More

    ಇನ್ನೂ ಆರು ತಿಂಗಳು ಮಾಸ್ಕ್​ ಬಿಡುವಂತಿಲ್ಲ! ಲಾಕ್​ಡೌನ್​ ಮಾಡಲ್ಲ; ಸರ್ಕಾರದ ಹೊಸ ರೂಲ್ಸ್​

    ಮುಂಬೈ: ಕರೊನಾ ಇನ್ನೇನು ಹೋಗೇ ಬಿಟ್ಟಿತು, ಮಾಸ್ಕ್​ನೆಲ್ಲ ಗಾಳಿಗೆ ತೂರಿ, ನೆಮ್ಮದಿಯಿಂದ ಸುತ್ತಾಡೋಣ ಎನ್ನುವ ಭ್ರಮೆಯಲ್ಲಿ ನೀವಿದ್ದರೆ, ಸದ್ಯಕ್ಕೆ ಅದನ್ನು ಮರೆತುಬಿಡಿ. ಏಕೆಂದರೆ ಇನ್ನು ಆರು ತಿಂಗಳ ಕಾಲ ಮಾಸ್ಕ್​ ಬಳಕೆ ಕಡ್ಡಾಯ. ಹಾಗೆಂದು ಹೇಳಿ ಮಹಾರಾಷ್ಟ್ರದ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ಇದನ್ನೂ ಓದಿ: ಕರೆಂಟ್​ ಬೇಕಿಲ್ಲ, ಶಿಲಾನ್ಯಾಸ ಕಾರ್ಯಕ್ರಮಕ್ಕೆ ವಿಜೃಂಭಣೆಯಿಲ್ಲ! ಅಯೋಧ್ಯೆ ಮಸೀದಿಯ ವಿಶೇಷತೆಗಳಿವು

    ಮಹಾರಾಷ್ಟ್ರದಲ್ಲಿ ಕರೊನಾ ನಿಯಂತ್ರಣದಲ್ಲಿದೆ. ಆದರೆ ಸಂಪೂರ್ಣವಾಗಿ ಎಂದು ಹೇಳಲಾಗುವುದಿಲ್ಲ. ಕರೊನಾ ಬಂದ ಮೇಲೆ ಗುಣಪಡಿಸುವುದಕ್ಕಿಂತ, ಅದು ಬಾರದಿರುವಂತೆ ನೋಡಿಕೊಳ್ಳುವುದೇ ಒಳಿತು. ತಜ್ಞರು ರಾತ್ರಿ ಕರ್ಫ್ಯೂ ಅಥವಾ ಇನ್ನೊಂದು ಲಾಕ್ ಡೌನ್ ಜಾರಿಗೊಳಿಸಲು ಸಲಹೆ ನೀಡಿದ್ದಾರೆ. ಆದರೆ ನಾವು ಹಾಗೆ ಮಾಡುವುದಿಲ್ಲ. ಆದರೆ ಇನ್ನು ಕನಿಷ್ಠ ಆರು ತಿಂಗಳ ಕಾಲ ರಾಜ್ಯದ ಜನರು ಮಾಸ್ಕ್​ ಬಳಕೆ ಕಡ್ಡಾಯ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ. (ಏಜೆನ್ಸೀಸ್​)

    ಹಸೆಮಣೆ ಏರಬೇಕಾದವಳು ಆಸ್ಪತ್ರೆ ಸೇರಿದಳು! ಆಸ್ಪತ್ರೆಯ ಹಾಸಿಗೆಯಲ್ಲೇ ನಡೆಯಿತು ಮದುವೆ!

    ವಿಡಿಯೋ ಕಾಲ್ ಮೂಲಕವೇ ಯುವಕನ ಬಟ್ಟೆ ಬಿಚ್ಚಿಸಿದ ಚಾಲಾಕಿ ಹುಡುಗಿಯರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts