More

    ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್​ ಘೋಷ್​ ಮೇಲೆ ಟಿಎಂಸಿ ಕಾರ್ಯಕರ್ತರ ದಾಳಿ; ಕಾರು ಧ್ವಂಸ

    ಕೋಲ್ಕತ್ತ: ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ, ಸಂಸದ ದಿಲೀಪ್​ ಘೋಷ್​ ಅವರ ಮೇಲೆ ಟಿಎಂಸಿ ಕಾರ್ಯಕರ್ತರು ದಾಳಿ ಮಾಡಿದ್ದಾರೆ.

    ಇಂದು ಕೋಲ್ಕತ್ತಾದ ನ್ಯೂಟೌನ್​ನಲ್ಲಿ ಘಟನೆ ನಡೆದಿದೆ. ದಿಲೀಪ್ ಘೋಷ್​ ಮತ್ತು ಅವರ ಭದ್ರತಾ ಸಿಬ್ಬಂದಿಯ ಕಾರುಗಳನ್ನು ಅಡ್ಡಗಟ್ಟಿ, ವಾಹನಗಳನ್ನೆಲ್ಲ ಧ್ವಂಸ ಮಾಡಿದ್ದಾರೆ. ಅದಾದ ನಂತರ ದಿಲೀಪ್​ ಘೋಷ್​ ಅವರನ್ನು ಸ್ಥಳೀಯ ಬಿಜೆಪಿ ಕಾರ್ಯಕರ್ತನೋರ್ವನ ಮನೆಗೆ ಕರೆದುಕೊಂಡು ಹೋಗಿ ರಕ್ಷಣೆ ಮಾಡಲಾಗಿದೆ. ಇದನ್ನೂ ಓದಿ: ಇನ್ಮುಂದೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಪತಂಜಲಿಯ ‘ಕರೊನಿಲ್’​: ಬಾಬಾ ರಾಮ್​ದೇವ್​

    ಘೋಷ್​ ಅವರು ಚಾಯ್​ ಪೆ ಚರ್ಚಾ ಸಮಾರಂಭ ಆಯೋಜಿಸುವ ಸಲುವಾಗಿ ತಮ್ಮ ಒಂದಷ್ಟು ಬೆಂಬಲಿಗರೊಂದಿಗೆ ತೆರಳುತ್ತಿದ್ದರು. ನ್ಯೂಟೌನ್ ಬಳಿ ತೃಣಮೂಲ ಕಾಂಗ್ರೆಸ್​ನ ಕೆಲವು ಕಾರ್ಯಕರ್ತರು ಒಮ್ಮೆಲೆ ಇವರ ಜತೆ ಗಲಾಟೆಗೆ ಇಳಿದಿದ್ದಾರೆ.
    ಘೋಷ್​ ಅವರ ಮೇಲೆ ದಾಳಿ ಮಾಡಿದ್ದಾರೆ. ಹಾಗೇ ಬಿಜೆಪಿ ಕಾರ್ಯಕರ್ತರ ಕಾರುಗಳ ಗ್ಲಾಸ್​ಗಳನ್ನೆಲ್ಲ ಒಡೆದು ಧ್ವಂಸ ಮಾಡಿದ್ದಾರೆ ಎಂದು ಆರೋಪ ಕೇಳಿಬಂದಿದೆ.

    ಈ ಹಲ್ಲೆಯ ಹಿಂದೆ ಟಿಎಂಸಿಯ ನಾಯಕ ಮೊಹ್ಸಿನ್​ ಘಾಜಿ ಇದ್ದಾರೆಂದು ದಿಲೀಪ್​ ಘೋಷ್​ ಅವರು ಆರೋಪಿಸಿದ್ದಾರೆ. ಆದರೆ ಟಿಎಂಸಿ ಈ ಆರೋಪವನ್ನು ತಳ್ಳಿ ಹಾಕಿದೆ. ಬಿಜೆಪಿ ಬೇಕೆಂದೇ ಟಿಎಂಸಿ ಹೆಸರು ಹೇಳುತ್ತಿದೆ. ನಮ್ಮ ಕಾರ್ಯಕರ್ತರು ಅವರ ಮೇಲೆ ಹಲ್ಲೆ ನಡೆಸಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಬೆಳಗ್ಗೆ ಸೆಕ್ಷನ್​ 144, ರಾತ್ರಿ ಕರ್ಫ್ಯೂ; ಹೊರಗೆ ಬಂದ್ರೆ ಕರೊನಾನೂ ಬಿಡಲ್ಲ, ಪೊಲೀಸರು ಸುಮ್ಮನಿರಲ್ಲ

    ದಿಲೀಪ್​ ಘೋಷ್​ ಅವರ ಮೇಲಿನ ದಾಳಿಯನ್ನು ಕಾಂಗ್ರೆಸ್​ ಸಂಸದ ಅಧೀರ್​ ರಂಜನ್​ ಚೌಧರಿ ಖಂಡಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಪ್ರತಿಪಕ್ಷಗಳ ನಾಯಕರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಪದೇಪದೆ ಹೀಗೆ ದಾಳಿ, ಹಲ್ಲೆಗಳು ನಡೆಯುತ್ತಲೇ ಇರುತ್ತವೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    50 ವರ್ಷ ಮೇಲ್ಪಟ್ಟವರಿಗೆ ಕಡ್ಡಾಯ ರಜೆ: ಇನ್ನೊಂದು ಇಲಾಖೆ ಸೇರ್ಪಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts