More

    ಬಾಹುಬಲಿ ಚಿತ್ರದ ಮೊದಲ ದಿನದ ಶೂಟಿಂಗ್ ಹೇಗಿತ್ತು ಒಮ್ಮೆ ನೋಡಿ…

    ಭಾರತೀಯ ಸಿನಿಮಾ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಬಾಹುಬಲಿ, ಇಂದಿಗೂ ಮಾಸ್ಟರ್ಪೀಸ್ ಸಿನಿಮಾ. ಈಗಷ್ಟೇ ಈ ಸಿನಿಮಾ ಬಿಡುಗಡೆ ಆಗಿದೆ ಎನಿಸುತ್ತದೆ. ಅಷ್ಟೊಂದು ಫ್ರೆಶ್​ ಆಗಿದೆ ಅದರ ದೃಶ್ಯಾವಳಿಗಳು. ಅಷ್ಟಕ್ಕೂ ಈಗ್ಯಾಕೆ ಬಾಹುಬಲಿ ವಿಷಯ ಬಂತು ಎಂಬುದು ನಿಮಗೆ ಕುತೂಹಲ ಇರಬಹುದು. ಅದಕ್ಕೂ ಉತ್ತರ ಇದೆ.

    ಇದನ್ನೂ ಓದಿ: ಕೇವಲ 24 ಗಂಟೆಯಲ್ಲಿ ಸುಶಾಂತ್​ ಕೊನೇ ಸಿನಿಮಾದ ಟ್ರೇಲರ್ ಸೃಷ್ಟಿಸಿತು ಹೊಸ ದಾಖಲೆ

    ಹೌದು, ಜುಲೈ 6, 2013ಕ್ಕೆ ಬಾಹುಬಲಿ ಚಿತ್ರದ ಮೊದಲ ದಿನದ ಶೂಟಿಂಗ್​ಗೆ ಚಾಲನೆ ನೀಡಲಾಗಿತ್ತು. ಅಂದರೆ ಸೋಮವಾರಕ್ಕೆ ಸರಿಯಾಗಿ ಏಳು ವರ್ಷಗಳ ಹಿಂದೆ ಈ ಚಿತ್ರ ಶುರುವಾಗಿತ್ತು. ಅದನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡು ಮತ್ತೆ ಆ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ ರಾಜಮೌಳಿ.

    ಇದನ್ನೂ ಓದಿ: PHOTOS| ಥ್ರಿಲ್​ ನೀಡಲು ಅಪ್ಸರಾ ರೆಡಿ: ಹಾಟ್​ ಫೋಟೋಗಳನ್ನು ಹರಿಬಿಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸಿದ ಆರ್​ಜಿವಿ!

    ಪ್ರಭಾಸ್​, ರಾಣಾ ದಗ್ಗುಬಾಟಿ, ತಮನ್ನಾ ಭಾಟಿಯಾ, ಅನುಷ್ಕಾ ಶೆಟ್ಟಿ, ರಮ್ಯಾ ಕೃಷ್ಣ ಸೇರಿ ಹಲವು ಸ್ಟಾರ್ ಕಲಾವಿದರೆಲ್ಲ ಬಾಹುಬಲಿ ಸರಣಿಯ ಭಾಗವಾಗಿದ್ದರು. ಆ ಸರಣಿಯ ಸಿನಿಮಾದಿಂದ ಬಹುತೇಕ ಎಲ್ಲರ ಸಿನಿಮಾ ಗ್ರಾಫ್​ ಸಹ ಏರಿಕೆ ಕಂಡಿತ್ತು. ಪ್ರಭಾಸ್​ ಪ್ಯಾನ್​ ಇಂಡಿಯಾ ಹೀರೋ ಆಗಿ ಬೆಳೆದರು. (ಏಜೆನ್ಸೀಸ್​)

    ದಳಪತಿ ವಿಜಯ್​ ‘ಮಾಸ್ಟರ್’ ಬಿಡುಗಡೆಗೆ ಹೊಸ ದಿನಾಂಕ ನಿಗದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts