More

    ಸುಸಜ್ಜಿತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ

    ಹೂವಿನಹಗಡಲಿ: ವಿದ್ಯಾರ್ಥಿ ಜೀವನದಲ್ಲಿ ಕಾನೂನುಗಳ ಬಗ್ಗೆ ತಿಳಿದುಕೊಳ್ಳುವುದರಿಂದ ಉತ್ತಮ ಜೀವನ ರೂಪಿಸಿಕೊಳ್ಳಬಹುದು ಎಂದು ಸರ್ಕಾರಿ ಸಹಾಯಕ ಅಭಿಯೋಜಕ ಕೆ.ಅಜ್ಜಯ್ಯ ಹೇಳಿದರು.

    ಇದನ್ನೂ ಓದಿ: ಜಿಲ್ಲಾ ವಕೀಲರ ಸಂಘಕ್ಕೆ ಪಾಟೀಲ ಅಧ್ಯಕ್ಷ

    ತಾಲೂಕಿನ ಮಿರಾಕೊರನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶನಿವಾರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ ಮತ್ತು ತಾಲೂಕು ವಕೀಲರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಪ್ರತಿಯೊಬ್ಬರಿಗೂ ಸ್ವಾತಂತ್ರ್ಯವಿದೆ

    ಭಾರತದ ಸಂವಿಧಾನದಲ್ಲಿನ ಮೂಲ ಹಕ್ಕುಗಳ ಅನುಸಾರ ರಾಷ್ಟ್ರದ ಪ್ರಜೆಯಾದ ಪ್ರತಿಯೊಬ್ಬರಿಗೂ ಸ್ವಾತಂತ್ರ್ಯವಿದೆ. ರಾಷ್ಟ್ರದಲ್ಲಿ ಶಿಕ್ಷಣ, ಆರೋಗ್ಯ ಸೇರಿ ಇತರೆ ಸೌಲಭ್ಯಗಳನ್ನು ಪಡೆಯುವ ಮೂಲಕ ಪ್ರತಿಯೊಬ್ಬ ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ರಾಜ್ಯ ಮತ್ತು ಕೇಂದ್ರದಲ್ಲಿ ಜಾರಿ ಇರುವ ನಿಯಮಗಳ ಮಾಹಿತಿ ಪಡೆಯುವ ಮೂಲಕ ಎಲ್ಲರಿಗೂ ಆದರ್ಶವಾಗುವಂತೆ ಅಭ್ಯಾಸ ಮಾಡಬೇಕು. ಬಾಲ್ಯವಿವಾಹ ಪದ್ಧತಿ ನಿರ್ಮೂಲನೆ, ಜನನ ಮತ್ತು ಮರಣ ನೋಂದಣಿ, ಮೋಟಾರು ವಾಹನ ಕಾಯ್ದೆ ಜೊತೆಗೆ ಸಂವಿಧಾನದ ಅಡಿಯಲ್ಲಿ ಬರುವ ಇತರೆ ಕಾಯ್ದೆಗಳ ಜ್ಞಾನ ಹೊಂದುವ ಮೂಲಕ ಸುಸಜ್ಜಿತ ಸಮಾಜ ನಿರ್ಮಾಣ ಮಾಡುವುದು ಅವಶ್ಯವಿದೆ ಎಂದರು.

    ಶಿಕ್ಷಣದ ಕೊರತೆಯಿಂದ ಬಹುತೇಕ ಜನರು ಸಣ್ಣ, ಪುಟ್ಟ ಸಮಸ್ಯೆಗಳನ್ನು ದೊಡ್ಡದಾಗಿ ಮಾಡಿಕೊಳ್ಳುವ ಮೂಲಕ ನ್ಯಾಯಾಲಯದ ಕಡೆ ಹೆಜ್ಜೆಹಾಕುತ್ತಿದ್ದಾರೆ. ಸೌಹಾರ್ದಯುತವಾದ ಬದುಕು ಕಟ್ಟಿಕೊಳ್ಳಲು ಎಲ್ಲರೂ ಅಕ್ಷರಸ್ಥರಾಗುವ ಮೂಲಕ ಉತ್ತಮ ಜೀವನ ನಡೆಸಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts