More

    ಗಲ್ವಾನ್​ ಕಣಿವೆಯಲ್ಲಿ ಪಿಪಿ 14ರವರೆಗೆ ಗಸ್ತು, ಭಾರತೀಯ ಯೋಧರ ಘೋಷಣೆ

    ನವದೆಹಲಿ: ಲಡಾಖ್​ನ ಪೂರ್ವಭಾಗದಲ್ಲಿ ನಿಯೋಜನೆಗೊಂಡಿದ್ದ ಭಾರತ ಮತ್ತು ಚೀನಾ ಸೇನಾಪಡೆಗಳು ಹಿಂದೆಗೆಯಲಾರಂಭಿಸಿವೆ. ಗಲ್ವಾನ್ ಕಣಿವೆಯಿಂದ ಚೀನಾ ಸೇನೆ ಸಂಪೂರ್ಣ ಹಿಂದಿರುಗಿದ ಬಳಿಕ ಗಸ್ತು ಪಾಯಿಂಟ್​ 14ರವರೆಗೆ (ಪಿಪಿ 14) ಗಸ್ತು ತಿರುಗುವುದಾಗಿ ಭಾರತೀಯ ಸೇನಾಪಡೆ ಘೋಷಿಸಿದೆ.

    ವಾಸ್ತವ ಗಡಿರೇಖೆಯಲ್ಲಿ ಚೀನಾದ ಪೀಪಲ್ಸ್​ ಲಿಬರೇಷನ್​ ಆರ್ಮಿ (ಪಿಎಲ್​ಎ) ಯೋಧರು ಸಂಪೂರ್ಣ ಹಿಂದೆಗೆದಿದ್ದಾರೆ ಎಂಬುದನ್ನು ಖಚಿಪಡಿಸಿಕೊಂಡು, ಪಿಪಿ 14ರವರೆಗೆ ಗಸ್ತು ತಿರುಗುವುದಾಗಿ ಭಾರತೀಯ ಸೇನೆ ಹೇಳಿದೆ.

    ಸ್ಥಳಾಂತರಿತ ಶಿಬಿರಗಳ ಬಗ್ಗೆ ಜಂಟಿ ಪರಿಶೀಲನೆ ನಡೆಸುವ ಜತೆಗೆ, ಭೂಮಿಯನ್ನು ಸರಿಪಡಿಸಲಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುವುದು. ತನ್ಮೂಲಕ ಪರಸ್ಪರ ನಂಬಿಕೆ ಮೂಡುವಂತೆ ಮಾಡಿ, ಗಸ್ತು ತಿರುಗಲಾಗುವುದು ಎಂದು ತಿಳಿಸಿದೆ. ಗಲ್ವಾನ್​ನ ರಕ್ತಸಿಕ್ತ ಘರ್ಷಣೆಗೂ ಮುಂಚಿನವರೆಗೆ ಭಾರತೀಯ ಯೋಧರು ಪಿಪಿ 14ರವರೆಗೆ ಗಸ್ತು ತಿರುಗುತ್ತಿದ್ದರು.

    VIDEO|ಸೈಂಟಿಫಿಕ್ ಫಿಕ್ಷನ್ ಸಿನಿಮಾದ ನಾಯಕಿ: ಈಕೆ ಜಗತ್ತಿನ ಮೊದಲ ಎಐ ಆರ್ಟಿಸ್ಟ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts