಸಿದೆ.

    ಸ್ಯಾಮ್ ಕರ‌್ರನ್ ಎಸೆದ ಪಂದ್ಯದ 44ನೇ ಓವರ್‌ನಲ್ಲಿ ಸಿಂಗಲ್ಸ್ ಕಸಿಯುವ ಮೂಲಕ 108 ಎಸೆತಗಳಲ್ಲಿ 5ನೇ ಏಕದಿನ ಶತಕ ಪೂರೈಸಿದ ರಾಹುಲ್ (108 ರನ್, 114 ಎಸೆತ, 7 ಬೌಂಡರಿ, 2 ಸಿಕ್ಸರ್), ಡ್ರೆಸ್ಸಿಂಗ್ ರೂಂನತ್ತ ಬ್ಯಾಟ್ ತೋರಿಸಿ ಬಳಿಕ ಎರಡೂ ಕೈಗಳಿಂದ ಕಿವಿಯನ್ನು ಮುಚ್ಚಿಕೊಂಡರು. ಇನಿಂಗ್ಸ್ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್, ‘ನನ್ನ ಸಂಭ್ರಮಾಚರಣೆ ಯಾರಿಗೂ ಅಗೌರವ ತೋರುವ ಉದ್ದೇಶ ಹೊಂದಿಲ್ಲ. ಕೆಲವರು ಸದಾ ನಿಮ್ಮ ಕಾಲೆಯಲು ಪ್ರಯತ್ನಿಸುತ್ತಿರುತ್ತಾರೆ. ಅವರ ಯಾವುದೇ ಮಾತು ನನ್ನ ಮೇಲೆ ಪರಿಣಾಮ ಬೀರದು ಎಂಬ ಸಂದೇಶ ರವಾನಿಸಲು ಹಾಗೆ ಮಾಡಿದೆ’ ಎಂದರು.

    ಇದನ್ನೂ ಓದಿ: ಕನ್ನಡಿಗ ಕೆಎಲ್ ರಾಹುಲ್ ಶತಕ ವ್ಯರ್ಥ, 2ನೇ ಏಕದಿನದಲ್ಲಿ ಭಾರತಕ್ಕೆ ಸೋಲು

    ‘ಟಿ20 ಸರಣಿಯಲ್ಲಿ ತೋರಿದ ನಿರ್ವಹಣೆ ನನಗೂ ಬೇಸರ ತಂದಿತ್ತು. ಆದರೆ ಪಂದ್ಯಗಳು ನಡೆಯುವುದೇ ಹಾಗೆ. ಬಳಿಕ ಏಕದಿನ ಸರಣಿಯಲ್ಲಿ ಕೆಲ ಗುಣಮಟ್ಟದ ಹೊಡೆತಗಳು ನನ್ನ ಮೇಲಿನ ಒತ್ತಡ ನಿವಾರಿಸಿದವು. ಈ ಪಂದ್ಯದಲ್ಲಿ ಕೊಹ್ಲಿ ಮತ್ತು ರಿಷಭ್ ಪಂತ್ ಜತೆ ಉತ್ತಮ ಜತೆಯಾಟ ನಡೆಸಲು ಸಾಧ್ಯವಾಗಿದ್ದಕ್ಕೆ ಖುಷಿಯಾಯಿತು’ ಎಂದು ಕೆಎಲ್ ರಾಹುಲ್ ಹೇಳಿದರು.

    ರೋಹಿತ್ ಶರ್ಮ-ಶಿಖರ್ ಧವನ್ ಜೋಡಿ ಭಾರತಕ್ಕೆ ಕಳೆದ ಪಂದ್ಯದಂತೆ ಭದ್ರ ಬುನಾದಿ ಹಾಕಿಕೊಡಲಿಲ್ಲ. ಧವನ್ (4) 4 ಮತ್ತು ರೋಹಿತ್ (25) 9ನೇ ಓವರ್‌ನಲ್ಲೇ ಪೆವಿಲಿಯನ್ ಸೇರಿಕೊಂಡರು. ಭಾರತ 37 ರನ್ ಸೇರಿಸುವಷ್ಟರಲ್ಲೇ ಆರಂಭಿಕರನ್ನು ಔಟ್ ಮಾಡಿ ಇಂಗ್ಲೆಂಡ್ ಬೀಗಿತ್ತು. ಆಗ ಜತೆಗೂಡಿದ ನಾಯಕ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಸುಮಾರು 24 ಓವರ್‌ಗಳ ಕಾಲ ಜತೆಯಾಟವಾಡಿ 3ನೇ ವಿಕೆಟ್‌ಗೆ 121 ರನ್ ಜತೆಯಾಟವಾಡಿದರು. ದೀರ್ಘಕಾಲದ ಶತಕದ ಬರ ನೀಗಿರುವ ಹಂಬಲದಲ್ಲಿದ್ದ ಕೊಹ್ಲಿ 66 ರನ್ (79 ಎಸೆತ, 3 ಬೌಂಡರಿ, 1 ಸಿಕ್ಸರ್) ಗಳಿಸಿ ರಶೀದ್ ಎಸೆತದಲ್ಲಿ ಕೀಪರ್ ಬಟ್ಲರ್‌ಗೆ ಕ್ಯಾಚ್ ನೀಡಿ ನಿರಾಸೆ ಅನುಭವಿಸಿದರು. ನಂತರ ಕೊಹ್ಲಿಗೆ ರಿಷಭ್ ಪಂತ್ ಸಮರ್ಥ ಸಾಥ್ ನೀಡಿದರು. ರಾಹುಲ್-ಪಂತ್ ಜೋಡಿ 4ನೇ ವಿಕೆಟ್‌ಗೆ 80 ಎಸೆತಗಳಲ್ಲೇ 113 ರನ್ ಬಾಚಿಕೊಂಡಿತು.

    ಮದುವೆ ಬೆನ್ನಲ್ಲೇ ಸಂಜನಾ ಕೆಲಸಕ್ಕೆ ಹಾಜರ್! ಬುಮ್ರಾ ಹನಿಮೂನ್‌ಗೆ ಯಾರ ಜತೆ ಹೋದರು?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts