More

    ಕರೊನಾ ಎರಡನೇ ಅಲೆ ಯಾವಾಗ ಮುಗಿಯುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ..

    ನವದೆಹಲಿ: ಒಂದು ವರ್ಷಕ್ಕೂ ಅಧಿಕ ಕಾಲದಿಂದ ಬಿಟ್ಟೂಬಿಡದೆ ಕಾಡುತ್ತಿರುವ ಕರೊನಾ ಸರ್ಕಾರಗಳನ್ನು ಕಂಗೆಡಿಸಿದ್ದಲ್ಲದೆ, ಜನಜೀವನವನ್ನೂ ಅಸ್ತವ್ಯಸ್ತಗೊಳಿಸಿ, ಆತಂಕಕ್ಕೆ ಒಳಗಾಗಿಸಿತ್ತು. ಕೆಲ ತಿಂಗಳ ಹಿಂದೆ ಸ್ವಲ್ಪ ತಗ್ಗಿದ್ದ ಪ್ರಕರಣಗಳ ಸಂಖ್ಯೆ ಇನ್ನೇನು ಕರೊನಾ ಹಾವಳಿ ಮುಗಿಯಿತು ಎಂಬಂಥ ನಿರಾಳತೆ ಮೂಡಿಸಿದ್ದರೂ, ಆ ಬಳಿಕ ಕಂಡುಬಂದಿರುವ ಕರೊನಾ ಎರಡನೇ ಅಲೆ ಇದೀಗ ಮತ್ತೆ ಚಿಂತೆಗೀಡು ಮಾಡಿದೆ.

    ಎರಡನೇ ಅಲೆ ಕೂಡ ಕ್ಷಿಪ್ರವಾಗಿ ವ್ಯಾಪಿಸುತ್ತಿದ್ದು ದೇಶದಲ್ಲಿ ಕೋವಿಡ್​-19 ಪಾಸಿಟಿವ್ ಪ್ರಕರಣಗಳ ಸಂಖ್ಯೆ ಅತಿಯಾಗಿದೆ. ಹೀಗೆ ಒಂದಿಡೀ ವರ್ಷದಿಂದ ಕಾಡುತ್ತಿರುವ ಕರೊನಾ ಹಾವಳಿ ಮುಗಿದರೆ ಸಾಕು ಎಂದು ಜಗತ್ತೇ ನಿರೀಕ್ಷಿಸುತ್ತಿದ್ದು, ಕರೊನಾ ಎರಡನೇ ಅಲೆ ಯಾವಾಗ ಮುಗಿಯಲಿದೆ ಎಂಬುದು ಬಹುತೇಕ ಎಲ್ಲರ ಪ್ರಶ್ನೆಯೂ ಆಗಿದೆ. ಅದಕ್ಕೀಗ ಒಂದು ಉತ್ತರವೂ ಸಿಕ್ಕಿದೆ.

    ಇದನ್ನೂ ಓದಿ: ಎರಡೆರಡು ಸಲ ಲಸಿಕೆ ಪಡೆದರೂ ಕರೊನಾ ಬಂತು!; ವ್ಯಾಕ್ಸಿನ್​ ತಗೊಂಡ ಜಿಲ್ಲಾಧಿಕಾರಿಗೂ ಸೋಂಕು!​

    ಇಂಡಿಯನ್ ಇನ್​ಸ್ಟಿಟ್ಯೂಟ್​ ಆಫ್ ಟೆಕ್ನಾಲಜಿ, ಇಂಡಿಯನ್ ಸ್ಟಾಟಿಸ್ಟಿಕಲ್​ ಇನ್​ಸ್ಟಿಟ್ಯೂಟ್​, ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್​ ಸೈನ್ಸಸ್​ಗಳ ಪರಿಣತರನ್ನು ಒಳಗೊಂಡಿರುವ ಕಮಿಟಿಯೊಂದನ್ನು ಸರ್ಕಾರ ರೂಪಿಸಿದ್ದು, ಕರೊನಾ ಎರಡನೇ ಅಲೆ ಮುಗಿಯುವ ಸಮಯವನ್ನು ಈ ಸಮಿತಿ ಅಂದಾಜಿಸಿದೆ.

    ಈ ಸಮಿತಿ ಭವಿಷ್ಯ ಹೇಳಿರುವ ಪ್ರಕಾರ, ಕರೊನಾ ಎರಡನೇ ಅಲೆ ಏಪ್ರಿಲ್​ 15ರಿಂದ 20ರ ವರೆಗೆ ಉತ್ತುಂಗಕ್ಕೆ ಹೋಗಲಿದೆ. ಆ ಬಳಿಕ ಅದು ಇಳಿಯಲಿದ್ದು, ಮೇ ತಿಂಗಳ ಕೊನೆಯಲ್ಲಿ ಅದು ಬಹುತೇಕ ಇಳಿಕೆ ಕಾಣಲಿದೆ. ಅದಾಗ್ಯೂ ಪಾಲಿಸಲೇಬೇಕಾದ ಸೂಕ್ತ ಮುನ್ನೆಚ್ಚರಿಕೆಗಳನ್ನು ಅನುಸರಿಸದಿದ್ದರೆ ಇದರಲ್ಲಿ ವ್ಯತ್ಯಾಸವಾಗಲಿದೆ ಎಂಬ ಎಚ್ಚರಿಕೆಯನ್ನೂ ಸಮಿತಿ ನೀಡಿದೆ. ಮಾಸ್ಕ್​ ಧರಿಸುವುದು, ಸ್ಯಾನಿಟೈಸರ್ ಬಳಕೆ, ದೈಹಿಕ ಅಂತರ ಕಾಪಾಡುವುದು ಮುಂತಾದ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಪಾಲಿಸಬೇಕು ಎಂದು ಅದು ಹೇಳಿದೆ. (ಏಜೆನ್ಸೀಸ್​)

    ಇದನ್ನೂ ಓದಿ: ಇಲ್ಲೆಲ್ಲ ಈ ಲಸಿಕೆ ಕೊಡುವುದು ನಿಲ್ಲಿಸಿದ್ದಾರಂತೆ!; ರಕ್ತಹೆಪ್ಪುಗಟ್ಟುತ್ತದೆ ಎಂಬ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ

    ಕರೊನಾ ಲಸಿಕೆ ಪಡೆದು ಖುಷಿಯಲ್ಲಿದ್ದ ನಟಿಗೆ ಶಾಕ್​ ನೀಡಿದ ರಿಪೋರ್ಟ್​: ಬಂತು ಪಾಸಿಟಿವ್​!

    ಕಾಣೆಯಾದ ಬೆಕ್ಕು ಮನೆಯೊಳಗೇ ಇತ್ತು.. ಎಲ್ಲೆಂದು ತಿಳಿದವರು ಒಮ್ಮೆ ಹೌಹಾರಿದರೂ ಅಚ್ಚರಿ ಏನಲ್ಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts