More

    ನಂದಿಗ್ರಾಮದಲ್ಲಿ ಸತತ ಮುನ್ನಡೆ ಕಾಯ್ದುಕೊಂಡ ಸುವೆಂದು ಅಧಿಕಾರಿ: ದೀದಿಗೆ ಆತಂಕ ಶುರು

    ಕೋಲ್ಕತ: ಪಶ್ಚಿಮ ಬಂಗಾಳದ ವಿಧಾನಸಭಾ ಚುನುವಣೆಯಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರ ಹಿಡಿಯುವತ್ತ ದಾಪುಗಾಲು ಇಡುತ್ತಿದೆ. ಮತಎಣಿಕೆಯ ಪ್ರಸ್ತುತ ಟ್ರೆಂಡ್​ ಪ್ರಕಾರ ಟಿಎಂಸಿ 45ರಲ್ಲಿ ಹಾಗೂ ಬಿಜೆಪಿ 29 ಸ್ಥಾನಗಳಲ್ಲಿ ಮುನ್ನಡೆಯನ್ನು ಸಾಧಿಸಿದೆ.

    ಆದರೆ, ಹಾಲಿ ಸಿಎಂ ಮಮತಾ ಬ್ಯಾನರ್ಜಿ ಅವರು ತಮ್ಮ ವಿಧಾನಸಭಾ ಕ್ಷೇತ್ರ ನಂದಿಗ್ರಾಮದಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಇಲ್ಲಿ ಬಿಜೆಪಿ ಅಭ್ಯರ್ಥಿ ಸುವೆಂಧು ಅಧಿಕಾರಿ ಭಾರಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಮಮತಾರಿಗೆ ಪ್ರತಿಷ್ಠೆಯ ಕಣವಾಗಿದ್ದು, ಹೈವೋಲ್ಟೇಜ್​ ಕ್ಷೇತ್ರವಾಗಿರುವ ನಂದಿಗ್ರಾಮದಲ್ಲಿ ಗೆಲುವು ಯಾರಿಗೆ ಲಭಿಸಲಿದೆ ಎಂಬುದು ಭಾರಿ ಕುತೂಹಲ ಮೂಡಿಸಿದೆ.

    ಒಟ್ಟು 294 ವಿಧಾನಸಭಾ ಸ್ಥಾನಗಳಲ್ಲಿ ಅಧಿಕಾರದ ಗದ್ದುಗೆ ಏರಲು 147 ಮ್ಯಾಜಿಕ್​ ನಂಬರ್​ ಅವಶ್ಯಕತೆ ಇದೆ. ಅಸ್ತಿತ್ವವೇ ಇರದ ಒಶ್ಚಿಮ ಬಂಗಾಳದಲ್ಲಿ ಬಿಜೆಪಿ ಈ ಬಾರಿ ಗಟ್ಟಿಯಾಗಿ ನಲೆಯೂರಿದ್ದು, ಟಿಎಂಸಿ ಟಕ್ಕರ್​ ಕೊಡುವ ಸಾಧ್ಯತೆ ಇದೆ. ಹೀಗಾಗಿ ಈ ಚುನಾವಣಾ ಫಲಿತಾಂಶದ ಭಾರೀ ನಿರೀಕ್ಷೆ ಇದೆ. (ಏಜೆನ್ಸೀಸ್​)

    ಮತಎಣಿಕೆ ಕೇಂದ್ರದಲ್ಲೇ ಪ್ರಜ್ಞೆ ತಪ್ಪಿ ಕುಸಿದು ಬಿದ್ದ ಪಶ್ಚಿಮ ಬಂಗಾಳದ ಕಾಂಗ್ರೆಸ್​ ಏಜೆಂಟ್​!

    ಕೇರಳದ ಪಲಕ್ಕಾಡ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮೆಟ್ರೋಮ್ಯಾನ್​ ಇ. ಶ್ರೀಧರನ್​ ಮುನ್ನಡೆ

    ಕಲಾವಿದರಿಗೆ ಎರಡನೇ ಅಲೆ ಸುನಾಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts