More

    ನಾಲ್ಕು ವರ್ಷಗಳ ಹಿಂದೆ ನಡೆದದ್ದು ಇತಿಹಾಸ; ಸೆಮಿಫಿನಾಲೆಯಲ್ಲಿ ನಡೆಯುವುದು…: ಲಾಕಿ ಫರ್ಗ್ಯೂಸನ್

    ಮುಂಬೈ: ಹಾಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ನಿರ್ವಹಣೆಯೊಂದಿಗೆ ಭಾರತ ತಂಡದ ತನ್ನ ಲೀಗ್​ ಹಂತದ ಎಲ್ಲಾ ಪಂದ್ಯಗಳಲ್ಲಿ ಜಯಗಳಿಸಿ ಅಜೇಯವಾಗಿ ಸೆಮಿಫಿನಾಲೆ ಪ್ರವೇಶಿಸಿದೆ. ಸೆಮಿಫಿನಾಲೆಯಲ್ಲಿ ಭಾರತ ತಂಡ ನಾಲ್ಕನೇ ಸ್ಥಾನಿ ನ್ಯೂಜಿಲೆಂಡ್​ ತಂಡವನ್ನು ಎದುರಿಸಲಿದ್ದು, ತನ್ನ ಹಳೆಯ ಸೇಡನ್ನು ತೀರಿಸಿಕೊಳ್ಳಲು ಸಜ್ಜಾಗಿದೆ.

    ಇನ್ನು ಈ ಕುರಿತು ಮಾತನಾಡಿರುವ ನ್ಯೂಜಿಲೆಂಡ್​ ತಂಡದ ವೇಗಿ ಲಾಕಿ ಫರ್ಗ್ಯೂಸನ್​ ಇತಿಹಾಸ ಹೆಚ್ಚು ನೆನಪಿರುವುದಿಲ್ಲ. ನವೆಂಬರ್ 15ರಂದು ಭಾರತದ ವಿರುದ್ಧ ನಡೆಯುವ ಸೆಮಿಫಿನಾಲೆಯಲ್ಲಿ ನಾವು ಹೇಗೆ ಆಡುತ್ತೇವೆ ಎಂಬುದು ಅತಿ ಮುಖ್ಯವಾಗಿದೆ.

    ನಾಲ್ಕು ವರ್ಷಗಳ ಹಿಂದಿನ ಏಕದಿನ ವಿಶ್ವಕಪ್​ ಸೆಮಿಫಿನಾಲೆಯಲ್ಲಿ ನಡೆದಿದ್ದು, ಒಂದು ಅದ್ಭುತ ಆಟ. ಈಗ ಅದಾದ ಬಳಿಕ ಬಹಳಷ್ಟು ಬದಲಾವಣೆಯಾಗಿದ್ದು, ಆ ನಂತರ ಸಾಕಷ್ಟು ಕ್ರಿಕೆಟ್​ ಆಡಲಾಗಿದೆ. ಎರಡು ತಂಡಗಳು ಫೈನಲ್​ ಪ್ರವೇಶಿಸುವುದು ಅತಿ ಮುಖ್ಯವಾಗಿದ್ದು, ಹೇಗೆ ಪ್ರವೇಶಿಸಲಿವೆ ಎಂಬುದೇ ಬಹು ರೋಚಕವಾಗಿದೆ.

    NewZealand

    ಇದನ್ನೂ ಓದಿ: VIDEO| ದಲಿತ ಮತದಾರರ ಮೇಲೆ ಕಣ್ಣು ಹಾಯಿಸಿದ ಬಿಜೆಪಿ; ಪ್ರಧಾನಿ ಮೋದಿಯನ್ನು ತಬ್ಬಿ ಭಾವುಕರಾದ ಮಾದಿಗ ನಾಯಕ

    ನಾವು ವಾಂಖೆಡೆಯಲ್ಲಿ ಆಡಲು ಬಹಳ ಉತ್ಸುಕರಾಗಿದ್ಧೇವೆ. ಇಲ್ಲಿ ನಾವು ಕೆಲವು ಪಂದ್ಯಗಳನ್ನು ಆಡಿದ್ದು, ಪ್ರೇಕ್ಷಕರು ನಮಗೆ ಬೆಂಬಸಿದಂತಹ ರೀತಿ ಮರೆಯಲು ಸಾಧ್ಯವಿಲ್ಲ. ಒಂದು ತಂಡವಾಗಿ ನಾವು ಹೇಗೆ ಆಡುತ್ತೇವೆ ಎಂಬುದು ಬಹಳ ಮುಖ್ಯವಾಗಿದೆ ಎಂದು ನ್ಯೂಜಿಲೆಂಡ್​ ವೇಗಿ ಲಾಕಿ ಫರ್ಗ್ಯೂಸನ್​ ಹೇಳಿದ್ದಾರೆ.

    ಮ್ಯಾಂಚೆಸ್ಟರ್‌ನಲ್ಲಿ ನಡೆದ 2019 ರ ವಿಶ್ವಕಪ್ ಸೆಮಿಫಿನಾಲೆಯಲ್ಲಿ ನ್ಯೂಜಿಲೆಂಡ್​ ತಂಡ ಭಾರತ ತಂಡವನ್ನು 18 ರನ್​ಗಳಿಂದ ಸೋಲಿಸಿತ್ತು. ಐಸಿಸಿ ಟೂರ್ನಿಗಳಲ್ಲಿ ಉತ್ತಮ ದಾಖಲೆ ಹೊಂದಿರುವ ನ್ಯೂಜಿಲೆಂಡ್​ ತಂಡವು ಕಳೆದ ಐದು ವಿಶ್ವಕಪ್​ ಆವೃತ್ತಿಗಳಲ್ಲಿ ಸೆಮಿಫಿನಾಲೆ ಪ್ರವೇಶಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts