More

    ಬೇಸಿಗೆಯಲ್ಲಿ ಮರೆಯದೇ ತಿನ್ನಬೇಕಾದ ತರಕಾರಿ.. ಹಣ್ಣುಗಳು ಯಾವವು ಗೊತ್ತಾ?

    ಬೆಂಗಳೂರು: ಆರೋಗ್ಯವೇ ಭಾಗ್ಯ ಎನ್ನುವ ಮಾತಿದೆ. ಆರೋಗ್ಯ ಚೆನ್ನಾಗಿದ್ದರೆ ಯಾವ ಕೆಲಸವನ್ನಾದರು ಮಾಡಬಹುದಾಗಿದೆ. ಬೇಸಿಗೆಯ ಬಿಸಿ ಎದುರಿಸಲು ತರಕಾರಿ ಮತ್ತು ಹಣ್ಣುಗಳು ಉತ್ತಮ ಆಯ್ಕೆ ಆಗಿವೆ. ಹೀಗರುವಾಗ ಯಾವ ತರಕಾರಿ ಮತ್ತು ಹಣ್ಣುಗಳ ಸೇವನೆ ಮಾಡಬೇಕು ಎನ್ನುವ ಗೊಂದಲದಲ್ಲಿರುವವರಿಗೆ ಉತ್ತರ ಇಲ್ಲಿದೆ…

    ಆಯಾ ಋತುಮಾನಕ್ಕೆ ತಕ್ಕಂತೆ ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳಬೇಕು. ಬಿರು ಬೀಸಿಲಿಗೆ ನಮ್ಮ ಆಹಾರ ಪದ್ಧತಿಯೂ ಅತ್ಯಂತ ಸೂಕ್ಷ್ಮವಾಗಿರಬೇಕು. ದೇಹಕ್ಕೆ ತಂಪು ನೀಡುವ ಹಣ್ಣುಗಳ ಸೇವನೆ ಒಳ್ಳೆಯದಾಗಿದೆ. ಹಣ್ಣುಗಳು ನೀರು, ಪೌಷ್ಟಿಕಾಂಶ, ವಿಟಮಿನ್, ಆ್ಯಂಟಿಆಕ್ಸಿಡೆಂಟ್ಸ್ ಅಂಡ್ ಫೈಬರ್‍ನ ಉತ್ತಮ ಮೂಲವೂ ಹೌದು.

    ಬೇಸಿಗೆಯಲ್ಲಿ ಸೇವಿಸಬೇಕಾದ ಹಣ್ಣುಗಳು:
    ಮಾವಿನಹಣ್ಣು: ಮಾವಿನಹಣ್ಣುವಿನಲ್ಲಿ ಕೊಬ್ಬಿನಅಂಶ ಇರುವುದಿಲ್ಲ. ಮಾವಿನಹಣ್ಣಿನಲ್ಲಿ ಹೆಚ್ಚಿನ ಫೈಬರ್ ಅಂಶ ಇರುತ್ತದೆ. ವಿಟಮಿನ್ ಸಿಗೆ ಉತ್ತಮ ಮೂಲವೂ ಆಗಿದ್ದು, ದೇಹದ ತಾಪಮಾನ ಕಾಯ್ದುಕೊಳ್ಳಲು ನೆರವಾಗುತ್ತದೆ.

    ಕಲ್ಲಂಗಡಿ: ಬೇಸಿಗೆಯಲ್ಲಿ ಸೇವಿಸಬಹುದಾದ ಇನ್ನೊಂದು ಹಣ್ಣು. ನೀರಿನ ಅಂಶ ಇದ್ದು, ದೇಹಕ್ಕೆ ಅಗತ್ಯವಾಗಿರುತ್ತದೆ. ಇದರಲ್ಲಿ ಫೈಬರ್, ಪೊಟಾಷಿಯಂ, ವಿಟಮಿನ್ ಸಿ, ಬೆಟಾ ಕ್ಯಾರೊಟೆನೆ ಅಂಶಗಳು ಯಥೇಚ್ಚವಾಗಿ ಇರುತ್ತವೆ.

    ಇದನ್ನೂ ಓದಿ: VIDEO | ಬಿಕಿನಿ ಧರಿಸಿ ಚಿರತೆಯ ಜೊತೆ ಕ್ಯಾಟ್​​ ವಾಕ್​ ಮಾಡಿದ ಮಹಿಳೆ!

    ಪಪ್ಪಾಯ: ಈ ಹಣ್ಣಿನಲ್ಲಿ ವಿಟಮಿನ್ ಎ, ಇ ಅಂಶ ಕೂಡಾ ಇರುತ್ತದೆ. ಇದರಲ್ಲಿ ಕೊಬ್ಬಿನ ಅಂಶ ಕಡಿಮೆ ಇದ್ದು, ಅಜೀರ್ಣ ಸಂದರ್ಭದಲ್ಲಿ ಕಂಡುಬರುವ ದೇಹಲ್ಲಿನ ಉರಿ ಪ್ರಮಾಣವನ್ನು ಕುಗ್ಗಿಸಲಿ. ಆರೋಗ್ಯಕ್ಕೆ ತುಂಬಾ ಒಳ್ಳೆಯದಾಗಿದೆ.

    ಬೇಸಿಗೆಯಲ್ಲಿ ಸೇವಿಸಬೇಕಾದ ತರಕಾರಿಗಳು:

    ಸೌತೆಕಾಯಿ: ಬೇಸಿಗೆಯಲ್ಲಿ ತಪ್ಪದೇ ತಿನ್ನಬೇಕಾದ ತರಕಾರಿ ಅಂದ್ರೆ ಸೌತೆಕಾಯಿ. ಬೇಸಿಗೆಯಲ್ಲಿ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುತ್ತದೆ.ನೀರಿನಂಶವುಳ್ಳ ಹಣ್ಣು ತರಕಾರಿ ತಿನ್ನಬೇಕಾಗುತ್ತದೆ. ಆದ್ದರಿಂದಲೇ ನಾವು ಸೌತೆಕಾಯಿಯನ್ನ ತಿನ್ನಬೇಕು.

    ದಪ್ಪ ಮೆಣಸಿನಕಾಯಿ : ಬೇಸಿಗೆಯಲ್ಲಿ ಇದನ್ನು ಆಹಾರದ ಜೊತೆಗೆ ಸೇವಿಸುವುದು ಒಳ್ಳೆಯದು. ಇದರಲ್ಲಿ ವಿಟಮಿನ್ ಸಿ, ಎ, ಕೆ ಮತ್ತು ಇತರ ಪೋಷಕಾಂಶಗಳಾದ ಲುಟೀನ್ ಮತ್ತು ಪೊಟ್ಯಾಸಿಯಮ್ ಕೂಡ ಸಮೃದ್ಧವಾಗಿದೆ.

    ಇದನ್ನೂ ಓದಿ: ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎನ್ನುವುದಕ್ಕೆ ಈ ಫೋಟೋ ಸೂಕ್ತ ಉದಾಹರಣೆ!

    ಎಲೆಕೋಸು: ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ನೀರಿನ ಅಂಶವನ್ನು ಹೊಂದಿದೆ. ಜೀರ್ಣಕ್ರಿಯೆ ಮತ್ತು ರೋಗನಿರೋಧಕ ಕಾರ್ಯಗಳಲ್ಲಿ ಬಹಳ ಸಹಾಯಕವಾಗಿದೆ.

    ಬೆಂಡೆಕಾಯಿ: ದೇಹಕ್ಕೆ ಒಳ್ಳೆಯದಾಗಿದೆ. ಈ ತರಕಾರಿ ಸೇವನೆಯಿಂದ ಜೀರ್ಣಕ್ರೀಯೆ ಉತ್ತಮವಾಗಿರುತ್ತದೆ.

    VIDEO | ಬಿಕಿನಿ ಧರಿಸಿ ಚಿರತೆಯ ಜೊತೆ ಕ್ಯಾಟ್​​ ವಾಕ್​ ಮಾಡಿದ ಮಹಿಳೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts