More

    ವಾಟ್ಸ್​ಆ್ಯಪ್​ ಬಳಕೆದಾರರ ಖಾಸಗಿತನಕ್ಕೆ ಧಕ್ಕೆ ಬರಲಿದೆಯೇ?; ಪ್ರೈವೆಸಿಗಾಗಿ ದೆಹಲಿ ಹೈಕೋರ್ಟ್​ ಮೊರೆ ಹೋದ ಕಂಪನಿ..

    ನವದೆಹಲಿ: ವಾಟ್ಸ್​ಆ್ಯಪ್​ನಲ್ಲಿ ಒಬ್ಬರು ಇನ್ನೊಬ್ಬರಿಗೆ ಕಳುಹಿಸಿದ ಮೆಸೇಜ್​ ಅವರಿಬ್ಬರಿಗಷ್ಟೇ ಗೊತ್ತಿರುತ್ತದೆ, ಮಧ್ಯೆ ಇನ್ಯಾರಿಗೂ ಅದರ ಸುಳಿವೂ ಸಿಗುವುದಿಲ್ಲ ಎಂಬ ಕಾರಣಕ್ಕೇ ಎಷ್ಟೋ ಜನ ವಾಟ್ಸ್​ಆ್ಯಪ್ ಬಳಕೆ ಮಾಡುತ್ತಿದ್ದಾರೆ. ಅರ್ಥಾತ್, ಎಂಡ್​ ಟು ಎಂಡ್ ಎನ್​ಕ್ರಿಪ್ಷನ್​ನಿಂದಾಗಿ ವಾಟ್ಸ್​ಆ್ಯಪ್​ ಮೆಸೇಜ್​ನಲ್ಲಿ ಖಾಸಗಿತನದ ಸುರಕ್ಷೆ ಇದೆ ಎಂದು ಕಂಪನಿ ಹೇಳಿಕೊಳ್ಳುತ್ತಲೇ ಬಂದಿದೆ. ಆದರೆ ಸದ್ಯದಲ್ಲೇ ಇದಕ್ಕೆ ಧಕ್ಕೆ ಬರಲಿದೆಯೇ? ಎಂಬ ಪ್ರಶ್ನೆ ಇದೀಗ ಮೂಡಿದೆ.

    ಹೌದು.. ಹೊಸ ಕಾನೂನನ್ನು ಪಾಲಿಸುವ ಸಂಬಂಧ ಫೇಸ್​ಬುಕ್​, ವಾಟ್ಸ್​ಆ್ಯಪ್​ ಹಾಗೂ ಟ್ವಿಟರ್ ಮುಂತಾದ ಸೋಷಿಯಲ್ ಮೀಡಿಯಾ ಮತ್ತು ಮೆಸೇಜಿಂಗ್ ಆ್ಯಪ್ ಕಂಪನಿಗಳಿಗೆ ನೀಡಿದ್ದ ಮೂರು ತಿಂಗಳ ಗಡುವು ನಿನ್ನೆ ಮುಗಿದಿದೆ. ಈ ಮಧ್ಯೆ ಟ್ವಿಟರ್​ ಇದಕ್ಕೆ ಸಂಬಂಧಿಸಿದಂತೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲವಾದರೂ, ಸರ್ಕಾರದ ನಿಯಮಗಳನ್ನು ಕೆಲವೊಂದು ಬದಲಾವಣೆ ಮೂಲಕ ಪಾಲಿಸಲು ಬದ್ಧ ಎಂದು ಫೇಸ್​ಬುಕ್ ನಿನ್ನೆಯೇ ಹೇಳಿದೆ. ಆದರೆ ನಿನ್ನೆಯವರೆಗೂ ಯಾವುದೇ ಸ್ಪಷ್ಟನೆ ನೀಡದಿದ್ದ ವಾಟ್ಸ್​​ಆ್ಯಪ್ ಇಂದು ಸರ್ಕಾರದ ಕಾನೂನು ಪಾಲನೆಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್​ನ ಮೊರೆ ಹೋಗಿದೆ.

    ಇದನ್ನೂ ಓದಿ: ವಾಟ್ಸ್​ಆ್ಯಪ್​, ಫೇಸ್​ಬುಕ್​, ಟ್ವಿಟರ್​ ನಾಳೆಯಿಂದ ಭಾರತದಲ್ಲಿ ನಿಷೇಧ?; ಸೋಷಿಯಲ್ ಮೀಡಿಯಾದಲ್ಲಿ ಗರಿಗೆದರಿದ ಕುತೂಹಲ!

    ನಾವು ಸರ್ಕಾರದ ಹೊಸ ಕಾನೂನನ್ನು ಪಾಲಿಸಲು ಹೋದರೆ ನಮ್ಮ ಬಳಕೆದಾರರ ಖಾಸಗಿತನಕ್ಕೇ ಧಕ್ಕೆ ಬರುತ್ತದೆ. ಹೊಸ ಕಾನೂನಿನಲ್ಲಿರುವ ಒಂದು ಅಂಶ ಭಾರತದ ಕಾನೂನಿನ ಪ್ರಕಾರವೇ ನಮ್ಮ ಬಳಕೆದಾರರ ಖಾಸಗಿತನದ ಉಲ್ಲಂಘನೆ ಆಗುತ್ತದೆ. ಹೀಗಾಗಿ ನಾವು ಅದನ್ನು ಅನುಸರಿಸುವುದು ಸಾಧ್ಯವಿಲ್ಲ ಎಂಬ ಮನವಿಯೊಂದಿಗೆ ವಾಟ್ಸ್​ಆ್ಯಪ್​ ಉಚ್ಚ ನ್ಯಾಯಾಲಯಕ್ಕೆ ಇಂದು ಅರ್ಜಿ ಸಲ್ಲಿಸಿದೆ.

    ಡಿಜಿಟಲ್ ಮೀಡಿಯಾಗೆ ಸಂಬಂಧಿಸಿದ ಹೊಸ ಕಾನೂನಿನ ಪ್ರಕಾರ ವಾಟ್ಸ್​ಆ್ಯಪ್​ ತನ್ನ ಮೂಲಕ ರವಾನೆಯಾದ ಸಂದೇಶದ ಮೂಲವನ್ನು ತಿಳಿಸಬೇಕು. ಅರ್ಥಾತ್, ಯಾವ ಮೇಸೆಜ್​ ಯಾರಿಂದ ಯಾರಿಗೆ ಬಂತು ಹಾಗೂ ಅದರಲ್ಲಿ ಏನಿತ್ತು ಎಂಬುದನ್ನು ಸರ್ಕಾರ ಕೇಳಿದರೆ ಅದು ಒದಗಿಸಬೇಕು. ಹೀಗೆ ಮಾಡಿದರೆ ಎಂಡ್​ ಟು ಎಂಡ್ ಎನ್​ಕ್ರಿಪ್ಷನ್​ ಅರ್ಥ ಕಳೆದುಕೊಳ್ಳುತ್ತದೆ. ಮಾತ್ರವಲ್ಲ ಇದು ಬಳಕೆದಾರರ ಖಾಸಗಿತನಕ್ಕೆ ಧಕ್ಕೆ ತಂದ ಹಾಗೆ ಆಗುತ್ತದೆ. ವಾಟ್ಸ್​ಆ್ಯಪ್ ಸಂದೇಶದ ಜಾಡನ್ನು ಬಿಟ್ಟುಕೊಡುವುದು ಎಂದರೆ ಅದು ಪ್ರತಿ ಮೆಸೇಜ್​ನ ಗುಟ್ಟನ್ನೇ ಬಿಟ್ಟುಕೊಟ್ಟ ಹಾಗೆ. ಮಾತ್ರವಲ್ಲ ದಿನವೊಂದಕ್ಕೆ ಕೋಟ್ಯಂತರ ಮೆಸೇಜ್​ಗಳು ರವಾನೆ ಆಗುವಾಗ ಪ್ರತಿ ಮೆಸೇಜ್ ಎಲ್ಲಿಂದ ಬಂತು, ಎಲ್ಲಿಗೆ ಹೋಯಿತು, ಅದರಲ್ಲಿ ಏನಿತ್ತು ಎಂಬುದನ್ನು ಸಂಗ್ರಹಿಸಿಡುವುದು ದೊಡ್ಡ ಹೊರೆಯಾಗಲಿದೆ ಎಂದು ವಾಟ್ಸ್​ಆ್ಯಪ್ ಹೇಳಿದೆ. ವಾಟ್ಸ್​ಆ್ಯಪ್ ಸದ್ಯ ಭಾರತದಲ್ಲಿ ಸುಮಾರು 40 ಕೋಟಿ ಬಳಕೆದಾರರನ್ನು ಹೊಂದಿದೆ.

    ಇದನ್ನೂ ಓದಿ: ಹೆಂಡತಿಗೆ ಕಿರುಕುಳ ಕೊಟ್ಟು ಸಾವು ತಂದುಕೊಂಡ ಗಂಡ; ಆಕೆ ಹೊಡೆಯಿರಿ ಎಂದಳು, ಅವರಿಬ್ಬರು ಕೊಂದೇ ಬಿಟ್ಟರು…

    ಫಸ್ಟ್ ಡೋಸ್​ ಲಸಿಕೆ ತೆಗೆದುಕೊಳ್ಳುತ್ತಿದ್ದಂತೆ ಫಸ್ಟ್​ ಹೀಗೇನಾದ್ರೂ ಮಾಡ್ಬಿಟ್ಟೀರಾ ಜೋಕೆ..!!!

    ಎಸ್‌ಆರ್‌ಎಸ್ ಟ್ರಾವೆಲ್ಸ್ ಮಾಲೀಕ ರಾಜಶೇಖರ್ ವಿಧಿವಶ: ಕೋವಿಡ್-19 ಸೋಂಕಿಗೆ ಬಲಿ

    ಟ್ವಿಟರ್​ನಲ್ಲಿ ಉಪೇಂದ್ರಗೆ 1 ಮಿಲಿಯನ್ ಫಾಲೋವರ್ಸ್; ಸ್ಯಾಂಡಲ್​ವುಡ್​​ನಲ್ಲಿ ಗರಿಷ್ಠ ಫಾಲೋವರ್ಸ್​ ಹೊಂದಿರುವ 2ನೇ ನಟ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts