More

    ವೆಬ್ ಕ್ಯಾಮರಾ ಅಳವಡಿಕೆ

    ಮಾನ್ವಿ: ಮಾನ್ವಿ-ಸಿರವಾರ ಅವಳಿ ತಾಲೂಕಿನಲ್ಲಿ 276 ಮತಗಟ್ಟೆಗಳಿದ್ದು, 55 ಅತಿಸೂಕ್ಷ್ಮ ಹಾಗು 221 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ ಎಂದು ಚುನಾವಣಾಧಿಕಾರಿ ಪ್ರಕಾಶ ವಡ್ಡರ್ ಮಾಹಿತಿ ನೀಡಿದರು.

    ತಾಲೂಕಿನಲ್ಲಿ ಒಟ್ಟು 2,33,823 ಮತದಾರರಿದ್ದಾರೆ. 1,14,498 ಪುರುಷರು ಹಾಗು 1,19,261 ಮಹಿಳಾ ಮತದಾರರಿದ್ದಾರೆ. 64 ಜನ ಇತರ ಮತದಾರರಿದ್ದಾರೆ. 276 ಮತಗಟ್ಟೆಗಳಲ್ಲಿ ಮೂಲ ಸೌಲಭ್ಯ ಕಲ್ಪಿಸಲಾಗಿದ್ದು, ಶೇ.50 ಮತಗಟ್ಟೆಗಳಿಗೆ ಈ ಬಾರಿ ವೆಬ್ ಕ್ಯಾಮರಾಗಳನ್ನು ಅಳವಡಿಸುವ ಮೂಲಕ ನೇರವಾಗಿ ಮತದಾನದ ಪ್ರಕ್ರಿಯೆ ವೀಕ್ಷಿಸಲಾಗುವುದು ಎಂದರು.

    ಒಂದಕ್ಕಿಂತ ಹೆಚ್ಚು ಮತಗಟ್ಟೆ ಇರುವ ಕೇಂದ್ರಗಳಲ್ಲಿ ಮೈಕ್ರೋ ಅಬ್ಸರ್ವರ್‌ಗಳನ್ನು ನೇಮಕ ಮಾಡಲಾಗಿದೆ. ಪ್ರತಿ ಮತಗಟ್ಟೆಯಲ್ಲಿ ಪಿಆರ್‌ಒ, ಎಪಿಆರ್‌ಒ, ಇಬ್ಬರು ಪಿಒಗಳು ಒಬ್ಬ ಡಿ ಗ್ರೂಪ್ ನೌಕರ ಹಾಗೂ ಪೊಲೀಸ್ ಸೇರಿ 6 ಜನ ಸಿಬ್ಬಂದಿ ನಿಯೋಜಿಸಲಾಗಿದೆ. ಪಟ್ಟಣದ ಎಪಿಎಂಸಿ ಭವನದಲ್ಲಿ ವಿಶೇಷ ಚೇತನ ಸ್ನೇಹಿ ಮತಗಟ್ಟೆ, ಮನರಂಜನಾ ಕೇಂದ್ರದಲ್ಲಿ ಪಿಂಕ್ ಮತಗಟ್ಟೆ, ಪುರಸಭೆ ಕಚೇರಿಯಲ್ಲಿ ಯುವ ಮತಗಟ್ಟೆ, ತಾಲೂಕು ಪಂಚಾಯಿತಿಯಲ್ಲಿ ಸಾಂಪ್ರದಾಯಿಕ ಮತಗಟ್ಟೆ ಸ್ಥಾಪಿಸಲಾಗಿದೆ. ಮೇ 10 ರಂದು ಬೆಳಗ್ಗೆ 7 ರಿಂದ ಸಂಜೆ 6 ರ ವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಪ್ರಕಾಶ ವಡ್ಡರ್ ಕೋರಿದರು. ಮಾನ್ವಿ ತಹಸೀಲ್ದಾರ್ ಚಂದ್ರಕಾಂತ್ ಎಲ್.ಡಿ., ಸಿರವಾರ ತಹಸೀಲ್ದಾರ್ ರವಿವರ್ಮ, ಗ್ರೇಡ್-2 ತಹಸೀಲ್ದಾರ್ ಅಬ್ದುಲ್ ವಾಹಿದ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts