More

    ಅಡಕೆ ಜತೆ ಬಾಳೆ ಬೆಳೆದರೆ ಕಳೆ ನಿಯಂತ್ರಣ

    ಕಡೂರು: ಉತ್ತಮ ನೀರು ಮತ್ತು ಪೋಷಕಾಂಶಗಳ ನಿರ್ವಹಣೆಯಿಂದ ಮಾತ್ರ ಅಡಕೆಯಲ್ಲಿ ಹೆಚ್ಚು ಇಳುವರಿ ಪಡೆಯಲು ಸಾಧ್ಯ ಎಂದು ಕೃಷಿ ತಜ್ಞ ಎಂ.ನಟರಾಜ್ ತಿಳಿಸಿದರು.

    ತಾಲೂಕಿನ ಪಿಳ್ಳೇನಹಳ್ಳಿ ಗ್ರಾಮದಲ್ಲಿ ಶನಿವಾರ ಮೂಡಿಗೆರೆ ತೋಟಗಾರಿಕಾ ಮಹಾವಿದ್ಯಾಲಯದಿಂದ ಹಮ್ಮಿಕೊಳ್ಳಲಾಗಿದ್ದ ಅಡಕೆ ಬೆಳೆ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
    ಪ್ರಸ್ತುತ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಉತ್ತಮ ನೀರು ಹಾಗೂ ಪೋಷಕಾಂಶಗಳ ನಿರ್ವಹಣೆ ಮೂಲಕ ಸೂಕ್ತ ಪರಿಹಾರ ಪಡೆದುಕೊಳ್ಳಬಹುದು. ಅಡಕೆ ತೋಟದಲ್ಲಿ ಅಲಸಂದೆ, ಹುರುಳಿ, ಸೆಣಬು, ಡಯಾಂಚಾದಂತಹ ಹಸಿರು ಎಲೆಗೊಬ್ಬರಗಳನ್ನು ಬೆಳೆದರೆ ಕಳೆಗಳ ನಿರ್ವಹಣೆ ಜತೆಗೆ ತೋಟಕ್ಕೆ ಬೇಕಾಗುವ ನೀರಿನ ಪ್ರಮಾಣವನ್ನು ತಗ್ಗಿಸಬಹುದು. ಕೀಟಗಳ ಬಾಧೆಯನ್ನು ನಿಯಂತ್ರಿಸಬಹುದಾಗಿದೆ ಎಂದರು.
    ಅಡಕೆ ತೋಟದಲ್ಲಿ ಮಿಶ್ರಬೆಳೆಯನ್ನಾಗಿ ಬಾಳೆ ಬೆಳೆದರೆ ಕಳೆ ನಿರ್ವಹಣೆಯ ಜತೆಗೆ ಹೆಚ್ಚುವರಿ ಆದಾಯ ಗಳಿಸಬಹುದು. ಮಾಗಿ ಉಳುಮೆ ಮಾಡುವುದರಿಂದ ಕೀಟ ಹಾಗೂ ರೋಗಗಳ ಬಾಧೆ ತಡೆಗಟ್ಟಬಹುದಾಗಿದೆ. ತೋಟದಲ್ಲಿ ಬಸಿ ಕಾಲುವೆಗಳನ್ನು ಮಾಡಬೇಕು. ಇಲ್ಲವಾದಲ್ಲಿ ಹಿಡಿಮುಂಡಿಗೆ ಕಾಟ ತಪ್ಪಿದ್ದಲ್ಲ ಎಂದು ತಿಳಿಸಿದರು.
    ಪ್ರಾಧ್ಯಾಪಕ ಡಾ. ಕಿರಣ್, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts