More

    ಉಗ್ರವಾದಕ್ಕೆ ಮಟ್ಟ, ಅಕ್ರಮಣಶೀಲತೆಗೆ ಕಡಿವಾಣ; ಮೋದಿ ಪರೋಕ್ಷ ಎಚ್ಚರಿಕೆ ಯಾರಿಗೆ?

    ನವದೆಹಲಿ: ಭಾರತೀಯ ಯೋಧರ ಸಾಮರ್ಥ್ಯ ಏನೆಂಬುದು ಲಡಾಖ್​ ಮೂಲಕ ಇಡೀ ಜಗತ್ತಿಗೆ ಅರಿವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಈ ವಿಚಾರ ಪ್ರಸ್ತಾಪಿಸಿದ ಅವರು, ಭಾರತ- ಪಾಕ್​ ನಡುವಿನ ಗಡಿ ನಿಯಂತ್ರಣ ರೇಖೆಯಿಂದ (ಎಲ್​ಒಸಿ) ಭಾರತ- ಚೀನಾ ಮಧ್ಯದ ವಾಸ್ತವ ಗಡಿ ರೇಖೆ (ಎಲ್​ಎಸಿ)ವರೆಗೆ ದೇಶದ ಸೇನಾಪಡೆಗಳು, ಸಾಹಸಿ ಯೋಧರು ತಮ್ಮದೇ ಆದ ಭಾಷೆಯಲ್ಲಿ ಪ್ರತ್ಯುತ್ತರ ನೀಡಿದ್ದಾರೆ. ಭಾರತದ ಸರ್ವಭಮತೆಯನ್ನು ಕಾಪಾಡಿದ್ದಾರೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ; ಪ್ರಧಾನಿ ಮೋದಿ ಹೇಳಿದ ಮೂರು ದೇಶೀಯ ಕರೊನಾ ಲಸಿಕೆಗಳಾವವು? ಇಲ್ಲಿದೆ ಮಾಹಿತಿ? 

    ಶತ್ರುಗಳ ಭಯೋತ್ಪಾದನಾ ಕೃತ್ಯವೇ ಆಗಲಿ ಅಥವಾ ಅಕ್ರಮಣಶೀಲತೆಯೇ ಆಗಿರಲಿ ಎರಡನ್ನೂ ನಿಗ್ರಹಿಸುವ ಶಕ್ತಿ ಭಾರತಕ್ಕಿದೆ. ಹಲವು ಸವಾಲುಗಳನ್ನು ಎದುರಿಸುತ್ತಿರುವುದರ ನಡುವೆಯೂ ದೇಶದ ಗಡಿ ಹಾಗೂ ಶಕ್ತಿಯನ್ನು ಪ್ರಶ್ನಿಸುವ ದುಷ್ಕೃತ್ಯಗಳು ನಡೆದವು.

    ತನ್ನ ಸಾಮರ್ಥ್ಯದ ಮೇಲೆ ಇನ್ನಿಲ್ಲದ ವಿಶ್ವಾಸದೊಂದಿಗೆ, ಇಡೀ ದೇಶವೇ ಹೊಸ ಉತ್ಸಾಹದೊಂದಿಗೆ ಮುನ್ನಡೆಯುತ್ತಿದೆ. ಸವಾಲುಗಳಿಗೆ ಯೋಧರು ಹೇಗೆ ಸ್ಪಂದಿಸುತ್ತಾರೆ, ದೇಶ ಏನು ಮಾಡಬಲ್ಲುದು ಎಂಬುದನ್ನು ಲಡಾಖ್​ನಲ್ಲಿ ಇಡೀ ಜಗತ್ತು ಸಾಕ್ಷಿಯಾಗಿದೆ ಎಂದು ಮೋದಿ ಹೇಳಿದ್ದಾರೆ.

    ಇದನ್ನೂ ಓದಿ; ಕರೊನಾ ನಿಯಂತ್ರಿಸುವಲ್ಲಿ ಮತ್ತೊಂದು ದಾಖಲೆ ಬರೆದ ದೆಹಲಿ; ದೇಶದಲ್ಲಿಯೇ ನಂಬರ್​ ಒನ್​…!

    ನೆರೆ ರಾಷ್ಟ್ರದ ಅಕ್ರಮಣಶೀಲತೆಗೆ ದಿಟ್ಟ ಉತ್ತರ ನೀಡಿದ್ದೇವೆ ಎಂದು ಚೀನಾದ ಹೆಸರೇಳದೆ ಕುಟುಕಿದರು. ಇನ್ನೊಂದೆಡೆ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಭಯೋತ್ಪಾದಕರನ್ನು ಪಟ್ಟ ಹಾಕಿದ್ದಾಗಿ ಪಾಕ್​ಗೆ ಎಚ್ಚರಿಕೆ ಸಂದೇಶ ರವಾನಿಸಿದರು.

    ಮಹಿಳೆಯರ ಮದುವೆ ವಯಸ್ಸು ಹದಿನೆಂಟಲ್ಲ..! ಕನಿಷ್ಠ ಪ್ರಾಯ ಹೆಚ್ಚಳದ ಸುಳಿವು ನೀಡಿದ ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts