More

    ಮೋದಿ ಹೆಸರನ್ನು ಕರ್ನಾಟಕದಲ್ಲಿ ಬಿಜೆಪಿ ಬಳಸಿಕೊಳ್ಳುವುದರಲ್ಲಿ ತಪ್ಪೇನು? ನಿರ್ಮಲಾ ಸೀತಾರಾಮನ್​ ಪ್ರಶ್ನೆ

    ಕಲಬುರಗಿ: ಪ್ರಧಾನಿ ಮೋದಿ ಅವರು ದೇಶದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರ ಹೆಸರನ್ನು ಕರ್ನಾಟಕದಲ್ಲಿ ಬಿಜೆಪಿ ಬಳಸಿಕೊಳ್ಳುವುದರಲ್ಲಿ ತಪ್ಪೇನು? ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಪ್ರಶ್ನೆ ಮಾಡಿದರು.

    ಗುರಿ ನಮ್ಮದಿದೆ

    ಕಲಬುರಗಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಹಳ ಮಹತ್ವ ಪೂರ್ಣ ಇದೆ. 2047ರಲ್ಲಿ ಭಾರತ ಅಭಿವೃದ್ಧಿ ಹೊಂದಿದ ದೇಶ ಮಾಡುವ ಗುರಿ ನಮ್ಮದಿದೆ. ಸಬ್ ಕಾ ಸಾಥ್ ಸಬ್ ಕಾ‌ ವಿಕಾಸ್ ಅನ್ನೋ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ಕರ್ನಾಟಕದಲ್ಲೂ ಕೂಡ ಸಬ್ ಕಾ ಸಾಥ್ ಸಬ್ ಕಾ‌ ವಿಕಾಸ್ ಮಾಡಬೇಕಾಗಿದೆ ಎಂದರು.

    ಇದನ್ನೂ ಓದಿ: ಚುನಾವಣಾ ಬಿಸಿಯ ನಡುವೆಯೂ ಸಿಎಂ ಬೊಮ್ಮಾಯಿ ಬೆನ್ನು ತಟ್ಟಿದ ಸಿದ್ದರಾಮಯ್ಯ!

    ಅಭಿವೃದ್ಧಿಯತ್ತ ಕೊಂಡೊಯ್ಯಲು ಪ್ರಧಾನಿ ಕೆಲಸ

    ಪ್ರಧಾನಿ ಮೋದಿ ಅಭಿವೃದ್ಧಿ ವಿಚಾರದಲ್ಲಿ ಪ್ರತಿ ತಿಂಗಳು ಅಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ನಡೆಸಿ ವಿಚಾರಿಸುತ್ತಾರೆ. ಕೇಂದ್ರದ ಯೋಜನೆಗಳು ಜಿಲ್ಲೆಯವರೆಗೆ ತಲುಪುತ್ತಿದೆಯಾ ಅಂತ ಜಿಲ್ಲಾಧಿಕಾರಿಗಳನ್ನು ವಿಚಾರಣೆ ಮಾಡುತ್ತಿದ್ದಾರೆ. ಬಜೆಟ್​ನಲ್ಲಿ ಭದ್ರ ಮೆಲ್ಡಂಡೆ ಯೋಜನೆ ಸಲುವಾಗಿ ಹಣ ನೀಡಲಾಗಿದೆ. ಈ ರೀತಿಯಲ್ಲಿ ಕರ್ನಾಟಕದ ಜೊತೆಗೆ ಭಾರತವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಪ್ರಧಾನಿ ಮೋದಿ ಕೆಲಸ ಮಾಡ್ತಿದ್ದಾರೆ ಎಂದು ಹೇಳಿದರು.

    ನೈತಿಕತೆ ಇಲ್ಲ

    ಚುನಾವಣೆಯಲ್ಲಿ ವಿಜೇತರಾದ ಬಳಿಕ ಶಾಸಕರು ಸಿಎಂ ಅವರನ್ನು ಆಯ್ಕೆ ಮಾಡ್ತಾರೆ. ಈಗ ಇರುವ ಸಿಎಂ ಚುನಾವಣೆಗೆ ನಿಂತಿದ್ದಾರೆ. ಚುನಾವಣೆ ಬಳಿಕ ಮುಂದಿನ ಸಿಎಂ ಬಗ್ಗೆ ನೋಡೋಣ. ಕಾಂಗ್ರೆಸ್ ವೀರೆಂದ್ರ ಪಾಟೀಲ್ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಿ, ಲಿಂಗಾಯಿತರಿಗೆ ಅಪಮಾನ ಮಾಡಿದೆ. ಅವರಿಗೆ ಲಿಂಗಾಯಿತರ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ.

    ಇದನ್ನೂ ಓದಿ: ಬೇಸಿಗೆಯಲ್ಲಿ ಮರೆಯದೇ ತಿನ್ನಬೇಕಾದ ತರಕಾರಿ.. ಹಣ್ಣುಗಳು ಯಾವವು ಗೊತ್ತಾ?

    ಒಂದೇ ಕುಟುಂಬದ ಗುಲಾಮರಾಗಿರುವ ಕಾಂಗ್ರೆಸ್​​ಗೆ ಯಾವುದೇ ನೈತಿಕತೆ ಇಲ್ಲ. ಮೋದಿ ದೇಶದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅವರ ಹೆಸರನ್ನು ಕರ್ನಾಟಕದಲ್ಲಿ ಬಿಜೆಪಿ ಬಳಸಿಕೊಳ್ಳುವುದರಲ್ಲಿ ತಪ್ಪೇನಿದೆ? ಎನ್ನುವ ಮೂಲಕ ಕಾಂಗ್ರೆಸ್​ಗೆ ತಿರುಗೇಟು ನೀಡಿದ ನಿರ್ಮಲಾ ಸೀತಾರಾಮನ್​, ಯಡಿಯೂರಪ್ಪ ಅವರಿಗೆ ಇವತ್ತಿಗೂ ಕೊಡಬೇಕಾದ ಗೌರವವನ್ನು ನಾವು ಕೊಡುತ್ತಿದ್ದೇವೆ ಎಂದರು. (ದಿಗ್ವಿಜಯ ನ್ಯೂಸ್​)

    ಚುನಾವಣಾ ಬಿಸಿಯ ನಡುವೆಯೂ ಸಿಎಂ ಬೊಮ್ಮಾಯಿ ಬೆನ್ನು ತಟ್ಟಿದ ಸಿದ್ದರಾಮಯ್ಯ!

    ಮಾದಕ ವಸ್ತು ಸೇವಿಸಲು ಕಳ್ಳತನವನ್ನೇ ಕಸುಬು ಮಾಡಿಕೊಂಡಿದ್ದ ಖತರ್ನಾಕ್ ಜೋಡಿ ಅಂದರ್!

    ಬೇಸಿಗೆಯಲ್ಲಿ ಮರೆಯದೇ ತಿನ್ನಬೇಕಾದ ತರಕಾರಿ.. ಹಣ್ಣುಗಳು ಯಾವವು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts