ಈ ವರ್ಷದ 2ನೇ ಚಂದ್ರಗ್ರಹಣ ಹೀಗಿತ್ತು ನೋಡಿ..!

blank

ಬೆಂಗಳೂರು: 2020ನೇ ವರ್ಷದ ಎರಡನೇ ಚಂದ್ರ ಗ್ರಹಣ ಶುಕ್ರವಾರ (ಜೂ.5) ರಾತ್ರಿ ಸಂಭವಿಸಿದ್ದು, ಚಂದ್ರ ತನ್ನ ಅರ್ಧಾಕಾರದಲ್ಲಿ ಕಾಣದೇ ಪೂರ್ಣ ಪ್ರಮಾಣದಲ್ಲೇ ಗೋಚರಿಸಿದ್ದಾನೆ. ರಾತ್ರಿ 11.15ಕ್ಕೆ ಆರಂಭವಾಗಿ ಶನಿವಾರ ಬೆಳಗಿನ ಜಾವ ಸುಮಾರು 2.34ಕ್ಕೆ ಅಂತ್ಯವಾಗಿದೆ.

blank

ಇನ್ನೂ ಓದಿರಿ ಕರೊನಾ ಸೇನಾನಿಗಳಿಗೆ ಊಟ ಬಡಿಸಿದ್ದ ಯುವಕನನ್ನೂ ಬಿಡಲಿಲ್ಲ ಜವರಾಯ!

ಇದನ್ನು ನೆರಳು (ಪೆನಂಬ್ರಲ್) ಚಂದ್ರಗ್ರಹಣ ಎನ್ನಲಾಗಿದ್ದು, ಭಾರತ ಸೇರಿ ವಿಶ್ವದ ಹಲವು ರಾಷ್ಟ್ರಗಳಲ್ಲಿ ಗ್ರಹಣ ಗೋಚರಿಸಿದೆ. ಸುಮಾರು 3.18 ತಾಸು ಗ್ರಹಣ ನಡೆದಿದ್ದು, ರಾತ್ರಿ 12.45ರ ಸುಮಾರಿಗೆ ಪೂರ್ಣ ಪ್ರಮಾಣದಲ್ಲಿ ಗೋಚರಿಸಿತು.

ಇನ್ನೂ ಓದಿರಿ ಮಿಸ್ಡ್​ಕಾಲ್​ನಲ್ಲಿ ಪರಿಚಯವಾದ ಯುವಕನೊಂದಿಗೆ ಹಾಸಿಗೆ ಹಂಚಿಕೊಂಡ ಗೃಹಿಣಿ… ಆಕೆ ಗಂಡ ಮಾಡಿದ್ದಾದರೂ ಏನು?

ವರ್ಷದ ಮೊದಲ ಚಂದ್ರಗ್ರಹಣ ಈಗಾಗಲೇ ಜನವರಿಯಲ್ಲಿ ಸಂಭವಿಸಿದೆ. ಜೂ.5ರಂದು 2ನೇ ಬಾರಿ ಚಂದ್ರ ಗ್ರಹಣ ನಡೆದಿದ್ದು, ಜೂನ್ 21ಕ್ಕೆ ಸೂರ್ಯ ಗ್ರಹಣ ಸಂಭವಿಸಲಿದೆ. ನಂತರ ಜುಲೈ 5ರಂದು ಮತ್ತೊಂದು ಚಂದ್ರಗ್ರಹಣ ಸಂಭವಿಸಲಿದೆ. ಜೂನ್ 21ರಂದು ನಡೆಯುವ ಸೂರ್ಯ ಗ್ರಹಣ ಆಫ್ರಿಕಾ, ಆಗ್ನೇಯ ಯುರೋಪ್ ಮತ್ತು ಏಷ್ಯಾದ ಹಲವು ರಾಷ್ಟ್ರಗಳಲ್ಲಿ ಗೋಚರಿಸಲಿದೆ.

https://www.facebook.com/VVani4U/videos/286361216072144/

Share This Article
blank

ಕಾಲುಗಳಲ್ಲಿ ರಕ್ತನಾಳಗಳು ಗೋಚರಿಸಲು ಕಾರಣ ಏನು ಗೊತ್ತೆ?: ಅಪಾಯದ ಬಗ್ಗೆ ಅರಿವಿರಲಿ | Visible Veins

Visible Veins: ನಿಮ್ಮ ಕಾಲುಗಳಲ್ಲಿ ಅಥವಾ ನಮ್ಮ ಅಕ್ಕಪಕ್ಕದವರ ಮನೆಯಲ್ಲಿನ ಕೆಲವರಿಗೆ ಈ ರಕ್ತನಾಳಗಳು ಗೋಚರಿಸಿರುವುದು…

ಸಾಲ ಕೊಡಬೇಡಿ.. ನಿಮಗೆ ಸಮಸ್ಯೆಗಳು ಎದುರಾಗುತ್ತವೆ! money

money : ಸಂತೋಷ ಮತ್ತು ದುಃಖಗಳಿಂದ ತುಂಬಿರುವ ಜೀವನದಲ್ಲಿ ಹಣವು ಎಲ್ಲದಕ್ಕೂ ಮೂಲ ಮೂಲ ಎಂದು…

blank