More

    ಗೋಗ್ರಾದಿಂದ ಚೀನಾ ಸೈನಿಕರು ಹಿಂದೆ ಸರಿದಿದ್ದೇ ಸುಳ್ಳು ಎಂದ ನಿವೃತ್ತ ಕರ್ನಲ್​: ರಾಹುಲ್​ ಗಾಂಧಿ ಕೆಂಡಾಮಂಡಲ

    ನವದೆಹಲಿ: ಪೂರ್ವ ಲಡಾಖ್​ನ ಗಡಿಯಲ್ಲಿ ಕಾಲುಕೆರೆದು ಜಗಳಕ್ಕೆ ನಿಂತಿದ್ದ ಚೀನಾ ಅಲ್ಲಿನ ಗೋಗ್ರಾ, ಹಾಟ್​ಸ್ಪ್ರಿಂಗ್​, ಪ್ಯಾಂಗ್ಯಾಂಗ್​ಗಳಲ್ಲಿ ತನ್ನ ಸೈನಿಕರನ್ನು ಜಮಾವಣೆ ಮಾಡಿತ್ತು.

    ನಂತರ ಭಾರತ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​ ಮತ್ತು ಚೀನಾ ವಿದೇಶಾಂಗ ವ್ಯವಹಾರಗಳ ಸಚಿವ ವಾಂಗ್​ ಯಿ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು.

    ವಾಸ್ತವ ಗಡಿ ನಿಯಂತ್ರಣಾ ರೇಖೆ (ಎಲ್​​ಎಸಿ) ಬಳಿ ಶಾಂತಿ ಸ್ಥಾಪನೆ ಕುರಿತಂತೆ ನಡೆದ ಚರ್ಚೆಯ ಬಳಿಕ ಚೀನಾ ತನ್ನ ಸೈನಿಕರನ್ನು ಹಿಂದಕ್ಕೆ ಕರೆಸಿಕೊಂಡಿತ್ತು. ಗಲ್ವಾನ್​, ಗೋಗ್ರಾ, ಹಾಟ್​ಸ್ಪ್ರಿಂಗ್​, ಪ್ಯಾಂಗಾಂಗ್​ ತ್ಸೋ ಬಳಿಯಿಂದ ಚೀನಾ ಸೈನಿಕರು ಹಿಂದಕ್ಕೆ ಸರಿದಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿತ್ತು.

    ಆದರೆ ಭಾರತೀಯ ಸೇನೆಯಲ್ಲಿ ಈ ಹಿಂದೆ ಕರ್ನಲ್​ ಆಗಿದ್ದ ಅಜಯ್​ ಶುಕ್ಲಾ ಎಂಬುವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಚೀನಾ ಸೈನಿಕರನ್ನು ಹಿಂದಕ್ಕೆ ಕರೆಸಿಕೊಂಡ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

    ಹಾಟ್ ಸ್ಪ್ರಿಂಗ್ಸ್​ ಮತ್ತು ಗೋಗ್ರಾ ಪ್ರದೇಶದಿಂದ ಚೀನಾ ತನ್ನ ಸೈನಿಕರನ್ನು ಹಿಂದಕ್ಕೆ ಕರೆಸಿಕೊಂಡಿಲ್ಲ. ನನಗೆ ಕೆಲವು ಖಚಿತ ಮೂಲಗಳಿಂದ ಮಾಹಿತಿ ಸಿಕ್ಕಿದೆ. ಅದೆರಡೂ ಪ್ರದೇಶಗಳಿಂದ ಚೀನಾ ತನ್ನ ಸೈನಿಕರನ್ನು ವಾಪಸ್​ ಕರೆಸಿಕೊಳ್ಳಲು ನಿರಾಕರಿಸಿದೆ. ಕೇಂದ್ರ ಸರ್ಕಾರ ಜನರ ದಾರಿ ತಪ್ಪಿಸುತ್ತಿದೆ ಎಂದು ಅಜಯ್​ ಶುಕ್ಲಾ ಹೇಳಿದ್ದಾರೆ. ಇದನ್ನೂ ಓದಿ: ಗುಣಮುಖರಾಗಿದ್ದಾರೆ 106 ಸೋಂಕಿತರು ; ಶನಿವಾರ 25 ಜನರಿಗೆ ಸೋಂಕು ದೃಢ

    ಅಜಯ್​ ಶುಕ್ಲಾ ಅವರ ಸಂದರ್ಶನದ ಪತ್ರಿಕಾ ವರದಿಯನ್ನು ತನ್ನ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿಕೊಂಡಿರುವ ರಾಹುಲ್​ ಗಾಂಧಿ, ಮತ್ತೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಲ್ಲಿ ಏನು ನಡೆಯುತ್ತಿದೆ? ನಮ್ಮ ಭಾರತ ಮಾತೆಯ ಪವಿತ್ರ ಭೂಮಿಯನ್ನು ಚೀನಾ ಕಬಳಿಸಿದೆ ಎಂದು ಟ್ವೀಟ್​ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಕೂಡ ರಾಹುಲ್ ಗಾಂಧಿ, ಚೀನಾಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಶರಣಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.(ಏಜೆನ್ಸೀಸ್​)

    ವಿಕಾಸ್​ ದುಬೆ ಎನ್​ಕೌಂಟರ್​ ವೇಳೆ ಗಾಯಗೊಂಡಿದ್ದ ಪೊಲೀಸ್​ ಪೇದೆ ಆಸ್ಪತ್ರೆಗೆ ಹೋದಾಗ ಕಾದಿತ್ತು ಶಾಕ್​ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts