More

    ವಿವಿಧ ಸಮುದಾಯಗಳ ಮೀಸಲು ಹೋರಾಟಗಾರರಿಗೆ ಸರ್ಕಾರದ ಅಭಯವೇನು?

    ಬೆಂಗಳೂರು: ಮೀಸಲು ವಿಚಾರದಲ್ಲಿ ವಿವಿಧ ಸಮುದಾಯಗಳು ನಡೆಸುತ್ತಿರುವ ಹೋರಾಟ ಕುರಿತು ರಾಜ್ಯ ಸರ್ಕಾರ ಸ್ಪಷ್ಟ ಅಭಯವೊಂದನ್ನು ನೀಡಿದೆ.

    ವಿಧಾನಸಭೆಯಲ್ಲಿ ಶೂನ್ಯ ವೇಳೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರ ನೀಡಿದ ಗೃಹ, ಕಾನೂನು ಸಂಸದೀಯ ಸಚಿವ ಬಸವರಾಜ ಬೊಮ್ಮಾಯಿ, ವೀರಶೈವ ಪಂಚಮಸಾಲಿ, ಕುರುಬ, ವಾಲ್ಮೀಕಿ ಹೀಗೆ ವಿವಿಧ ಸಮುದಾಯಗಳು ಬೇಡಿಕೆಗಳನ್ನು ಮುಂದಿಟ್ಟು ಹೋರಾಟ ಮಾಡುತ್ತಿವೆ ಇದೆಲ್ಲದರ ಸ್ಪಷ್ಟ ಅರಿವು ಸರ್ಕಾರಕ್ಕಿದೆ ಎಂದರು.

    ಈ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಕೂಡ ಕಾತುರದಿಂದಿದೆ. ತಡ ಮಾಡುವ ಉದ್ದೇಶ ಇಲ್ಲವೇ ಇಲ್ಲ. ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಂತೆ ತೀರ್ಮಾನ ಮಾಡಬೇಕಾಗಿದೆ. ಅದು ಸರ್ಕಾರದ ಜವಾಬ್ದಾರಿ ಮತ್ತು ಬದ್ಧತೆ ಎಂದು ಹೇಳಿದರು.

    ಇದನ್ನೂ ಓದಿರಿ: ಉಗ್ರರೊಂದಿಗೆ ತೀರ್ಥಹಳ್ಳಿಯ ಯುವಕರಿಬ್ಬರ ಸಂಪರ್ಕ? ಎನ್​ಐಎ ಅಧಿಕಾರಿಗಳು ಭೇಟಿ

    ವಿವಿಧ ರಾಜ್ಯಗಳಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಿಸಿದಾಗ ನ್ಯಾಯಾಲಯ ತಡೆಯಾಜ್ಞೆ ನೀಡಿದೆ, ಅಲ್ಲಿ ಸಮಸ್ಯೆಗಳು ಉದ್ಭವಿಸಿವೆ. ಇಲ್ಲಿ ಈ ರೀತಿಯ ಸಮಸ್ಯೆ ಆಗಬಾರದೆಂಬ ಕಾರಣಕ್ಕಾಗಿದೆ ತ್ರಿಸದಸ್ಯ ಉನ್ನತ ಸಮಿತಿ ರಚಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.

    ಈಗಿನ ಮೀಸಲಾತಿ ಬೇಡಿಕೆಯಿಂದ ಒಟ್ಟು ಮೀಸಲು ಪ್ರಮಾಣ ಶೇಕಡಾ 56 ದಾಟುತ್ತದೆ. ಶೇ.ಐವತ್ತು ಮೀರಬಾರದೆಂದು ಸುಪ್ರಿಂ ಹೇಳಿದೆ. ಒಂದು ವೇಳೆ ಶೇ.ಐವತ್ತು ದಾಟಿದರೆ ಸೂಕ್ತ ಕಾರಣಗಳಿರಬೇಕು ಎಂದು ತಿಳಿಸಿದೆ. ಹೀಗಾಗಿ ಸೂಕ್ತ ಕಾರಣಗಳನ್ನು ದೃಢೀಕರಿಸಿಕೊಳ್ಳುವ ಕೆಲಸ ಆಗಬೇಕಾಗಿದೆ ಎಂದರು.

    ಮುಂದೆ ಎದುರಾಗುವ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ. ಈಗಿರುವ ಮೀಸಲು ಚೌಕಟ್ಟು ಪುನರ್ ನಿಗದಿ ಆಗಬೇಕಾಗುತ್ತದೆ. ಹೀಗಾಗಿ ಸಾಂವಿಧಾನಿಕವಾಗಿ ಮತ್ತು ಕಾನೂನಾತ್ಮಕವಾಗಿ ಸೂಕ್ತ ನಿರ್ಧಾರ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ಮಾಡುತ್ತಿದ್ದೇವೆ, ಹೋರಾಟಗಾರರ ಆಶೋತ್ತರಗಳಿಗೆ ಪೂರಕವಾಗಿ ಕೆಲಸ ಮಾಡಿ ನ್ಯಾಯ ಕೊಡುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.

    ಇದನ್ನೂ ಓದಿರಿ: VIDEO| ನಾಯಿಯನ್ನು ತೋಳ ಎಂದು ನಂಬಿಸುತ್ತಿರುವ ಚೀನಾ ಮೃಗಾಲಯ: ವಿಡಿಯೋ ವೈರಲ್​!

    VIDEO: ನನ್ನನ್ನು ಕೊಂದುಬಿಡಿ… ಪ್ಲೀಸ್​ ಮಕ್ಕಳನ್ನು ಬಿಟ್ಟುಬಿಡಿ- ಮಂಡಿಯೂರಿ ಕುಳಿತ ಸಿಸ್ಟರ್​!

    ಅಭಿಮಾನಿಗೆ ಎಸಿ ಸರ್ವೀಸ್​ ಫ್ರೀ ! ಇದು ಹೃತಿಕ್ ರೋಶನ್​ ಜಾದೂ !

    ನಾನು 20 ವರ್ಷ ಕಾಂಗ್ರೆಸ್​ನಲ್ಲೇ ಇದ್ದೆ, ಜಾರಕಿಹೊಳಿ ಸಿಡಿ ಮಾಡಿದ್ದೇ ಕಾಂಗ್ರೆಸ್​: ಸಚಿವರ ಸ್ಫೋಟಕ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts