More

    ವೆಸ್ಟ್ ಇಂಡೀಸ್ ಎದುರು ಟಿ20 ಸರಣಿ ಕ್ಲೀನ್‌ಸ್ವೀಪ್ ಸಾಧಿಸಿದ ಭಾರತ

    ಕೋಲ್ಕತ: ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ಸೂರ್ಯಕುಮಾರ್ ಯಾದವ್ (65ರನ್, 31 ಎಸೆತ, 1 ಬೌಂಡರಿ, 7 ಸಿಕ್ಸರ್) ಹಾಗೂ ವೆಂಕಟೇಶ್ ಅಯ್ಯರ್ (35*ರನ್, 19 ಎಸೆತ, 4 ಬೌಂಡರಿ, 2 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಹಾಗೂ ಬೌಲರ್‌ಗಳ ಸಂಘಟಿತ ದಾಳಿ ನೆರವಿನಿಂದ ಭಾರತ ತಂಡ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಪ್ರವಾಸಿ ವೆಸ್ಟ್ ಇಂಡೀಸ್ ತಂಡವನ್ನು 17 ರನ್‌ಗಳಿಂದ ಸೋಲಿಸಿತು. ಈ ಮೂಲಕ ಚುಟುಕು ಕ್ರಿಕೆಟ್ ಸರಣಿಯಲ್ಲಿ ಭಾರತ 3-0ಯಿಂದ ಕ್ಲೀನ್‌ಸ್ವೀಪ್ ಸಾಧಿಸಿತು. ಈ ಮುನ್ನ ಏಕದಿನ ಸರಣಿಯಲ್ಲೂ ವೈಟ್‌ವಾಷ್ ಎದುರಿಸಿದ್ದ ವಿಂಡೀಸ್ ತಂಡ, ಈ ಸಲದ ಭಾರತ ಪ್ರವಾಸದಲ್ಲಿ ಗೆಲುವು ಕಾಣದೆ ನಿರ್ಗಮಿಸಿದೆ.

    ಈಡನ್ ಗಾರ್ಡನ್ಸ್ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, 5 ವಿಕೆಟ್‌ಗೆ 184 ರನ್ ಪೇರಿಸಿತು. ಪ್ರತಿಯಾಗಿ ನಿಕೋಲಸ್ ಪೂರನ್ (61*ರನ್, 47 ಎಸೆತ, 8 ಬೌಂಡರಿ, 1 ಸಿಕ್ಸರ್) ಹಾಗೂ ರೊಮಾರಿಯೊ ಶೆರ್ಡ್ (29ರನ್, 21 ಎಸೆತ, 1 ಬೌಂಡರಿ, 3 ಸಿಕ್ಸರ್) ಪ್ರತಿರೋಧದ ನಡುವೆಯೂ ಹರ್ಷಲ್ ಪಟೇಲ್ (22ಕ್ಕೆ 3) ಮಾರಕ ದಾಳಿಗೆ ನಲುಗಿದ ವಿಂಡೀಸ್ 9 ವಿಕೆಟ್‌ಗೆ 167 ರನ್‌ಗಳಿಸಲಷ್ಟೇ ಶಕ್ತವಾಯಿತು.

    ಭಾರತ: 5 ವಿಕೆಟ್‌ಗೆ 184 (ಸೂರ್ಯಕುಮಾರ್ ಯಾದವ್ 65, ವೆಂಕಟೇಶ್ ಅಯ್ಯರ್ 35*, ಇಶಾನ್ ಕಿಶನ್ 34, ಜೇಸನ್ ಹೋಲ್ಡರ್ 29ಕ್ಕೆ 1, ರೋಸ್ಟನ್ ಚೇಸ್ 23ಕ್ಕೆ 1), ವೆಸ್ಟ್ ಇಂಡೀಸ್: 9 ವಿಕೆಟ್‌ಗೆ 167 (ನಿಕೋಲಸ್ ಪೂರನ್ 61, ರೊವ್ಮನ್ ಪೊವೆಲ್ 25, ರೊಮಾರಿಯೊ ಶೆರ್ಡ್ 29, ಹರ್ಷಲ್ ಪಟೇಲ್ 22ಕ್ಕೆ 3, ದೀಪಕ್ ಚಹರ್ 15ಕ್ಕೆ 2, ವೆಂಕಟೇಶ್ ಅಯ್ಯರ್ 23ಕ್ಕೆ 2, ಶಾರ್ದೂಲ್ ಠಾಕೂರ್ 33ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts