More

    ನಾನು ಶುದ್ಧ ಸಸ್ಯಾಹಾರಿ, ವಿದೇಶಕ್ಕೆ ಹೋಗುವಾಗ ಸ್ಪೂನ್‌ ಕೂಡ ಹಿಡ್ಕೋತೀನಿ; ಟ್ರೋಲ್​​ ಆದ ಸುಧಾಮೂರ್ತಿ

    ಬೆಂಗಳೂರು: ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಪತ್ನಿ ಸುಧಾಮೂರ್ತಿ ಎಲ್ಲರಿಗೂ ಪರಿಚಿತರು. ಸರಳ ವ್ಯಕ್ತಿತ್ವವನ್ನು ಅನೇಕ ಜನರು ಇಷ್ಟಪಡುತ್ತಾರೆ. ಸಾಮಾಜಿಕ ಕಾರ್ಯದ ಮೂಲಕವಾಗಿ ಸದಾ ಸುದ್ದಿಯಲ್ಲಿರುತ್ತಾರೆ. ಆದರೆ ಇದೀಗ ವೆಜ್..ನಾಜ್ ವೆಜ್ ಸ್ಪೂನ್ ಕುರಿತಾಗಿ ಮಾತನಾಡಿರುವುದು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ. ಇದಕ್ಕೆ ನೆಟಿಜನ್‌ಗಳು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ:  ಡ್ಯಾನ್ಸ್​, ಜಗಳ ಎಲ್ಲಾ ಆಯ್ತು; ಈಗ ಮೆಟ್ರೋದಲ್ಲಿ ಭಿಕ್ಷೆ ಬೇಡುತ್ತಿರುವ ವೃದ್ಧ

    ಸುಧಾ ಮೂರ್ತಿಯವರು ಇತ್ತೀಚೆಗೆ ಟಿವಿ ನಿರೂಪಕ ಕುನಲ್ ವಿಜಯಕುಮಾರ್ ಅವರ ‘ಖಾನೆ ಮೇ ಕೌನ್ ಹೈ’ ಯೂಟ್ಯೂಬ್ ಸಂಚಿಕೆಯಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಮಾತನಾಡಿದ ಸುಧಾಮೂರ್ತಿ ಅವರು, ನಾನು ಶುದ್ಧ ಸಸ್ಯಾಹಾರಿ, ಮೊಟ್ಟೆ, ಈರುಳ್ಳಿ, ಬೆಳ್ಳುಳ್ಳಿ ಕೂಡ ಸೇವಿಸುವುದಿಲ್ಲ. ಹೊರಗೆ ಹೋದರೆ ಶುದ್ಧ ಸಸ್ಯಾಹಾರಿ ಹೊಟೇಲ್ ನ್ನು ಹುಡುಕುತ್ತೇನೆ. ಸಸ್ಯಾಹಾರಿ ಮತ್ತು ಮಾಂಸಾಹಾರಿ ಅಡುಗೆಗಳಿಗೆ ಒಂದೇ ಸ್ಪೂನ್ ಬಳಸಿದರೆ ಎಂಬ ಆತಂಕ ನನಗೆ, ಹೀಗಾಗಿ ವಿದೇಶಕ್ಕೆ ಹೋಗುವಾಗ ಸ್ಪೂನ್ ಕೂಡ ಜತೆಗೆ ಒಯ್ಯುತ್ತೇನೆ, ರವೆ ಹುರಿದು ಕೊಂಡೊಯ್ಯುತ್ತೇನೆ, ಬಿಸಿನೀರು ಜೊತೆಗೆ ತೆಗೆದುಕೊಂಡು ಹೋಗುತ್ತೇನೆ. ನಾನು ಮೊದಲು ನನ್ನ ಅಜ್ಜಿಯನ್ನು ಅವರು ಹೊರಗಡೆ ಯಾವುದೇ ಆಹಾರ ತಿನ್ನದಿರುವುದಕ್ಕೆ ತಮಾಷೆ ಮಾಡುತ್ತಿದ್ದೆ, ಈಗ ಅದನ್ನು ನಾನು ಅನುಸರಿಸುತ್ತಿದ್ದೇನೆ ಎಂದು ಕೂಡ ಹೇಳಿದ್ದಾರೆ. ಈ ವಿಡಿಯೋ ವೈರಲ್​​ ಆಗುತ್ತಿದ್ದಂತೆ ಪರ ಹಾಗೂ ವಿರೋಧ ಚರ್ಚೆ ಜೆತೆಗೆ ಕೆಲವು ಕಾಮೆಂಟ್​​​ ಬರುತ್ತಿವೆ.

    ಇದನ್ನೂ ಓದಿ: ನೀನು ಮುಸ್ಲಿಂ..ಬುರ್ಖಾ ಧರಿಸದಿದ್ದರೇ ಬಸ್ ಹತ್ತಲು ಬಿಡುವುದಿಲ್ಲವೆಂದು ವಿದ್ಯಾರ್ಥಿನಿಯನ್ನು ಕೆಳಗಿಳಿಸಿದ ಬಸ್​​ ಚಾಲಕ

    ಸದ್ಯ ಈ ಕಾಮೆಂಟ್‌ಗಳಿಗೆ ನೆಟಿಜನ್‌ಗಳು ವಿಭಿನ್ನ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಮನೆಯಿಂದ ಆಹಾರವನ್ನು ಒಯ್ಯುವುದು ನಿಜವಾಗಿಯೂ ಒಳ್ಳೆಯ ಅಭ್ಯಾಸ ಎಂದು ಕೆಲವರು ಒಪ್ಪಿಕೊಂಡರೆ, ಇತರರು ಒಪ್ಪಿಲ್ಲ. ಜನರನ್ನು ಅವರ ಆಹಾರದ ಆದ್ಯತೆಗಳಿಂದ ನಿರ್ಣಯಿಸಬಾರದು ಅವರನ್ನು ಗೌರವದಿಂದ ನಡೆಸಿಕೊಳ್ಳುವತ್ತ ಗಮನ ಹರಿಸಬೇಕು ಎಂದು ಕೆಲವರು ಹೇಳಿದರು.

    ಇದನ್ನೂ ಓದಿ: ATM ಒಳಗೆ ಹೋದಾಗ ಅಪಹರಣ​: ಇಡೀ ರಾತ್ರಿ ಬೆಟ್ಟದಲ್ಲಿ ನಡೆದ ಕರಾಳ ಘಟನೆ ಬಿಚ್ಚಿಟ್ಟ ಮಣಿಪುರದ ಯುವತಿ

    ಸುಧಾ ಮೂರ್ತಿಯವರ ಸರಳತೆ ನಿಜಕ್ಕೂ ಬೇಸರ ತಂದಿದೆ’ ಎಂದು ವ್ಯಂಗ್ಯ ಮಾಡಿದ್ದಾರೆ. ಮತ್ತೊಬ್ಬರು ಟ್ವೀಟ್ ಮಾಡಿ ‘ವಿದೇಶಿ ಪ್ರವಾಸಕ್ಕೆ ಹೋಗುವಾಗ ಸುಧಾ ಮೂರ್ತಿ ತನ್ನ ಮನೆಯನ್ನು ತನ್ನೊಂದಿಗೆ ಒಯ್ಯಬೇಕು. ಹೋಟೆಲ್ ಕೋಣೆಯನ್ನು ಇನ್ನೊಬ್ಬರು ಬಳಸಿದ್ದರೆ ಏನು ಮಾಡೋದು? ಎಂದು ವ್ಯಂಗ್ಯ ಮಾಡಿದ್ದಾರೆ.

    ಫೇಸ್‌ಬುಕ್ ಪ್ರೇಮ; ತ್ರಿವಳಿ ಕೊಲೆಯಲ್ಲಿ ಅಂತ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts