More

    ಮಾಸ್ಕ್​ ಧರಿಸಿ ಇಲ್ಲವೇ 5 ಸಾವಿರ ರೂ. ಜುಲ್ಮಾನೆ ಪಾವತಿಸಿ ಅಥವಾ 3 ವರ್ಷ ಸೆರೆವಾಸ ಶಿಕ್ಷೆ ಅನುಭವಿಸಿ!

    ಅಹಮದಾಬಾದ್​: ಕರೊನಾ ಪಿಡುಗಿನ ಹಿನ್ನೆಲೆಯಲ್ಲಿ ಸೋಂಕಿನಿಂದ ದೂರವುಳಿಯಲು ಹಾಗೂ ಕೆಮ್ಮು ಮತ್ತು ಜ್ವರ ಇರುವಂಥವರಿಂದ ಸೋಂಕು ಬೇರೊಬ್ಬರಿಗೆ ಹರಡದಂತೆ ತಡೆಯಲು ಮಾಸ್ಕ್​ ಧರಿಸುವುದು ವಾಡಿಕೆಯಾಗಿದೆ. ಗುಜರಾತ್​ನ ಅಹಮದಾಬಾದ್​ನ ಸ್ಥಳೀಯ ಆಡಳಿತ ಸಂಸ್ಥೆ ಮಾಸ್ಕ್​ ಧರಿಸುವುದನ್ನು ಕಡ್ಡಾಯಗೊಳಿಸಿದೆ.

    ಒಂದು ವೇಳೆ ಮಾಸ್ಕ್​ ಧರಿಸದೆ ಯಾರಾದರೂ ಹೊರಬಂದರೆ, ತಿರುಗಾಡುತ್ತಿರುವುದು ಕಂಡರೆ ಅಂಥ ವ್ಯಕ್ತಿಗೆ 5 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಇಲ್ಲವೇ 3 ವರ್ಷ ಸೆರೆವಾಸದ ಶಿಕ್ಷೆಗೆ ಗುರಿಪಡಿಸಲು ನಿರ್ಧರಿಸಿದೆ.

    ಈ ಬಗ್ಗೆ ಮಾಹಿತಿ ನೀಡಿರುವ ಅಹಮದಾಬಾದ್​ ಮಹಾನಗರಪಾಲಿಕೆಯ ಆಯುಕ್ತ ವಿಜಯ್​ ನೆಹ್ರಾ, ಈ ನಿಯಮ ಸೋಮವಾರ ಬೆಳಗ್ಗೆ 6 ಗಂಟೆಯಿಂದ (ಏಪ್ರಿಲ್​ 13) ಜಾರಿಗೆ ಬರುತ್ತಿದೆ. ಸಾಂಕ್ರಾಮಿಕ ಕಾಯಿಲೆಗಳ ಕಾಯ್ದೆಯನ್ವಯ ಈ ಆದೇಶವನ್ನು ಜಾರಿಗೊಳಿಸಲಾಗಿದೆ. ಇದರ ಪ್ರಕಾರ, ಮಾಸ್ಕ್​ ಧರಿಸುವ ಕಡ್ಡಾಯ ನಿಯಮ ಉಲ್ಲಂಘಿಸುವವರಿಗೆ 5 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ದಂಡ ಪಾವತಿಸದಿದ್ದರೆ, ತಪ್ಪಿತಸ್ಥರನ್ನು 3 ವರ್ಷ ಜೈಲು ಶಿಕ್ಷೆಗೆ ಗುರಿಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

    ಅಂಗಡಿಗಳಲ್ಲಿ ಸಿಗುವ ಮಾಸ್ಕ್​ಗಳು ಇಲ್ಲವೇ ಮನೆಯಲ್ಲಿ ತಯಾರಿಸಿದ ಮಾಸ್ಕ್​ಗಳಲ್ಲಿ ಯಾವುದನ್ನಾದರೂ ಜನರು ಧರಿಸಬಹುದಾಗಿದೆ. ಇಲ್ಲವೇ ಮೂಗು ಮತ್ತು ಬಾಯಿ ಮುಚ್ಚುವ ರೀತಿಯಲ್ಲಿ ಕರವಸ್ತ್ರವನ್ನು ಕಟ್ಟಿಕೊಳ್ಳಬಹುದಾಗಿದೆ ಎಂದು ವಿವರಿಸಿದ್ದಾರೆ.
    ಸಾರ್ವಜನಿಕರಲ್ಲದೆ ಬೀದಿಬದಿ ವ್ಯಾಪಾರಿಗಳು, ಅಂಗಡಿಗಳ ಮಾಲೀಕರು ಮತ್ತಿತರರಿಗೂ ಈ ಆದೇಶ ಅನ್ವಯವಾಗುತ್ತದೆ ಎಂದು ತಿಳಿಸಿದ್ದಾರೆ.

    ಕರೊನಾ ಪಿಡುಗಿನಿಂದ ಆರ್ಥಿಕ ಹಿಂಜರಿತ; ಚೇತರಿಕೆಗೆ ಕೇಂದ್ರ ಸರ್ಕಾರ ಸುರಿಸುವುದೇ ಹೆಲಿಕಾಪ್ಟರ್​ನಲ್ಲಿ ಹಣ…!?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts