More

    ಕೋರ್ಸ್‌ಗಳಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿ : ಬೆಂಗಳೂರು ಉತ್ತರ ವಿವಿ ವಿಸಿ ಪ್ರೊ.ಕೆಂಪರಾಜು ಸಲಹೆ

    ಚಿಂತಾಮಣಿ:ಕಳೆದ ದಶಕದಿಂದ ಪ್ರತಿ ದೇಶಗಳ ಆರ್ಥಿಕ ಪ್ರಗತಿಗೆ ಮಹತ್ವದ ಕೊಡುಗೆ ನೀಡುತ್ತಿರುವ ಪ್ರವಾಸೋದ್ಯಮ ಕ್ಷೇತ್ರದ ಉತ್ತೇಜನಕ್ಕೆ ಸರ್ಕಾರ ಪೂರಕವಾದ ಮೂಲಸೌಲಭ್ಯ ಕಲ್ಪಿಸಬೇಕೆಂದು ಬೆಂಗಳೂರು ಉತ್ತರ ವಿ.ವಿ.ಉಪಕುಲಪತಿ ಪ್ರೊ.ಟಿ.ಡಿ.ಕೆಂಪರಾಜು ಸಲಹೆಯಿತ್ತರು.

    ನಗರದ ಸರ್ಕಾರಿ ಮಹಿಳಾ ಕಾಲೇಜಿನ ಇತಿಹಾಸ ಸ್ನಾತಕೋತ್ತರ ವಿಭಾಗ ಬೆಂಗಳೂರು ಉತ್ತರ ವಿವಿ ಸಹಯೋಗದಲ್ಲಿ ಹಮ್ಮಿಕೊಂಡಿರುವ ಟೂರಿಸಂ ಆ್ಯಂಡ್ ಟ್ರಾವೆಲ್ ಮಾನೇಜ್‌ಮೆಂಟ್ ಇನ್ ಇಂಡಿಯಾ ಆ್ಯಂಡ್ ಎಕಾಮಿಕ್ ಡೆವಲಪ್‌ಮೆಂಟ್ ಎಂಬ ವಿಷಯದ 2ದಿನಗಳ ರಾಷ್ಟ್ರೀಯ ವೆಬಿನಾರ್‌ಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.

    ಪ್ರವಾಸೋದ್ಯಮ ದೇಶದ ಆರ್ಥಿಕ ಪ್ರಗತಿಯ ಮೂಲವಾಗಿದೆ. ವಿದೇಶಿ ವಿನಿಮಯದೊಂದಿಗೆ ದೇಶದ ವಿವಿಧ ಉದ್ಯಮಗಳ ಬೆಳವಣಿಗೆಗೆ ಸಹಕಾರಿಯಾಗಿದ್ದು, ಹೆಚ್ಚಿನ ಉದ್ಯೋಗವಕಾಶ ಕಲ್ಪಿಸುತ್ತಿದೆ. ದೇಶದಲ್ಲಿ ಪ್ರವಾಸೋದ್ಯಮ 2ನೇ ಅತಿದೊಡ್ಡ ಉದ್ಯಮವಾಗಿದೆ ಎಂದರು.
    ಪ್ರವಾಸೋದ್ಯಮ ಕ್ಷೇತ್ರ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಪರಿಹರಿಸಲು ಮುಂದಾಗಬೇಕು ಹಾಗೂ ವಿಶ್ವವಿದ್ಯಾಲಯಗಳು ಪ್ರವಾಸೋದ್ಯಮ ಕೋರ್ಸ್‌ಗಳನ್ನು ಪ್ರಾರಂಭಿಸಿ ಮಾನವ ಸಂಪನ್ಮೂಲ ಸೃಷ್ಟಿಸಬೇಕು ಎಂದು ಸಲಹೆಯಿತ್ತರು.

    ಭಾರತದಲ್ಲಿ ಹೆಚ್ಚಿನ ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ಇಂತಹ ಸನ್ನಿವೇಶದಲ್ಲಿ ಕೃಷಿ ಪ್ರವಾಸೋದ್ಯಮಕ್ಕೆ ಉತ್ತಮ ಅವಕಾಶವಿದೆ. ಗ್ರಾಮೀಣ ತೋಟಗಳಿಗೆ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಬೇಕು. ರೈತರೂ ಸಹ ತಮ್ಮ ತೋಟಗಳು ಮತ್ತು ಕೃಷಿ ಉತ್ಪನ್ನಗಳ ಕುರಿತು ಸಾವಾಜಿಕ ಜಾಲತಾಣಗಳ ಮೂಲಕ ಪ್ರಚುರಪಡಿಸಬಹುದೆನ್ನುವ ಮೂಲಕ ವಿವಿ ಇತಿಹಾಸ ಪ್ರಾಧ್ಯಾಪಕ ಪ್ರೊ.ಎನ್.ಶೇಕ್ ಮಸ್ತಾನ್ ಹೊಸ ಯೋಜನೆ ಪ್ರಸ್ತಾಪಿಸಿದರು.

    ದೇಶದ ವಿವಿಧ ರಾಜ್ಯಗಳಿಂದ ಪ್ರತಿನಿಧಿಗಳು ವೆಬಿನಾರ್‌ನಲ್ಲಿ ಭಾಗವಹಿಸಿದ್ದರು. ಪ್ರಾಂಶುಪಾಲ ಪ್ರೊ.ಕೆ.ಆರ್.ಶಿವಶಂಕರ್ ಪ್ರಸಾದ್, ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಂ.ಎನ್.ರು, ಪ್ರಾಧ್ಯಾಪಕರಾದ ಎಸ್.ಸಣ್ಣೀರಯ್ಯ, ಆರ್.ಶ್ರೀದೇವಿ, ಕೆ.ಮುನಿಕೃಷ್ಣಪ್ಪ, ಡಾ.ಸಿ.ಎಂ.ದಿನೇಶ್, ವಿ.ಕೆ.ರಾಯಪ್ಪ, ಮಂಜುಳಾ, ವನಿತಾ, ಡಾ.ಸಣ್ಣಚಿಕ್ಕಯ್ಯ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts