More

    ಸೂರ್ಯಕುಮಾರ್ ಶತಕದಾಟಕ್ಕೂ ದಕ್ಕದ ಜಯ; ಇಂಗ್ಲೆಂಡ್ ಎದುರು ಭಾರತಕ್ಕೆ ತಪ್ಪಿದ ಕ್ಲೀನ್‌ಸ್ವೀಪ್ ಅವಕಾಶ

    ನಾಟಿಂಗ್‌ಹ್ಯಾಂ: ಆರಂಭಿಕ ಆಘಾತದ ನಡುವೆಯೂ ಸೂರ್ಯಕುಮಾರ್ ಯಾದವ್ (117ರನ್, 55ಎಸೆತ, 14 ಬೌಂಡರಿ, 6 ಸಿಕ್ಸರ್) ಏಕಾಂಗಿ ಹೋರಾಟದ ನಡುವೆಯೂ ಭಾರತ ತಂಡ 3ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ 17 ರನ್‌ಗಳಿಂದ ಶರಣಾಯಿತು. ಇದರಿಂದ ಸರಣಿಯನ್ನು ಕ್ಲೀನ್‌ಸ್ವೀಪ್ ಸಾಧಿಸುವ ಅವಕಾಶ ತಪ್ಪಿಸಿಕೊಂಡ ಭಾರತ, 2-1 ರಿಂದ ಸರಣಿ ವಶಪಡಿಸಿಕೊಂಡಿತು. ಟೆಸ್ಟ್, ಏಕದಿನ, ಟಿ20 ಕ್ರಿಕೆಟ್‌ನಲ್ಲಿ ಸತತ 19 ಗೆಲುವು ಕಂಡಿದ್ದ ರೋಹಿತ್ ಬಳಗದ ಅಜೇಯ ಓಟಕ್ಕೂ ಬ್ರೇಕ್ ಬಿದ್ದಿತು.
    ಟ್ರೆಂಟ್ ಬ್ರಿಡ್ಜ್ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್, ಡೇವಿಡ್ ಮಲನ್ (77ರನ್, 39 ಎಸೆತ, 6 ಬೌಂಡರಿ, 5 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಫಲವಾಗಿ 7 ವಿಕೆಟ್‌ಗೆ 215 ರನ್‌ಗಳಿಸಿತು. ಪ್ರತಿಯಾಗಿ ಭಾರತ 9 ವಿಕೆಟ್‌ಗೆ 198 ರನ್‌ಗಳಿಸಲಷ್ಟೇ ಶಕ್ತವಾಯಿತು.

    * ಸೂರ್ಯಕುಮಾರ್ ಏಕಾಂಗಿ ಹೋರಾಟ
    ಆರಂಭಿಕ ಆಘಾತದಿಂದ ತತ್ತರಿಸಿದ ಭಾರತ ತಂಡಕ್ಕೆ ಸೂರ್ಯಕುಮಾರ್ ಯಾದವ್ ಹಾಗೂ ಶ್ರೇಯಸ್ ಅಯ್ಯರ್ (28) ಜೋಡಿ ಆಸರೆಯಾಯಿತು. ಮಂದಗತಿಯಲ್ಲೆ ಆರಂಭಗಿಟ್ಟಿಸಿಕೊಂಡ ಈ ಜೋಡಿ ಇನಿಂಗ್ಸ್ ಸಾಗುತ್ತಿದ್ದಂತೆ ರನ್‌ವೇಗಕ್ಕೂ ಚಾಲನೆ ನೀಡಿತು. ಈ ಜೋಡಿ ಎದುರಿಸಿದ 62 ಎಸೆತಗಳಲ್ಲಿ 119 ರನ್‌ಗಳಿಸಿ ಬೇರ್ಪಟ್ಟಿತು. ಬಳಿಕ ಬಂದ ದಿನೇಶ್ ಕಾರ್ತಿಕ್ (6), ರವೀಂದ್ರ ಜಡೇಜಾ (7) ವಿಫಲರಾದರು. ತಂಡದ ಗೆಲುವಿಗಾಗಿ ಏಕಾಂಗಿ ಹೋರಾಟ ಮುಂದುವರಿಸಿದ ಸೂರ್ಯಕುಮಾರ್ ಅಬ್ಬರಕ್ಕೆ ಮೊಯಿನ್ ಅಲಿ ಬ್ರೇಕ್ ಹಾಕಿದರು. ಇದಕ್ಕೂ ಮೊದಲು ವೇಗಿ ರೀಸ್ ಟಾಪ್ಲೆ (22ಕ್ಕೆ 3) ಮಾರಕ ದಾಳಿಗೆ ನಲುಗಿದ ಭಾರತ ತಂಡ 31 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಆಘಾತ ಕಂಡಿತು. ರೋಹಿತ್ ಶರ್ಮ (11) ಹಾಗೂ ರಿಷಭ್ ಪಂತ್ (1) ವಿಲರಾದರೆ, ವಿರಾಟ್ ಕೊಹ್ಲಿ (11) ವೈಫಲ್ಯ ಮುಂದುವರಿಸಿದರು.

    ಇಂಗ್ಲೆಂಡ್: 7 ವಿಕೆಟ್‌ಗೆ 215 (ಡೇವಿಲ್ ಮಲನ್ 77, ಲಿಯಾಮ್ ವಿಲಿಂಗ್‌ಸ್ಟೋನ್ 42*, ಹ್ಯಾರಿ ಬ್ರೂಕ್ 19, ಹರ್ಷಲ್ ಪಟೇಲ್ 35ಕ್ಕೆ 2, ರವಿ ಬಿಷ್ಣೋಯಿ 30ಕ್ಕೆ 2, ಉಮ್ರಾನ್ ಮಲಿಕ್ 56ಕ್ಕೆ 1, ಆವೇಶ್ ಖಾನ್ 43ಕ್ಕೆ 1), ಭಾರತ: 9 ವಿಕೆಟ್‌ಗೆ 198 (ಸೂರ್ಯಕುಮಾರ್ ಯಾದವ್ 117, ಶ್ರೇಯಸ್ ಅಯ್ಯರ್ 28, ರೀಸ್ ಟಾಪ್ಲೆ 22ಕ್ಕೆ 3, ಡೇವಿಡ್ ಮಿಲ್ಲಿ 40ಕ್ಕೆ 2, ಕ್ರಿಸ್ ಜೋರ್ಡನ್ 37ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts