More

    ಇಂಗ್ಲೆಂಡ್ ವಿರುದ್ಧ ಕೊನೇ ಓವರ್‌ನಲ್ಲಿ 28 ರನ್ ಕಸಿದರೂ ಸೋತ ವೆಸ್ಟ್ ಇಂಡೀಸ್!

    ಬ್ರಿಜ್‌ಟೌನ್: ಕೊನೇ ಓವರ್‌ನಲ್ಲಿ 30 ರನ್ ಅಗತ್ಯವಿದ್ದಾಗ 28 ರನ್ ಕಸಿದರೂ, ವೆಸ್ಟ್ ಇಂಡೀಸ್ ತಂಡ ಪ್ರವಾಸಿ ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಕೇವಲ 1 ರನ್‌ನಿಂದ ವೀರೋಚಿತ ಸೋಲು ಅನುಭವಿಸಿದೆ. ಇದರಿಂದ 5 ಪಂದ್ಯಗಳ ಸರಣಿ 1-1ರಿಂದ ಸಮಬಲಗೊಂಡಿದೆ.

    ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಇಂಗ್ಲೆಂಡ್ 8 ವಿಕೆಟ್‌ಗೆ 171 ರನ್ ಪೇರಿಸಿತು. ಪ್ರತಿಯಾಗಿ ವಿಂಡೀಸ್ ರೊಮಾರಿಯೊ ಶೆಫರ್ಡ್ (44*ರನ್, 28 ಎಸೆತ, 1 ಬೌಂಡರಿ, 5 ಸಿಕ್ಸರ್) ಮತ್ತು ಅಕೀಲ್ ಹುಸೇನ್ (44*ರನ್, 16 ಎಸೆತ, 3 ಬೌಂಡರಿ, 4 ಸಿಕ್ಸರ್) ಮುರಿಯದ 9ನೇ ವಿಕೆಟ್‌ಗೆ 29 ಎಸೆತಗಳಲ್ಲಿ 72 ರನ್ ಪೇರಿಸಿದ ನಡುವೆಯೂ 8 ವಿಕೆಟ್‌ಗೆ 170 ರನ್ ಗಳಿಸಿ ಸೋಲೊಪ್ಪಿಕೊಂಡಿತು.

    ಕೊನೇ ಓವರ್‌ನಲ್ಲಿ 30 ರನ್ ಬೇಕಿದ್ದಾಗ ಸಕಿಬ್ ಮಹಮೂದ್ ಎಸೆದ ಮೊದಲ ಮತ್ತು 4ನೇ ಎಸೆತ ವೈಡ್ ಆಯಿತು. ಬಳಿಕ 2, 3ನೇ ಎಸೆತದಲ್ಲಿ ಅಕೀಲ್ ಹುಸೇನ್ ಸತತ ಬೌಂಡರಿ ಬಾರಿಸಿದರು. ಬಳಿಕ ಕೊನೇ 3 ಎಸೆತಗಳಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದರೂ, ಗೆಲುವಿಗೆ 2 ರನ್ ಕೊರತೆಯಾಯಿತು.

    ಇಂಗ್ಲೆಂಡ್: 8 ವಿಕೆಟ್‌ಗೆ 171 (ಜೇಸನ್ ರಾಯ್ 45, ಮೊಯಿನ್ 31, ಹೋಲ್ಡರ್ 25ಕ್ಕೆ 2, ಅಲೆನ್ 50ಕ್ಕೆ 2). ವೆಸ್ಟ್ ಇಂಡೀಸ್: 8 ವಿಕೆಟ್‌ಗೆ 170 (ಪೂರನ್ 24, ಡರೇನ್ ಬ್ರಾವೊ 23, ಶೆಫರ್ಡ್ 44*, ಹುಸೇನ್ 44*, ಮೊಯಿನ್ ಅಲಿ 24ಕ್ಕೆ 3, ರಶೀದ್ 24ಕ್ಕೆ 2).

    ಐಸಿಸಿ ವಾರ್ಷಿಕ ಪ್ರಶಸ್ತಿ ಪಟ್ಟಿಯಲ್ಲಿ ಪಾಕಿಸ್ತಾನ ಪ್ರಾಬಲ್ಯ, ಭಾರತಕ್ಕೆ ನಿರಾಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts