More

    ಬಿಸಿಸಿಐ ಶಕ್ತಿಗೆ ಮಣಿದ ವಿಂಡೀಸ್, ಐಪಿಎಲ್‌ಗೆ ದಾರಿ ಬಿಟ್ಟುಕೊಟ್ಟ ಸಿಪಿಎಲ್!

    ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಜಾಗತಿಕ ಕ್ರಿಕೆಟ್‌ನಲ್ಲಿ ಅತ್ಯಂತ ಶ್ರೀಮಂತವಾದ ಕ್ರಿಕೆಟ್ ಸಂಸ್ಥೆ. ಕ್ರಿಕೆಟ್‌ನ ಶಕ್ತಿಕೇಂದ್ರ. ಅದರ ಶಕ್ತಿ ಎದುರು ಮಣಿಯದ ಕ್ರಿಕೆಟ್ ಮಂಡಳಿಗಳೇ ಇಲ್ಲ. ಇದಕ್ಕೆ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ತಾಜಾ ಉದಾಹರಣೆ ಒದಗಿಸಿದೆ. ಬಿಸಿಸಿಐ ಮನವಿಗೆ ಮಣಿದು, ಐಪಿಎಲ್ ಟೂರ್ನಿ ಸುಸೂತ್ರವಾಗಿ ನಡೆಯಲು ವಿಂಡೀಸ್ ಕ್ರಿಕೆಟ್ ಮಂಡಳಿ ಅನುವು ಮಾಡಿಕೊಟ್ಟಿದೆ.

    ಸೆಪ್ಟೆಂಬರ್‌ನಲ್ಲಿ ಐಪಿಎಲ್ 14ನೇ ಆವೃತ್ತಿಯ 2ನೇ ಭಾಗವನ್ನು ಆಯೋಜಿಸಲು ಅನುವು ಮಾಡಿಕೊಡುವ ಸಲುವಾಗಿ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ, ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) ಟಿ20 ಟೂರ್ನಿಯ ದಿನಾಂಕ ಬದಲಾವಣೆ ಮಾಡಿದೆ. ಈ ಮೂಲಕ ವೆಸ್ಟ್ ಇಂಡೀಸ್ ಆಟಗಾರರು ಐಪಿಎಲ್‌ಗೆ ಪೂರ್ಣ ಪ್ರಮಾಣದಲ್ಲಿ ಲಭ್ಯರಾಗಲು ಅವಕಾಶ ಕಲ್ಪಿಸಿದೆ.

    ಇದನ್ನೂ ಓದಿ: VIDEO| 14 ಸೆಕೆಂಡ್‌ಗಳಲ್ಲಿ 92 ಮೀಟರ್ ಓಡಿ ಗೋಲು ಸಿಡಿಸಿದ ರೊನಾಲ್ಡೊ!

    ಆಗಸ್ಟ್ 28ರಿಂದ ಸೆಪ್ಟೆಂಬರ್ 19ರವರೆಗೆ ನಿಗದಿಯಾಗಿದ್ದ ಸಿಪಿಎಲ್ ಟೂರ್ನಿಯನ್ನು ಇದೀಗ ಆಗಸ್ಟ್ 26ರಿಂದ ಸೆಪ್ಟೆಂಬರ್ 15ರವರೆಗೆ ಆಯೋಜಿಸಲು ವಿಂಡೀಸ್ ಮಂಡಳಿ ನಿರ್ಧರಿಸಿದೆ. ಇದರಿಂದ ದಿನಾಂಕ ಸಂಘರ್ಷ ತಪ್ಪಿದ್ದು, ಸೆಪ್ಟೆಂಬರ್ 19ರಿಂದ ಯುಎಇಯಲ್ಲಿ ಐಪಿಎಲ್ 2ನೇ ಭಾಗ ಸಂಘಟಿಸಲು ನೆರವಾಗಲಿದೆ.

    ಬಿಸಿಸಿಐ ಈ ಮುನ್ನ ಒಂದು ವಾರ ಅಥವಾ 10 ದಿನ ಮುಂಚಿತವಾಗಿ ಸಿಪಿಎಲ್ ಆಯೋಜಿಸುವಂತೆ ವಿಂಡೀಸ್ ಮಂಡಳಿಗೆ ಮನವಿ ಸಲ್ಲಿಸಿತ್ತು. ಐಪಿಎಲ್ ತಂಡಗಳಾದ ಕೋಲ್ಕತ ನೈಟ್‌ರೈಡರ್ಸ್‌ ಮತ್ತು ಪಂಜಾಬ್ ಕಿಂಗ್ಸ್, ಸಿಪಿಎಲ್‌ನಲ್ಲೂ ತಂಡಗಳ (ಟ್ರಿನ್‌ಬಾಗೊ ನೈಟ್‌ರೈಡರ್ಸ್‌, ಸೇಂಟ್ ಲೂಸಿಯಾ ಜೌಕ್ಸ್) ಮಾಲೀಕತ್ವ ಹೊಂದಿವೆ ಎಂಬುದು ಗಮನಾರ್ಹ.

    ರೋಹಿತ್ ಶರ್ಮ ಸ್ಪೈ ಮಾಡುತ್ತಿದ್ದಾರೆ ಎಂದ ಪತ್ನಿ ರಿತಿಜಾ..!

    ಅಥ್ಲೆಟಿಕ್ಸ್ ದಿಗ್ಗಜ ಮಿಲ್ಖಾ ಸಿಂಗ್‌ಗೆ ಫ್ಲೈಯಿಂಗ್ ಸಿಖ್ ಹೆಸರು ನೀಡಿದ್ದು ಯಾರು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts