More

    ಮುಖದಿಂದ ಹಿಡಿದು ಇಡೀ ದೇಹ ಮಾನವನನ್ನೇ ಹೋಲುವ ಮರಿಗೆ ಜನ್ಮ ನೀಡಿದ ಮೇಕೆ..!

    ಅಹಮದಾಬಾದ್​: ಗುಜರಾತ್​ನ ತಾಪಿ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದ ವಿಚಿತ್ರ ಘಟನೆ ನಡೆದಿದೆ. ಮೇಕೆಯೊಂದು ಮಾನವ ಮುಖವನ್ನೇ ಹೋಲುವ ಮರಿಗೆ ಜನ್ಮ ನೀಡಿದ್ದು, ಅದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

    ಈ ಘಟನೆ ತಾಪಿ ಜಿಲ್ಲೆಯ ಸೆಲ್ಟಿಪದ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಅಜಯ್​ಭಾಯ್​ ವಾಸವ ಎಂಬ ರೈತನ ಮನೆಯಲ್ಲಿ ಮೇಕೆ ವಿಚಿತ್ರ ಮರಿಗೆ ಜನ್ಮ ನೀಡಿದೆ. ಮರಿಯ ಮುಖ ಬಹುತೇಕ ಮಾನವನ ಮುಖವನ್ನೇ ಹೋಲುತ್ತಿದೆ. ಗಡ್ಡದ ಕೂದಲು ಮಾನವನ ಮಾದರಿಯಲ್ಲಿದೆ.

    ಇದನ್ನೂ ಓದಿರಿ: ಈ ರಾಶಿಯವರು ಇಂದು ಬಾಳಸಂಗಾತಿ ಜತೆ ವ್ಯವಧಾನದಿಂದ ನಡೆದುಕೊಳ್ಳಿ: ನಿತ್ಯಭವಿಷ್ಯ

    ಅಚ್ಚರಿಯೆಂದರೆ, ಕಾಲುಗಳು ಮತ್ತು ಕಿವಿಗಳನ್ನು ಹೊರತುಪಡಿಸಿದರೆ ಉಳಿದ ದೇಹ ಸಂಪೂರ್ಣ ಮಾನವ ಮಾದರಿಯಲ್ಲಿದೆ. ಹಣೆ, ಕಣ್ಣುಗಳು, ಮುಖ ಸೇರಿ ಬಹುತೇಕ ಭಾಗ ಥೇಟ್​ ಮಾನವನಂತಿದೆ. ಇನ್ನು ವಿಚಿತ್ರವೆಂದರೆ ಮರಿಗೆ ಬಾಲವೇ ಇಲ್ಲ.

    ಇದೀಗ ವಿಚಿತ್ರ ಮೇಕೆ ಮರಿ ನೋಡಿದ ಜನರಲ್ಲಿ ಅಚ್ಚರಿಯ ಜತೆಗೆ ಆಘಾತವೂ ಆಗಿದೆ. ಇದು ತಮ್ಮ ಪೂರ್ವಜರು ರೂಪ ಇರಬೇಕೆಂದು ಸ್ಥಳೀಯ ಜನರು ನಂಬಿದ್ದು, ವಿಚಿತ್ರ ಮೇಕೆ ಮರಿಯನ್ನು ನೋಡಲು ಗುಂಪು-ಗುಂಪಾಗಿ ಬರುತ್ತಿದ್ದಾರೆ. ಸಹಜವಾಗಿಯೇ ಹುಟ್ಟಿದ ಹತ್ತೇ ನಿಮಿಷಗಳಲ್ಲಿ ವಿಚಿತ್ರ ಮರಿ ಅಸುನೀಗಿದೆ. ಆದರೂ ಸಾಕಷ್ಟು ಮಂದಿ ಮೇಕೆ ಮರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. (ಏಜೆನ್ಸೀಸ್​)

    ನಿಮ್ಮ ಕಾಲಿನ ಹೆಬ್ಬೆರಳಿಗಿಂತ ಪಕ್ಕದ ಬೆರಳು ಉದ್ದವಾಗಿದ್ರೆ ಈ ಸ್ಟೋರಿ ಓದಿ: ನಿಮಗಿದೆ ಗುಡ್​ ನ್ಯೂಸ್​!

    ಪರಿಸ್ಥಿತಿಯ ಗಂಭೀರತೆ ಅರ್ಥ ಮಾಡಿಕೊಳ್ಳಿ: ಜನಮತ

    ಜನರ ಬವಣೆ ತಪ್ಪಲಿ; ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ಪರದಾಟ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts