More

    ಈ ರಾಶಿಯವರಿಗೆ ಬರಬೇಕಾದ ಹಣ ಬಂದೇ ಬರುತ್ತದೆ: ವಾರಭವಿಷ್ಯ

    ಮೇಷ

    ಇಂದಿನಿಂದ ಏಕಾದಶದಲ್ಲಿ ಗುರುವು, ಮೇಷದಲ್ಲಿ ಶುಕ್ರಸಂಚಾರ ಶುರುವಾಗಿದೆ. ಬದುಕನ್ನು ಚೆನ್ನಾಗಿ ರೂಪಿಸಿಕೊಳ್ಳುವ ಸಮಯವಿದು. ಆರ್ಥಿಕವಾಗಿ ಕೂಡ ನೀವು ಯಶಸ್ಸನ್ನು, ತೃಪ್ತಿಕರ ಧನವನ್ನು ಕಾಣಬಹುದು. ಏನು ಬೇಕು ಬೇಡ ಎಂಬುದು ನಿಮ್ಮಲ್ಲಿರಲಿ. ಜಯದ ಕಡೆ ಗಮನಹರಿಸಿ. ಮೇಷಾಧಿಪತಿ ಸುಬ್ರಹ್ಮಣ್ಯನನ್ನು, ದುರ್ಗೆಯನ್ನು ಪೂಜಿಸಿ.

    ವೃಷಭ

    ದಶಮದಲ್ಲಿ ಗುರು ಸಂಚಾರ ಬಂದು ದೈವಬಲ ಕಡಿಮೆಯಾಗಿರುವುದು. ಅದನ್ನು ಸಂಪಾದಿಸುವ ನಿಟ್ಟಿನಲ್ಲಿ ಗುರು ಸ್ತೋತ್ರ ಪಠಿಸಿ. ದತ್ತಾತ್ರೇಯನನ್ನು ಪೂಜಿಸಿ. ದ್ವಾದಶದಲ್ಲಿ ಶುಕ್ರ ಪ್ರವೇಶದೊಂದಿಗೆ ಹಣದ ವ್ಯಯಭಾಗ ಜಾಸ್ತಿಯಾಗುತ್ತದೆ. ಯೋಚಿಸಿ ಖರ್ಚು ಮಾಡಿ. ಆಯಾಸಕ್ಕೆ ವಿಶ್ರಾಂತಿಯೇ ಪರಿಹಾರ. ದಬ್ಬಾಳಿಕೆ ಬೇಡ. ದುರ್ಗೆ, ಗಣಪತಿಯನ್ನು ಪೂಜಿಸಿ.

    ಮಿಥುನ

    ಎಂಟರಲ್ಲಿ ಶನಿಯು ಸಂಚಾರ ಮುಂದುವರಿದು ಒಂಬತ್ತರಲ್ಲಿ ಗುರುವಿದ್ದಾಗಲೂ ಏಕಾಏಕಿ ಆಗದಿದ್ದರೂ ಸಮಯ ಸಂದರ್ಭ ಅನುಸರಿಸಿ ಕೆಲ ಕೆಲಸ ಸಾಧಿಸಬಹುದು. ಅದು ನಿಮಗೆ ಸಂತೋಷ ತಂದು ನಿರಾಸೆಗೆ ಕಡಿವಾಣವಾಗುತ್ತದೆ. 9ರ ಗುರುವಿಗೆ ಹೆಚ್ಚು ಪೂಜೆ, ಧ್ಯಾನ, ದಾನ ಮಾಡಿದಲ್ಲಿ ದುಪ್ಪಟ್ಟು ಕೊಡುತ್ತಾನೆ. ಸಣ್ಣಪುಟ್ಟ ವ್ಯಾಜ್ಯ ಬೇಡ. ಆರೋಗ್ಯಕ್ಕೆ ಆದ್ಯತೆ ಇರಲಿ.

    ಕಟಕ

    ಚಂದ್ರಾಂಶ ಸಂಭೂತದಲ್ಲಿ ಕರ್ಕಾಟಕದ ವೈಶಿಷ್ಟ್ಯದಲ್ಲಿ ನಿಮ್ಮ ಮನಸ್ಸು ಚಂಚಲವಾದರೂ ಯಾರನ್ನೂ ಹೀನಾಯವಾಗಿ ಅವಮಾನಿಸುವ ಅಭ್ಯಾಸ ನಿಮಗಿಲ್ಲ. ಅದೇ ನಿಮ್ಮ ಶಕ್ತಿ. ಸಪ್ತಮ ಶನಿ, ಅಷ್ಟಮ ಗುರು ಸಮಯಕ್ಕೆ ಬೇಕಾದ ವರವನ್ನು ತರುವುದಿಲ್ಲ. ಗುರು 9ನೇ ಮನೆಗೆ ಬಂದರೆ ಪರಿಸ್ಥಿತಿ ಸುಧಾರಿಸಿ ನೀವು ಯಾರನ್ನೂ ಕೇಳುವ ಅಗತ್ಯವಿರುವುದಿಲ್ಲ.

    ಸಿಂಹ

    ಸಿಂಹವು ಅರಣ್ಯದಲ್ಲಿದ್ದರೂ ಹುಲ್ಲನ್ನು ಮುಟ್ಟುವುದಿಲ್ಲ. ಬೇಟೆ ಆಡಿಯೇ ಆಹಾರ ಪಡೆದುಕೊಳ್ಳುವುದು ಶತಸಿದ್ಧ. ಹೀಗೆಯೇ ಆರರ ಶನಿ, ಏಳರ ಗುರು ನಿಮ್ಮನ್ನು ಸರಿದಾರಿಯಲ್ಲಿ ಕೊಂಡೊಯ್ದು ಎಲ್ಲ ಆಸೆ ಈಡೇರಿಸುತ್ತಾರೆ. ವಿಚಾರಮಗ್ನರಾಗಿ ಕೆಲಸ ಕಾರ್ಯಗಳನ್ನು ಚೌಕಟ್ಟಿನಲ್ಲಿ ಮಾಡಿದರೆ ಪ್ರಗತಿ ಸಾಧಿಸುತ್ತೀರ. ಸೂರ್ಯರಕ್ಷಾಸ್ತೋತ್ರ ಪಠಿಸಿ.

    ಕನ್ಯಾ

    ಷಷ್ಠ ಗುರು, ಪಂಚಮ ಶನಿ ಸಂಚಾರವಿರುವುದರಿಂದ ಕ್ಷೇಮಕ್ಕೆ ಕೊರತೆಯಿಲ್ಲ. ಮನಸ್ಸಿಗೆ ಯಾವ ಚಿಂತೆಯನ್ನೂ ತಾರದೆ ಋಷಿಕೇಶನ ಅಷ್ಟೋತ್ತರ ಜಪಮಾಡಿ. ಹಯಗ್ರೀವನಿಗೆ ಕಡಲೇಬೇಳೆಯಲ್ಲಿ ಹಯಗ್ರೀವ ಮಾಡಿ ಸಿಹಿಯನ್ನು ನೈವೇದ್ಯ ಮಾಡಿದಲ್ಲಿ ನಿಮ್ಮ ಭಕ್ತಿಯೇ ಪ್ರಾಮುಖ್ಯವಾಗಿ ಕೆಲಸಗಳು ಸಾಗುತ್ತವೆ. ವಿಷ್ಣು ಸಹಸ್ರನಾಮ ಪಠಿಸಿ.

    ತುಲಾ

    ಗುರುವು ಪಂಚಮ ಸೇರಿ, ಶನಿಯು ಮಕರದಲ್ಲೇ ಇದ್ದಾನೆ. ಸರ್ವವನ್ನು ಕೊಡುವವನು ಗುರುವೇ. ಆದ್ದರಿಂದ ಚತುರ್ಥ ಶನಿಗೆ ಚಿಂತಿಸದೆ ವ್ಯವಹಾರ ಮಾಡಿ. ನ್ಯಾಯಾಲಯದಿಂದ ಹಿಡಿದು ಯಾವ ಕ್ಷೇತ್ರಗಳಲ್ಲಿ ಜಯ ಬಯಸುತ್ತೀರೋ ಅದು ಸಿಗುತ್ತದೆ. ಗುರುವಿಗಾಗಿ ಗುರುಚರಿತ್ರೆ ಪಾರಾಯಣ ಮಾಡಿ.

    ವೃಶ್ಚಿಕ

    ಅನ್ಯರ ಸಂಗ ಮಾಡಬೇಕಾದರೆ ತುಂಬಾ ಯೋಚಿಸಬೇಕು. ಗೊತ್ತು ಗುರಿ ಇಲ್ಲದೆ ಯಾರನ್ನೂ ನಂಬಲಾಗದು. ನೀವು ನಂಬಿಕೆಯಿಟ್ಟು ಗಣಾಧಿಪತಿಯನ್ನು ಪೂಜಿಸಿ. ವಿಘ್ನ್​ಗಳನ್ನು ಪರಿಹರಿಸಿ ಜಯವನ್ನೂ ತೋರಿ ನಿಮ್ಮ ಪೂರ್ವಾರ್ಜಿತ ಕರ್ಮದಂತೆ ಬರಬೇಕಾದ ಹಣ ಬಂದೇ ಬರುತ್ತದೆ.

    ಧನು

    ನಿಮಗೆ ಯಾರ ಸಹಾಯವೂ ಬೇಡ. ದೈವಮಾರ್ಗವೂ ಬೇಡವೆಂದರೆ ಕಷ್ಟ. 12ನೇ ಮನೆಯ ಶನಿಯ ಸಂಚಾರದಲ್ಲಿದ್ದಾನೆ. ಗುರುವು 3ನೇ ಮನೆಯಲ್ಲಿ ಇರುವುದರಿಂದ ವಿಚಾರಗಳಲ್ಲಿ ಸತ್ಯವು ಹೊರಹೊಮ್ಮುವುದು. ನಿಮ್ಮ ಜಾಣ್ಮೆಯೇ ನಿಮ್ಮನ್ನು ಸಂರಕ್ಷಿಸುತ್ತದೆ. ಶನಿ ಪ್ರಾರ್ಥನೆ ಮರೆಯದಿರಿ. ತೃತೀಯ ಗುರುವು ನಿರಾಶಾದಾಯಕನಲ್ಲ. ದತ್ತನ ಪ್ರಾರ್ಥನೆ ಇರಲಿ.

    ಮಕರ

    ಶ್ರವಣ ನಕ್ಷತ್ರ ಮಕರ ರಾಶಿಯಲ್ಲಿ ದೈವವು ಜನಿಸಿರುವುದು ಗೊತ್ತಿದೆಯಷ್ಟೇ. ಇಡೀ ವಿಶ್ವವನ್ನೇ ಆಳುತ್ತಿರುವ ಸಪ್ತಗಿರಿವಾಸ ವೆಂಕಟೇಶ್ವರನೇ ಅವನು. ಶ್ರೀನಿವಾಸ ಕಲ್ಯಾಣ ಅರ್ಥೈಸಿಕೊಂಡರೆ ದೇವರು ಮನುಷ್ಯ ರೂಪದಲ್ಲಿ ಎಲ್ಲಾ ಕಷ್ಟ ಕಂಡೇ ಇರುತ್ತಾನೆ. ಶನಿಕಾಟದಲ್ಲಿ ದೈವಮಾರ್ಗವೊಂದೇ ದಾರಿ. ಶ್ರೀನಿವಾಸ ಕಲ್ಯಾಣ ಪಠಿಸಿ. ಲಕ್ಷ್ಮೀ ವೆಂಕಟೇಶ್ವರ ಅಷ್ಟೋತ್ತರ ಪಾರಾಯಣ ಮಾಡಿ.

    ಕುಂಭ

    ಯಾವುದೇ ಕಲಶದಲ್ಲಿ ದೇವರನ್ನು ಆಹ್ವಾನಿಸಿದರೂ ಲಕ್ಷ್ಮೀನಾರಾಯಣನನ್ನು ಆಹ್ವಾನಿಸಲೇಬೇಕು. ಘಟಿಸಿದ ಪಾಪ ಹೋಗಲಾಡಿಸಬೇಕಾದರೆ ನಂಬಿಕೆ, ಮನಸ್ಸು, ದಾನ ಧರ್ಮಕ್ಕೆ ಇದ್ದಷ್ಟು ಹಣ ವ್ಯಯಿಸಲೇಬೇಕು. ಗುರು ಸ್ವತಂತ್ರನಾಗಿದ್ದಾನೆ. ಗುರು ಸಂಚಾರ ಶನಿಯ ಮನೆಯಲ್ಲಿದ್ದರೂ, ಗುರುವಿಗೆ ಯಾವುದೇ ನಿರ್ಬಂಧವಿಲ್ಲ. ಗುರು, ಶನಿಯನ್ನು ವಿಶೇಷವಾಗಿ ಪ್ರಾರ್ಥಿಸಿ. ದತ್ತಾಷ್ಟಕವನ್ನು ಪಠಿಸಿ.

    ಮೀನ

    ದ್ವಾದಶದಲ್ಲಿ ಗುರುವು ಲಯವನ್ನು, ಹಣಕಾಸಿಗೆ ಅಲ್ಪಮುಗ್ಗಟ್ಟನ್ನು ತರುತ್ತಾನೆ. ಏಕಾದಶ ಶನಿ ಕೈಹಿಡಿಯುತ್ತಾನೆ. ವಿಶೇಷವಾಗಿ ಗುರುವೇ ಬ್ರಹ್ಮ. ಗುರುವೇ ವಿಷ್ಣು, ಗುರುವೇ ಗಿರಿಜಾರಮಣ ಎಂದು ಪ್ರಾರ್ಥಿಸಿ. ಇನ್ನೂ ಕೆಲವು ಕಾಲ ಒಳ್ಳೆಯ ದಿನಗಳನ್ನು ಕಾಣಬಹುದು. ಚಿಂತೆಯು ಮನಸ್ಸನ್ನು ಕೆಡಿಸುತ್ತದೆ. ನಿದ್ದೆಯಲ್ಲಿದ್ದವನಿಗೆ ಬುದ್ಧಿಯು ಕೆಡುತ್ತದೆ. ಎಚ್ಚರವಾಗಿರಿ. ಆನಂದ ಭೈರವನನ್ನು ಪೂಜಿಸಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts