More

    ಎಲ್ಲಾ ಕಾಲಕ್ಕೂ, ಎಲ್ಲರಿಗೂ ಸಲ್ಲುವ ಅತ್ಯುತ್ತಮ ಮನೆ ಮದ್ದುಗಳು

    *ಮೊಡವೆಗಳಿಗೆ ಮೊಟ್ಟೆಯ ಬಿಳಿಭಾಗವು ಒಳ್ಳೆಯ ಚಿಕಿತ್ಸೆ. ಇದರಲ್ಲಿ ಪ್ರೋಟೀನ್ ಮತ್ತು ಖನಿಜಗಳಿದ್ದು, ಇದು ಮೊಡವೆಗಳ ವಿರುದ್ಧ ಹೋರಾಡುತ್ತದೆ ಮತ್ತು ತ್ವಚೆಯನ್ನು ಪುನರ್ಯೌವನಗೊಳಿಸುತ್ತದೆ. ಮೊಟ್ಟೆಯ ಬಿಳಿಭಾಗವನ್ನು ತೆಗೆದು ಅದನ್ನು ನಿಮ್ಮ ತ್ವಚೆಗೆ ಹಚ್ಚಿ ಒಣಗಲು ಬಿಡಿ. ಸ್ವಲ್ಪ ಸಮಯದ ಬಳಿಕ ತೊಳೆಯಿರಿ.

    *ಆಲೂಗಡ್ಡೆಯು ತ್ವಚೆಗೆ ಅತ್ಯುತ್ತಮ ಬ್ಲೀಚಿಂಗ್. ವಯಸ್ಸಾದಂತೆ ಕಾಣುವ ಚಿಹ್ನೆಗಳನ್ನು ಕಡಿಮೆಮಾಡುವ ಗುಣಲಕ್ಷಣಗಳನ್ನೂ ಹೊಂದಿದೆ. ಪ್ರತಿ ದಿನ ನಿಮ್ಮ ಮುಖಕ್ಕೆ ಆಲೂಗಡ್ಡೆ ಸ್ಲೈಸ್ ಬಳಸಿಕೊಂಡು ಮಸಾಜ್ ಮಾಡಿದರೆ ಸುಕ್ಕುಗಳು ಮತ್ತು ಸೂಕ್ಷ÷್ಮ ರೇಖೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಆಲೂಗಡ್ಡೆ ಅನ್ನು ಮಾಸ್ಕ್ ಆಗಿಯೂ ಬಳಸಬಹುದು.

    *ದಂಟಿನ ಸೊಪ್ಪಿನ ರಸದೊಂದಿಗೆ ಹಾಲು, ನಿಂಬೆರಸ ಸೇರಿಸಿ ಮುಖಕ್ಕೆ ಹಚ್ಚಿ ಮೃದುವಾಗಿ ಮಸಾಜ್ ಮಾಡಿ ನಂತರ ಬಿಸಿನೀರಿನಲ್ಲಿ ತೊಳೆಯಬೇಕು.

    *ಒಣಚರ್ಮವಿರುವವರು ಕ್ಯಾರಟ್ ಎಲೆಯನ್ನು ಅರಿಶಿಣ ಸೇರಿಸಿ ಅರೆದು ಹಚ್ಚಿಕೊಳ್ಳುವುದರಿಂದ ಚರ್ಮ ಮೃದುವಾಗಿ ಹೊಳಪು ಬರುತ್ತದೆ.
    ಕೊತ್ತಂಬರಿಸೊಪ್ಪು ಸ್ವಲ್ಪ ಅರಿಶಿಣ ಸೇರಿಸಿ ಅರೆದು ಹಚ್ಚಿಕೊಳ್ಳುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ.

    *ಸೂರ್ಯನಿಂದ ಉಂಟಾಗುವ ಕಂದುಬಣ್ಣವನ್ನು ತೆಗೆಯಲು ಒಂದು ಮಾವನ್ನು ಹಿಸುಕಿ, ೧ ಚಿಕ್ಕ ಚಮಚ ಮೊಸರು ಹಾಗೂ ನಿಂಬೆ ರಸವನ್ನು ಚೆನ್ನಾಗಿ ಬೆರೆಸಿ, ಈ ಮಿಶ್ರಣವನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಹಚ್ಚಿರಿ. ಸುಮಾರು ೧೫ ನಿಮಿಷಗಳವರೆಗೆ ಬಿಟ್ಟು ನಂತರ ತಣ್ಣೀರಿನಿಂದ ತೊಳೆಯಬೇಕು. ನೀವು ಇದನ್ನು ತೋಳು ಹಾಗೂ ಇತರೆ ಹೊರ ತೆರೆಯಲ್ಪಟ್ಟ ಚರ್ಮದ ಕಂದು ಬಣ್ಣ ನಿವಾರಣೆಗಾಗಿ ಬಳಸಬಹುದು.

    *ತ್ವಚೆಯ ಸೌಂದರ್ಯ ವೃದ್ಧಿಗೆ ಆಲೋವೇರಾ ಹಚ್ಚಿ. ಇದು ತ್ವಚೆಯಲ್ಲಿನ ನೆರಿಗೆಯನ್ನು ಕಡಿಮೆಗೊಳಿಸಿ ಮುಖದ ಸೌಂದರ್ಯ ವೃದ್ಧಿಸುತ್ತದೆ.

    *ಜೇನುತುಪ್ಪದಲ್ಲಿ ಶಿಲೀಂದ್ರ ವಿರೋಧಿ ಗುಣಗಳಿರುವುದರಿಂದ ಚರ್ಮದ ಮೇಲೆ ಹಚ್ಚಿದರೆ ಬ್ಯಾಕ್ಟೀರಿಯಾವನ್ನು ನಿರ್ಮೂಲ ಮಾಡಿ ಆರೋಗ್ಯಕರ ಚರ್ಮವನ್ನು ಪಡೆಯಬಹುದು. ಬಿಳಿಚುಕ್ಕೆಗಳ ಮೇಲೆ ಜೇನುತುಪ್ಪ ಹಚ್ಚಿ ೧೫ ನಿಮಿಷಗಳ ನಂತರ ತೊಳೆಯಿರಿ. ಕ್ರಮೇಣ ಉತ್ತಮ ಫಲಿತಾಂಶ ಪಡೆಯುವಿರಿ. ಎರಡು ಟೇಬಲ್ ಸ್ಪೂನ್ ಜೇನುತುಪ್ಪದೊಂದಿಗೆ ಒಂದು ಟೀ ಸ್ಪೂನ್ ಗಂಧÀದ ಪುಡಿ, ಅಕ್ಕಿ ಹಿಟ್ಟು, ಅರಿಶಿಣವನ್ನು ಚೆನ್ನಾಗಿ ಪೇಸ್ಟ್ನಂತೆ ಮಿಶ್ರಣಮಾಡಿ ಸಮಸ್ಯೆ ಇರುವ ಜಾಗದಲ್ಲಿ ಲೇಪಿಸಿ. ಹತ್ತು ನಿಮಿಷಗಳಾದ ಮೇಲೆ ನೀರಿನಿಂದ ತೊಳೆಯಿರಿ.

    *ಚಪ್ಪರದ ಅವರೆಯ ಬೀಜವನ್ನು ಹಾಲಿನಲ್ಲಿ ನೆನೆಸಿ ಅರೆದು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮುಖಕ್ಕೆ ಹೊಳಪು ಬರುತ್ತದೆ ಮತ್ತು ಬಣ್ಣವು ತಿಳಿಯಾಗುತ್ತದೆ.

    *ಸೌತೆಕಾಯಿ ತಿರುಳನ್ನು ಚೆನ್ನಾಗಿ ಅರೆದು ಅರ್ಧಗಂಟೆ ಹಚ್ಚಿಕೊಂಡು ನಂತರ ತೊಳೆದುಕೊಳ್ಳುವುದರಿಂದ ಮುಖದ ಮೇಲೆ ನಾನಾ ಕಾರಣಗಳಿಂದ ಉಳಿದ ಕಲೆಗಳು ಕಡಿಮೆಯಾಗುತ್ತದೆ.

    *ಕಿತ್ತಳೆ ಹಣ್ಣಿನ ಅಥವಾ ನಿಂಬೆಹಣ್ಣಿನ ಸಿಪ್ಪೆಯನ್ನು ಮುಖದ ಮೇಲೆ ಮೃದುವಾಗಿ ಉಜ್ಜುವುದರಿಂದ ಚರ್ಮದ ಕಲೆಗಳು, ನಿರ್ಜೀವ ಕೋಶಗಳು ಹೋಗಿ ಚರ್ಮ ಹೊಳೆಯುತ್ತದೆ.

    *ಹಸಿಶುಂಠಿ ರಸವನ್ನು, ಎಲೆ ಅಡಕೆಯೊಂದಿಗೆ ತಿನ್ನುವ ಸುಣ್ಣದೊಂದಿಗೆ ಮಿಶ್ರ ಮಾಡಿ ಲೇಪಿಸುವುದರಿಂದ ಚಿಕ್ಕ ಚಿಕ್ಕ ಗಾತ್ರದ ನರೋಲಿಗಳು ನಿವಾರಣೆಯಾಗುತ್ತವೆ.

    *ಸ್ನಾನದ ಸಮಯದಲ್ಲಿ ನೀರಿಗೆ ಶ್ರೀಗಂಧ ಮತ್ತು ಉಶೀರದ ಪುಡಿಯನ್ನು ಸೇರಿಸಿ ಸ್ನಾನ ಮಾಡುವುದರಿಂದ ಹೆಚ್ಚು ಬೆವರುವುದು ನಿವಾರಣೆಯಗುತ್ತದೆ. ಶರೀರವೂ ಸುಗಂಧವಾಗಿರುತ್ತದೆ.

    *ತೆಂಗಿನಕಾಯಿ ತಾಜಾ ತಿರುಳನ್ನು ತೆಗೆದುಕೊಂಡು ಮೃದುವಾಗಿ ಚರ್ಮಕ್ಕೆ ಮಸಾಜ್ ಮಾಡಿಕೊಳ್ಳುವುದರಿಂದ ಮುಖದ ಚರ್ಮ, ಕೈ ಕಾಲುಗಳು ಹೂವಿನಂತೆ ಕೋಮಲವಾಗುತ್ತವೆ.

    *ಟಿ ಟ್ರೀ ಎಣ್ಣೆಯು ತ್ವಚೆಗೆ ಬಹಳ ಪರಿಣಾಮಕಾರಿ ಔಷಧ. ಸುಟ್ಟ ಗಾಯಗಳಿಂದಾದ ಕಲೆಗಳಿಗೆ, ಕೀಟಗಳು ಕಚ್ಚಿದ ಜಾಗಕ್ಕೆ, ತುರಿಕೆ, ಗಂಧೆಗಳಿಗೆ ಟಿ ಟ್ರೀ ಎಣ್ಣೆಯನ್ನು ಲೇಪಿಸುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು.

    ಚೆನ್ನಾಗಿ ನಿದ್ರೆ ಮಾಡುವುದರಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts