More

    ಇಂಗ್ಲೆಂಡ್ ವೇಗಿಗಳ ದಾಳಿಗೆ ವಿಂಡೀಸ್ ತತ್ತರ

    ಮ್ಯಾಂಚೆಸ್ಟರ್: ಅನುಭವಿ ವೇಗಿಗಳಾದ ಜೇಮ್ಸ್ ಆಂಡರ್‌ಸನ್ (17ಕ್ಕೆ 2) ಹಾಗೂ ಸ್ಟುವರ್ಟ್ ಬ್ರಾಡ್ (17ಕ್ಕೆ 2) ಮಾರಕ ದಾಳಿ ನೆರವಿನಿಂದ ಆತಿಥೇಯ ಇಂಗ್ಲೆಂಡ್ ತಂಡ, 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸಂಕಷ್ಟದ ಸುಳಿಗೆ ಸಿಲುಕಿಸಿದೆ. ಓಲ್ಡ್ ಟಾ್ರೆೆರ್ಡ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 369 ರನ್‌ಗಳಿಗೆ ಕಟ್ಟಿ ಹಾಕಿದ ಬಳಿಕ ಇನಿಂಗ್ಸ್ ಆರಂಭಿಸಿರುವ ವೆಸ್ಟ್ ಇಂಡೀಸ್, 2ನೇ ದಿನದಾಟದ ಅಂತ್ಯಕ್ಕೆ 47.1 ಓವರ್‌ಗಳಲ್ಲಿ 6 ವಿಕೆಟ್‌ಗೆ 137 ರನ್ ಪೇರಿಸಿದ್ದು, ಇನಿಂಗ್ಸ್ ಮುನ್ನಡೆ ಸಾಧಿಸಲು ಇನ್ನೂ 232 ರನ್ ಪೇರಿಸಬೇಕಿದೆ. ನಾಯಕ ಜೇಸನ್ ಹೋಲ್ಡರ್ (24) ಹಾಗೂ ಶೇನ್ ಡೋವ್ರಿಚ್ (10) ಕ್ರೀಸ್‌ನಲ್ಲಿದ್ದಾರೆ. ಇದಕ್ಕೂ ಮೊದಲು 4 ವಿಕೆಟ್‌ಗೆ 258 ರನ್‌ಗಳಿಂದ ಶನಿವಾರದ ದಿನದಾಟ ಆರಂಭಿಸಿದ ಇಂಗ್ಲೆಂಡ್ ತಂಡ, ಕೇಮರ್ ರೋಚ್ (72ಕ್ಕೆ 4) ದಾಳಿ ಎದುರು ರನ್‌ಗಳಿಸಲು ಪರದಾಡಿತು. 91 ರನ್‌ಗಳಿಂದ ಒಲಿವರ್ ಪೋಪ್ ಹಾಗೂ 56 ರನ್‌ಗಳಿಂದ ದಿನದಾಟ ಆರಂಭಿಸಿದ ಜೋಸ್ ಬಟ್ಲರ್ ಜೋಡಿ ನಿರಾಸೆ ಅನುಭವಿಸಿತು. ಈ ವೇಳೆ ಇಂಗ್ಲೆಂಡ್ ಕೇವಲ 18 ರನ್‌ಗಳ ಅಂತರದಲ್ಲಿ ಇಂಗ್ಲೆಂಡ್ 4 ವಿಕೆಟ್ ಕಳೆದುಕೊಂಡಿತು. ಬಳಿಕ ಸ್ಟುವರ್ಟ್ ಬ್ರಾಡ್ (62ರನ್, 45 ಎಸೆತ, 9 ಬೌಂಡರಿ, 1 ಸಿಕ್ಸರ್) ಹಾಗೂ ಡೊಮಿನಿಕ್ ಬೆಸ್ (18*) 9ನೇ ವಿಕೆಟ್ ಉಪಯುಕ್ತ 76 ರನ್ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು 350ರ ಗಡಿ ದಾಟಿಸಿತು.

    ಇಂಗ್ಲೆಂಡ್: 111.5 ಓವರ್‌ಗಳಲ್ಲಿ 369 (ಒಲಿವರ್ ಪೋಪ್ 91, ಜೋಸ್ ಬಟ್ಲರ್ 67, ಸ್ಟುವರ್ಟ್ ಬ್ರಾಡ್ 62, ಕೇಮರ್ ರೋಚ್ 72ಕ್ಕೆ 4, ರೋಸ್ಟನ್ ಚೇಸ್ 36ಕ್ಕೆ2) ವೆಸ್ಟ್ ಇಂಡೀಸ್: 47.1 ಓವರ್‌ಗಳಲ್ಲಿ 6 ವಿಕೆಟ್‌ಗೆ 137 (ಕ್ಯಾಂಪ್‌ಬೆಲ್ 32, ಬ್ಲ್ಯಾಕ್‌ವುಡ್ 26, ಹೋಲ್ಡರ್ 24*, ಜೇಮ್ಸ್ ಆಂಡರ್‌ಸನ್ 17ಕ್ಕೆ 2, ಸ್ಟುವರ್ಟ್ ಬ್ರಾಡ್ 17ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts