More

    ಡಿಪ್ರೆಶನ್​ನ ಗುಣಲಕ್ಷಣಗಳು ಏನು? ಅದಕ್ಕೆ ಪರಿಣಾಮಕಾರಿಯಾದ ಚಿಕಿತ್ಸೆ ಏನು?

    ಬೆಂಗಳೂರು: ಡಿಪ್ರೆಶನ್ ಸಾಮಾನ್ಯವಾದ ಮಾನಸಿಕ ಆರೋಗ್ಯ ಅಸ್ವಸ್ಥತೆ. ಅದರಲ್ಲಿ ಹಲವಾರು ರೀತಿಯ ರೋಗಲಕ್ಷಣಗಳು ಕಂಡುಬರುತ್ತದೆ. ದುಃಖದ ಭಾವನೆಗಳು, ನಿದ್ರೆಯ ತೊಂದರೆ, ನಿರಾಸಕ್ತಿ ಮತ್ತು ಹಸಿವಿನ ಬದಲಾವಣೆಗಳು ಡಿಪ್ರೆಶನ್​ನ ಪ್ರಮುಖ ಗುಣಲಕ್ಷಣಗಳು. ಈ ರೋಗಲಕ್ಷಣಗಳು ಕೆಲಸ, ಶಾಲೆ, ವೈಯಕ್ತಿಕ ಸಂಬಂಧಗಳಲ್ಲಿ ಮನುಷ್ಯನ ಸಾಮರ್ಥ್ಯವನ್ನು ಕುಗ್ಗಿಸುತ್ತದೆ.

    ಡಿಪ್ರೆಶನ್​ಗೆ ಬಹಳ ಪರಿಣಾಮಕಾರಿಯಾದ ಚಿಕಿತ್ಸೆ ಥೆರಪಿ ಮತ್ತು ಮಾತ್ರೆಗಳು. ಕೆಲವರಿಗೆ ಚಿಕಿತ್ಸೆಯಲ್ಲಿ ವ್ಯಾಯಾಮ ಕೂಡ ಪ್ರಮುಖ ಪಾತ್ರವನ್ನು ವಹಿಸುತ್ತದೆ. ವ್ಯಾಯಾಮ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತದೆ ಎಂಬುದು ನಮಗೆಲ್ಲಾ ತಿಳಿದಿದೆ. ಆದರೊಂದಿಗೆ ಮಾನಸಿಕ ಆರೋಗ್ಯದ ಮೇಲೆ ಕೂಡ ಗಮನಾರ್ಹ ಪ್ರಯೋಜನಗಳನ್ನು ಕಾಣಬಹುದು. ಪ್ರಮುಖವಾಗಿ ವ್ಯಾಯಾಮ ಡಿಪ್ರೆಶನ್ ದೂರಗೊಳಿಸಲು ಪರಿಣಾಮಕಾರಿಯಾದ ಅಸ್ತ್ರವಾಗಿದೆ.

    ವ್ಯಾಯಾಮ ಡಿಪ್ರೆಶನ್ ಗುಣಪಡಿಸಲು ಏಕೆ ಪರಿಣಮಕಾರಿಯೆಂದರೆ ವ್ಯಕ್ತಿಯ ಮನಸ್ಥಿತಿಯನ್ನು ಸುಧಾರಿಸುತ್ತದೆ. ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಾಗ ಎಂಡಾರ್ಫಿನ್​ ಎಂಬ ರಾಸಾಯನಿಕ ದೇಹದಲ್ಲಿ ಉತ್ಪತ್ತಿಯಾಗುತ್ತದೆ. ಇದರಿಂದ ಮನಸ್ಥತಿ ಸುಧಾರಿಸುವುದರ ಜತೆಗೆ ಒತ್ತಡ ಮತ್ತು ಆತಂಕದ ಭಾವನೆಗಳನ್ನು ಕಡಿಮೆ ಮಾಡುತ್ತದೆ.

    ಆತ್ಮಗೌರವ ಮತ್ತು ತನ್ನ ದೇಹದ ಮೇಲೆ ತನಗಿರುವ ಅಭಿಪ್ರಾಯ ಡಿಪ್ರಶನ್ ಇರುವವರಿಗೆ ಕುಂಟಿತವಾಗಿರುತ್ತದೆ. ವ್ಯಾಯಾಮ ಅದನ್ನು ಹೆಚ್ಚಿಸುವುದರಲ್ಲಿ ಪ್ರಯೋಜನಕಾರಿಯಾಗಿದೆ. ಏಜೆನ್ಸೀಸ್

    ಮನೆಯಲ್ಲೇ ಕುಳಿತು 3Dಯಲ್ಲಿ ನೋಡಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟರ್ಮಿನಲ್​..!

    ಜೆಡಿಎಸ್ ತೊರೆದು ಕಾಂಗ್ರೆಸ್​​ನತ್ತ ವೈ.ಎಸ್​.ವಿ ದತ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts