More

    ‘ನಮಗೆ ಸಂಬಂಧವಿಲ್ಲ, ವಿ ಡೋಂಟ್ ಕೇರ್’: ಪ್ರಧಾನಿ ಮೋದಿ ಹೇಳಿಕೆಗೆ ಮ್ಯಾಥ್ಯೂ ಮಿಲ್ಲರ್ ಹೀಗೆ ಹೇಳಿದ್ದೇಕೆ?

    ವಾಷಿಂಗ್ಟನ್​: ಭಾರತ-ಪಾಕಿಸ್ತಾನ ಸಂಘರ್ಷಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ಹೇಳಿದ್ದಾರೆ.

    ಇದನ್ನೂ ಓದಿ: ಮರುಭೂಮಿಯಲ್ಲಿ ಪ್ರವಾಹ.. ಭಾರೀ ಮಳೆಗೆ ತತ್ತರಿಸಿದ ದುಬೈ!

    ಭಯೋತ್ಪಾದಕರ ಹತ್ಯೆಗೆ ಗಡಿ ದಾಟಲು ಹಿಂಜರಿಯುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮ್ಯಾಥ್ಯೂ ಮಿಲ್ಲರ್ ಭಾರತ ಮತ್ತು ಪಾಕಿಸ್ತಾನದ ನಡುವೆ ನಾವು ಮಧ್ಯೆ ಪ್ರವೇಶಿಸುವುದಿಲ್ಲ. ಆದರೆ, ಸಮಸ್ಯೆಯನ್ನು ಗಂಭೀರಗೊಳಿಸುವ ಬದಲು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

    ಪಾಕಿಸ್ತಾನದಲ್ಲಿ ಭಾರತ ಹಲವು ನರಮೇಧಗಳನ್ನು ಮಾಡಿದೆ ಎಂದು ಇದೇ ತಿಂಗಳ 5ರಂದು ಬ್ರಿಟನ್ನಿನ ಸುದ್ದಿ ನಿಯತಕಾಲಿಕೆ ದಿ ಗಾರ್ಡಿಯನ್ ಲೇಖನ ಪ್ರಕಟಿಸಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಕೇಂದ್ರ ಸರ್ಕಾರ ಇದೊಂದು ಸುಳ್ಳು ಪ್ರಚಾರ ಎಂದು ಆಕ್ರೋಶ ವ್ಯಕ್ತಪಡಿಸಿತ್ತು. ಈ ಸುಳ್ಳು ಕಥೆ ಹೊರಬಿದ್ದ ಕೆಲವೇ ದಿನಗಳಲ್ಲಿ ಪ್ರಧಾನಿ ಮೋದಿ ಉತ್ತರಾಖಂಡದ ಋಷಿಕೇಶದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಯೋತ್ಪಾದಕರನ್ನು ಕೊನೆಗಾಣಿಸುವ ಬಲಿಷ್ಠ ಸರ್ಕಾರ ದೇಶದಲ್ಲಿ ಅಧಿಕಾರದಲ್ಲಿದೆ. ದೇಶದ ಶಾಂತಿ ಕದಡಲು ಯತ್ನಿಸುವ ಭಯೋತ್ಪಾದಕರನ್ನು ಸರ್ಕಾರ ಬಿಡುವುದಿಲ್ಲ. ಪಾಕಿಸ್ತಾನಕ್ಕೆ ವಾಪಸ್ ಹೋದರೂ ಬೇಟೆಯಾಡುತ್ತೇವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

    ಪಶ್ಚಿಮ ಬಂಗಾಳದಲ್ಲಿ ರಾಮನವಮಿ ಮೆರವಣಿಗೆ ತಂದ ಆತಂಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts