More

    ಗಣಿನಾಡಿನಲ್ಲಿ ಬಿರುಸಿನ ಮತದಾನ

    ಬಳ್ಳಾರಿ: ಗಣಿನಾಡು ಬಳ್ಳಾರಿ ಲೋಕಸಭಾ ಚುನಾವಣೆಯ ಮತದಾನವು ಮಂಗಳವಾರ ಸುಗಮವಾಗಿ ನಡೆಯಿತು. ಸಾಯಂಕಾಲ ಐದು ಗಂಟೆಯವರೆಗೆ ಶೇ. 68.94% ಮತದಾನ ಪ್ರಮಾಣ ನಡೆದಿತ್ತು.
    ಬೇಸಿಗೆಯ ಸುಡು ಬಿಸಿಲು ಇದ್ದ ಕಾರಣ ಮತದಾರರು ಬೆಳಗ್ಗೆಯಿಂದಲೆ ಮಹಿಳೆಯರು, ಯುವಕರು ಮತಗಟ್ಟೆಳತ್ತ ತೆರಳಿ ತಮ್ಮ ಹಕ್ಕನ್ನು ಚಲಾಯಿಸಿದರು. ಮಧ್ಯಾಹ್ನದ ವೇಳೆ ತೀವ್ರ ಬಿಸಿಲಿದ್ದ ಕಾರಣ ಮತಗಟ್ಟೆಗಳಲ್ಲಿ ಮತದಾರರ ಸಂಖ್ಯೆ ಕಡಿಮೆ ಇತ್ತು. ಸಂಜೆ ವೇಳೆಗೆ ಮತಗಟ್ಟೆಗೆ ಬಂದು ಮತ ಚಲಾಯಿಸಿದರು.
    ತಾಲೂಕಿನ ಕೃಷ್ಣಾನಗರ, ವದ್ದಟ್ಟಿ, ಸಂಗನಕಲ್ಲು, ಕಪ್ಪಗಲ್, ಸಿರಿವಾರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದು ಕಂಡು ಬಂತು. ಚುನಾವಣೆ ಆಯೋಗದಿಂದ ಮತದಾರರಿಗೆ ನೆರಳಿಗೆ ಶಾಮಿಯಾನ್, ಕೂಲರ್, ಕುಡಿಯುವ ನೀರು, ಮತಗಟ್ಟೆ ಕೇಂದ್ರಗಳಲ್ಲಿ ವಿದ್ಯುತ್ ದೀಪ, ಆರೋಗ್ಯ ಇಲಾಖೆಯಿಂದ ಒಆರ್‌ಎಸ್ ದ್ರಾವಣ, ಚಿಕಿತ್ಸೆಗಾಗಿ ವೈದ್ಯರು, ಅಂಬ್ಯುಲೆನ್ಸ್ ವ್ಯವಸ್ಥೆ ಕೂಡ ಮಾಡಲಾಗಿತ್ತು. ಬಹುತೇಕ ಕಡೆ ಬೆಳಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾದರೆ, ಕೆಲವೆಡೆ ಇವಿಎಂ ಕೈ ಕೊಟ್ಟಿದ್ದ ಕಾರಣ, ತಡವಾಗಿ ಮತದಾನ ಪ್ರಕ್ರಿಯೆ ಆರಂಭವಾಯಿತು. ಚುನಾವಣೆ ಹಿನ್ನಲೆ ಕೆಕೆಆರ್‌ಟಿಸಿ ಡಿಪೋ ದಿಂದ ಬಸ್ ಪಡೆದ ಹಿನ್ನಲೆ ಜಿಲ್ಲೆಯಿಂದ ಹಳ್ಳಿಗಳಿಗೆ ತೆರಳಲು ಪ್ರಯಾಣಿಕರು ಬಸ್ ವ್ಯವಸ್ಥೆ ಇಲ್ಲದೇ ಪರದಾಡಿದರು.
    ಇಲ್ಲಿನ ಬಂಡಿಹಟ್ಟಿ , ತಾಲೂಕಿನ ಕೊಳಗಲ್ ಹಾಗೂ ಕುಡಿತಿನಿಯ ಮತಗಟ್ಟೆಗೆ ನಿಯೋಜಿಸಿದ್ದ ಸಿಬ್ಬಂದಿ ರವಿಚಂದ್ರ, ಲಕ್ಷ್ಮಿದೇವಿ, ಶೋಭರಾಣಿ ರಕ್ತದೊತ್ತಡದಿಂದ ಆರೋಗ್ಯದಲ್ಲಿ ಏರುಪೇರು ಸಮಸ್ಯೆಯಾಗಿತ್ತು. ಕೂಡಲೇ ವೈದ್ಯರು ಚಿಕಿತ್ಸೆ ನೀಡುವ ಮೂಲಕ ಗುಣಮುಖರಾದರು.
    ಸಂಡೂರಿನ ಪಂಚಾಯತಿ ರಾಜ್ ಕಚೇರಿಯಲ್ಲಿ ಬಳ್ಳಾರಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಈ. ತುಕಾರಾಮ್, ವುಂಕಿ ಮರಿ ಸಿದ್ದಮ್ಮ ಅಂಗ್ಲ ಮಾಧ್ಯಮ ಶಾಲೆಯಲ್ಲಿ ಸಚಿವ ಬಿ.ನಾಗೇಂದ್ರ, ಶಾಸಕ ನಾರಾ ಭರತರೆಡ್ಡಿ , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಕಚೇರಿಯಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು, ಹವಂಬಾವಿಯ ಸ.ಪ್ರಾ. ಶಾಲೆಯಲ್ಲಿ ಮಾಜಿ ಶಾಸಕ ಜಿ. ಸೋಮಶೇಖರರೆಡ್ಡಿ, ಗಂಗಾವತಿ ಶಾಸಕ ಜಿ. ಜನಾರ್ದನರೆಡ್ಡಿ ಪತ್ನಿ ಅರುಣಾ ಲಕ್ಷ್ಮಿ, ಸೇಂಟ್ ಜೋಸೆಫ್ ಬಾಲಕರ ಹಿ.ಪ್ರಾ. ಶಾಲೆಯಲ್ಲಿ ಸಂಸದ ನಾಸೀರ್ ಹುಸೇನ್, ಎಸ್‌ಎಸ್‌ಎ ಕಾಲೇಜಿನಲ್ಲಿ ಡಿಸಿ ಪ್ರಶಾಂತ ಕುಮಾರ್ ನಗರದ ಎಸ್‌ಎಸ್‌ಎ ಮತಚಲಾಯಿಸಿದರು.
    ಮತದಾನ ಉಲ್ಲಂಘನೆ ಪ್ರಕರಣ ದಾಖಲು : ಮತಗಟ್ಟೆಯಲ್ಲಿ ಮತದಾನ ಮಾಡಿ ಮತದಾನದ ಗೌಪ್ಯತೆ ಕಾಪಾಡದೆ ನೀತಿ ಸಂಹಿತೆ ಉಲ್ಲಂಘಿಸಿದ್ದ ಇಲ್ಲಿನ ಬಳ್ಳಾರಿ ಮಹಾನಗರ ಪಾಲಿಕೆ ಸದಸ್ಯ ಕೆ.ತಿಲಕ ಕುಮಾರ್ ವಿರುದ್ಧ ನಗರದ ಕೌಲ್‌ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ವಾಸವಿ ಆಂಗ್ಲ ಮಾಧ್ಯಮ ಶಾಲೆಯ ಮತಗಟ್ಟೆ ಸಂಖ್ಯೆ 63ರಲ್ಲಿ ಮತದಾನ ಮಾಡಿರುವ ನಗರದ 10ನೇ ವಾರ್ಡ್ ಪಾಲಿಕೆ ಸದಸ್ಯ ಕೆ.ತಿಲಕ ಕುಮಾರ ಅವರು, ಮತಯಂತ್ರದಲ್ಲಿನ ಕಮಲದ ಗುರುತಿಗೆ ಮತ ಹಾಕಿದಂತೆ ಬಟನ ಒತ್ತುತ್ತಿದ್ದನ್ನು ತನ್ನ ಮೊಬೈಲ್‌ನಿಂದ ಫೋಟೊ ಕ್ಲಿಕ್ಕಿಸಿಕೊಂಡು, ಅದನ್ನು ವಾಟ್ಸ್ಆಪ್‌ನಲ್ಲಿ ಅಪ್‌ಲೋಡ ಮಾಡಿ ‘ಡನ್ ವಿತ್ ಮೈ ಡ್ಯೂಟಿ ವೋಟರ್ ಫಾರ್ ಶ್ರೀರಾಮುಲು ಎಂದು ಇಂಗ್ಲೀಷ್‌ನಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಮಹೇಶ ಪಾಟೀಲ್ ಎನ್ನುವವರು ನೀಡಿರುವ ದೂರಿನ ಮೇರೆಗೆ ಕೌಲ್‌ಬಜಾರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts