More

    Web Exclusive ಸಮರ್ಥತೆ ಪರೀಕ್ಷೆಗೆ ಅರಣ್ಯ ಅಭಿವೃದ್ಧಿ ನಿಗಮ ಮೀನ-ಮೇಷ; ಕಾರಣ ತಿಳಿಸದೆ ಪರೀಕ್ಷೆ ಮುಂದೂಡಿಕೆ

    | ದ್ವಾರಕನಾಥ್ ಎಲ್. ಬೆಂಗಳೂರು

    ಕೈಗಾರಿಕೆ ಸ್ಥಾಪನೆ, ಅರಣ್ಯ ಭೂಮಿ ಅಭಿವೃದ್ಧಿ ಮತ್ತು ನಿರ್ವಹಣಾ ಚಟುವಟಿಕೆಗಾಗಿ ಅರಣ್ಯ ಅಭಿವೃದ್ಧಿ ನಿಗಮ ವಿವಿಧ ಹುದ್ದೆಗಳ ಸಮರ್ಥತೆ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಿರುವುದರಿಂದ ಸಾವಿ0ರಾರು ಅಭ್ಯರ್ಥಿಗಳಿಗೆ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನೇರ ನೇಮಕಾತಿ ಕನಸು ಮರೀಚಿಕೆಯಾಗೇ ಉಳಿದಿದೆ.

    2016ರಲ್ಲಿ ಪದವಿ/ ಪಿಯುಸಿ ಮುಗಿಸಿದವರಿಗೆ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ವತಿಯಿಂದ 23 ಸಹಾಯ ನೆಡುತೋಪು ಅಧೀಕ್ಷಕರು , 05 ನೆಡುತೋಪು ಅಧೀಕ್ಷಕರು ಹಾಗೂ 22 ಅರಣ್ಯ ರಕ್ಷಕರ ನೇರ ನೇಮಕಾತಿಗೆ ಅನುಮೋದನೆ ನೀಡಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ನೀಡಲಾಗಿತ್ತು.

    ಸಾವಿರ ಅರ್ಹ ಅಭ್ಯರ್ಥಿಗಳ ಕನಸು ಭಗ್ನ

    ನಿಗಮದಿಂದ ಕರೆ ಮಾಡಿದ 3 ನೇರ ನೇಮಕಾತಿ ಹುದ್ದೆಗಳಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವರ್ಗಗಳ ಹಾಗೂ ವಿವಿಧ ವರ್ಗಗಳ 10 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಿದ್ದು, ಅದರಲ್ಲಿ ಸಾವಿರಕ್ಕೂ ಅಭ್ಯರ್ಥಿಗಳು ಅರ್ಹ ಸಮರ್ಥತೆ ಪರೀಕ್ಷೆಗಾಗಿ ಕಳೆದ 3 ವರ್ಷಗಳಿಂದ ಕಾಯುತ್ತಿದ್ದಾರೆ. ಸಾವಿರಕ್ಕೂ ಅಧಿಕ ಅರ್ಹ ಅಭ್ಯರ್ಥಿಗಳ ಕನಸು ಭಗ್ನವಾಗಿದೆ. ಅರಣ್ಯ ಅಭಿವೃದ್ಧಿ ನಿಗಮ ಪರೀಕ್ಷೆ ನಡೆಸದೆ ತಾತ್ಕಾಲಿಕವಾಗಿ ಮುಂದೂಡಿರುವುದು ಎಷ್ಟು ಮಾತ್ರ ಸರಿ ಎಂದು ಅಭ್ಯರ್ಥಿಯೊಬ್ಬರು ಪ್ರಶ್ನಿಸಿದ್ದಾರೆ.

    ಕಾರಣ ತಿಳಿಸದೆ ಪರೀಕ್ಷೆ ಮುಂದೂಡಿಕೆ

    ಸಹಾಯಕ ನೆಡುತೋಪು ಅಧೀಕ್ಷಕ ಹಾಗೂ ಅರಣ್ಯ ರಕ್ಷಕ ಹಾಗೂ ನೆಡುತೋಪು ಅಧೀಕ್ಷಕ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಸಂಬಂಧ 1:20 ( ಹುದ್ದೆ: ಅಭ್ಯರ್ಥಿ) ಪಟ್ಟಿಯಲ್ಲಿನ ಅಭ್ಯರ್ಥಿಗಳಿಗೆ 2019ರ ಸೆಪ್ಟೆಂಬರ್ ತಿಂಗಳಲ್ಲಿ ನಡೆಸಬೇಕಿದ್ದ ದೇಹ ದಾರ್ಢ್ಯತೆ, ದೈಹಿಕ ತಾಳ್ವಿಕೆ ಹಾಗೂ ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆಗಳನ್ನು ಕಾರಣ ತಿಳಿಸದೇ ಮುಂದೂಡಿದ್ದಾರೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ.

    4 ವರ್ಷ ಕಳೆದರೂ ನೇಮಕಾತಿ ವಿಳಂಬ

    ಅರಣ್ಯ ಅಭಿವೃದ್ಧಿ ನಿಮಗದಲ್ಲಿ ನೇಮಕಾತಿ ಅರ್ಜಿ ಸಲ್ಲಿಸಲು 2016ರಲ್ಲೇ ಅನುಮೋದನೆ ದೊರೆಯಿತು. 2016ರಿಂದ ಇದುವರೆಗೂ 1 ಸಾವಿರಕ್ಕೂ ಅಧಿಕ ಅರ್ಹ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ದೈಹಿಕ ಹಾಗೂ ಲಿಖಿತ ಪರೀಕ್ಷೆಗಳನ್ನು ಮುಂದೂಡಿ ನೇಮಕಾತಿ ವಿಳಂಬ ಮಾಡುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರು ಇತ್ತ ಗಮನ ಹರಿಸಬೇಕಿದೆಂದು ಅರ್ಹ ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.

    ಸಚಿವ ಆನಂದ್ ಸಿಂಗ್​ಗೆ ಮನವಿ

    ಅರಣ್ಯ ಅಭಿವೃದ್ಧಿ ನಿಗಮದ ಅರ್ಹ ಅಭ್ಯರ್ಥಿಗಳ ಸಮಸ್ಯೆಯನ್ನು ಈಗಾಗಲೇ ಸಚಿವ ಆನಂದ್ ಸಿಂಗ್ ಅವರೊಂದಿಗೆ ಚರ್ಚಿಸಲಾಗಿದೆ. ಈ ಬಗ್ಗೆ ಮನವಿ ಪತ್ರ ಸಲ್ಲಿಸುವಂತೆ ಈಗಾಗಲೇ ತಿಳಿಸಿದ್ದು, ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.

    ನೇಮಕಾತಿ ವಿಳಂಬ ಹಾಗೂ ಸಮರ್ಥತೆ ಪರೀಕ್ಷೆ ಮುಂದೂಡಿರುವ ಸಂಬಂಧ ಹಲವು ಭಾರಿ ಅರಣ್ಯ ಅಭಿವೃದ್ಧಿ ನಿಗಮದವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇದು ಹೀಗೆ ಮಂದುವರಿದರೆ ರಾಜ್ಯದ ಅರ್ಹ ಅಭ್ಯರ್ಥಿಗಳೆಲ್ಲ ಒಂದಾಗಿ ಉಗ್ರ ಹೋರಾಟ ನಡೆಸಲಾಗುವುದು.

    | ನೊಂದ ಅಭ್ಯರ್ಥಿ, ವಿಜಯಪುರ

    ಅರಣ್ಯ ಅಭಿವೃದ್ಧಿ ನಿಗಮದಿಂದ ಕರೆಯಲಾಗಿರುವ ಸಹಾಯಕ ನೆಡುತೋಪು ಅಧೀಕ್ಷಕ, ಅರಣ್ಯ ರಕ್ಷಕ ಹಾಗೂ ನೆಡುತೋಪು ಅಧೀಕ್ಷಕ ಹುದ್ದೆಗೆ ಸಂಬಂಧ ಅರ್ಹ ಅಭ್ಯರ್ಥಿಗಳಿಗೆ ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆಗೆ ಕೋವಿಡ್-19 ಸೋಂಕಿನಿಂದ ಪ್ರಕ್ರಿಯೆಯಲ್ಲಿ ಸಮಸ್ಯೆಯುಂಟಾಗಿದೆ. ಸದ್ಯದಲ್ಲಿಯೇ ನಿಗಮದ ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗುವುದು

    | ಮಧು ಶರ್ಮಾ, ಅರಣ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts