More

    ಮಾನವೀಯ ಮೌಲ್ಯ ಬೆಳೆಸಿಕೊಳ್ಳಿ

    ಕಮಲಾಪುರ: ಮಕ್ಕಳು ಮಾನವೀಯ ಮೌಲ್ಯಗಳನ್ನು ಅರಿತು, ಮೈಗೂಡಿಸಿಕೊಳ್ಳಬೇಕು. ಜೀವನದಲ್ಲಿ ಗುರು, ಹಿರಿಯರನ್ನು ಗೌರವದಿಂದ ಕಾಣಬೇಕು ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ನುಡಿದರು.

    ಸೋಂತ ಗ್ರಾಮದ ಹೊರವಲಯದಲ್ಲಿನ ಬಸವ ಗುರುಕುಲ ಪ್ರಾಥಮಿಕ ಮತ್ತು ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಎರಡನೇ ಅಂತಸ್ತಿನ ಕಟ್ಟಡ ಪೂಜೆ, ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಂಸ್ಕಾರವಂತ ಶಿಕ್ಷಣ ವಿದ್ಯಾರ್ಥಿಗಳನ್ನು ಪರಿಪೂರ್ಣವಾಗಿ ರೂಪಿಸುತ್ತದೆ. ಶ್ರದ್ಧೆಯಿಂದ ಅಧ್ಯಯನ ಮಾಡಿ, ಉನ್ನತ ಸ್ಥಾನಕ್ಕೆ ಏರಬೇಕು ಎಂದು ಸಲಹೆ ನೀಡಿದರು.

    ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಮಾತನಾಡಿ, ಮಕ್ಕಳು ಹತ್ತನೇ ಪರೀಕ್ಷೆ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ನಿರ್ಭಯದಿಂದ ಪರೀಕ್ಷೆ ಬರೆದು, ಉನ್ನತ ಸಾಧನೆ ಮಾಡಬೇಕು ಎಂದು ಹೇಳಿದರು.

    ಪ್ರಮುಖರಾದ ಅಮರನಾಥ ಪಾಟೀಲ್, ಜಗದೀಶ ಮರಪಳ್ಳಿ, ರಮೇಶ ಹುಳಗೇರಿ, ದತ್ತಾತ್ರೇಯ ರಾಯಗೋಳ, ಶರಣು ಕೋರಿ, ರಾಘವೇಂದ್ರ ಗಾದಾ, ಬಸವರಾಜ ಜವಳಗಿ, ಶಾಲಿವಾನ , ಗುರುರಾಜ ಇತರರಿದ್ದರು. ಮುಖ್ಯಗುರು ಉದಯಕುಮಾರ ಸ್ವಾಗತಿಸಿದರು. ಶಿವಕುಮಾರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts