More

    “ಮತಾಂತರ ಅಭಿವ್ಯಕ್ತಿ ಸ್ವಾತಂತ್ರ್ಯ… ಬಲವಂತವಾಗಿ ಕಾಯ್ದೆ ತಂದ್ರೆ ಸುಟ್ಟು ಹಾಕ್ತೀವಿ”

    ಬಾಗಲಕೋಟೆ: “ಬಿಜೆಪಿಯವರು ಮತಾಂತರ ನಿಷೇಧ ಕಾಯ್ದೆಯನ್ನು ಬಲವಂತವಾಗಿ ತಂದ್ರೆ, ನಾವು ಬಂದ ಮೇಲೆ ಅವೆಲ್ಲವನ್ನ ಸಾಯಿಸಿ ಬಿಡ್ತೇವಿ. ಇವರು ಮಾಡಿದ ಕಾಯ್ದೆ ಸುಟ್ಟು ಹಾಕಿ, ಜನಪರವಾದ ಕಾಯ್ದೆ ತರ್ತೇವಿ” ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಎಚ್.ಆಂಜನೇಯ ಆವೇಶದಿಂದ ಹೇಳಿದ್ದಾರೆ.

    ಬಾಗಲಕೋಟೆಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮತಾಂತರ ಅವನ(ಪ್ರಜೆಯ) ಅಭಿವ್ಯಕ್ತಿ ಸ್ವಾತಂತ್ರ್ಯ. ಅವರು ರಾಮ ರಾಮ ಅಂತಾರೆ. ರಾಮ ಏನು ಇವರಪ್ಪನ ಮನೆ ಸ್ವತ್ತಲ್ಲ. ನಾನೂ ಹಿಂದು ಧರ್ಮದಲ್ಲಿ ಇದ್ದೇನೆ. ರಾಮನಿಗೆ ಹತ್ತಿರವಾದ ಆಂಜನೇಯ ನನ್ನ ಹೆಸರು. ಯಾವ ಧರ್ಮದಲ್ಲಿ ಇರಬೇಕು ಅಂತ ನನಗೆ ಬಿಟ್ಟಿದ್ದು” ಎಂದರು.

    ಇದನ್ನೂ ಓದಿ: ರಾಜ್ಯದಲ್ಲಿ 3ನೇ ಒಮಿಕ್ರಾನ್​ ಪ್ರಕರಣ; ಬೊಮ್ಮನಹಳ್ಳಿ ನಿವಾಸಿಯಲ್ಲಿ ಸೋಂಕು

    ಡಾ.ಅಂಬೇಡ್ಕರ್ ಅವರು ದುರಾದೃಷ್ಟವಶಾತ್ ಹಿಂದು ಆಗಿ ಹುಟ್ಟಿದ್ದೇನೆ, ಹಿಂದುವಾಗಿ ಸಾಯಲ್ಲ ಅಂತ ಭೌದ್ಧ ಧರ್ಮ ಸ್ವೀಕರಿಸಿದ್ರು. ಹಿಂದು ಧರ್ಮದಲ್ಲಿ ಮಲ ತಿನ್ನುವ ನಾಯಿ ಮತ್ತು ಬೆಕ್ಕನ್ನು ಮನೆಯಲ್ಲಿ ಬಿಡ್ತೀರಿ. ಆದರೆ, ಮನುಷ್ಯನಾಗಿರುವ ನನ್ನನ್ನ ಸೌಜನ್ಯವಾಗಿಯೂ ಕಾಣದ ಸಮಾಜ ಇದೆ. ಬೇರೆ ದೇಶಗಳಲ್ಲಿ ಬಾತ್ ರೂಂ ಸ್ವಚ್ಚ ಮಾಡುವ ವ್ಯಕ್ತಿಗೆ ಥ್ಯಾಂಕ್ಸ್ ಹೇಳ್ತಾರೆ. ಈ ದೇಶದಲ್ಲಿ ನಮ್ಮ ಪೌರ ಕಾರ್ಮಿಕರಿಗೆ ಯಾರಾದ್ರೂ ಥ್ಯಾಂಕ್ಸ್ ಹೇಳ್ತಾರಾ? ಇಂಥ ಸಮಾಜದಲ್ಲಿ ಅವನಿಗೆ ಬೇಕಾದ ಧರ್ಮ ಸ್ವೀಕರಿಸಲು ಸಂವಿಧಾನದಲ್ಲಿ ಅವಕಾಶ ಇದೆ ಎಂದರು.

    ಕ್ರೈಸ್ತರು ಮಾತ್ರ ಧರ್ಮ ಬೋಧನೆ ಮಾಡ್ತಾರೆ. ಮತಾಂತರ ಆಗಿದ್ರೆ ಹಿಂದು ಪ್ರತಿಪಾದಕರೂ ನಮ್ಮ ಧರ್ಮ ಬಹಳ ಚೆನ್ನಾಗಿದೆ ಅಂತ ಹೇಳಿ ಧರ್ಮದಲ್ಲಿ ಉಳಿಸಿಕೊಳ್ಳಲಿ. ಇದಕ್ಕೆ ಯಾವುದೇ ಅಡ್ಡಿ ಇಲ್ವಲ್ಲ ಎಂದ ಆಂಜನೇಯ, ಈಗ ಬಲವಂತವಾಗಿ ಇವರು ಎಷ್ಟೇ ಕಾಯ್ದೆ ತಂದ್ರೂ ಅವೆಲ್ಲ ಜನವಿರೋಧಿ ಕಾಯ್ದೆಗಳು. ನಾವು(ಕಾಂಗ್ರೆಸ್) ಬಂದ ಮೇಲೆ ಅವೆಲ್ಲವನ್ನು ಸಾಯಿಸಿ, ಸುಟ್ಟು ಹಾಕ್ತೇವಿ ಎಂದರು.

    ಇದನ್ನೂ ಓದಿ: ಆ ಹೀರೋ ನಿಜಕ್ಕೂ ಹಾಟ್​! ಸೌತ್​ ನಟನ ಬಗ್ಗೆ ಬೋಲ್ಡ್​ ಕಾಮೆಂಟ್​ ಮಾಡಿದ ಬಾಲಿವುಡ್​ ಬ್ಯೂಟಿ

    ಆತ್ಮಹತ್ಯೆ ಮಾಡಿಕೊಂಡಿದ್ದು ಹೇಡಿತನ: ಮಂಗಳೂರಲ್ಲಿ ಒತ್ತಾಯದ ಮತಾಂತರಕ್ಕೆ ಮುಂದಾಗಿದ್ದರಿಂದ ಬಾಗಲಕೋಟೆ ಮೂಲದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಆಂಜನೇಯ, ಯಾವ ಒತ್ತಾಯ ಇಲ್ಲ, ಪತ್ತಾಯ ಇಲ್ಲ. ಅದು ತನಿಖೆ ಆಗಿ ನ್ಯಾಯಾಧೀಶರು ಹೇಳಿದ್ರೆ ನಾವು ಒಪ್ಪಬಹುದು. ಅವರು ಯಾವ ಕಾರಣಕ್ಕೆ ಸತ್ತು ಹೋದ್ರೋ ಯಾರಿಗೆ ಗೊತ್ತು ಎಂದರು.

    ಬಲವಂತದ ಮತಾಂತರ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ರೆ ಅಂತವರ ವಿರುದ್ದ ಕ್ರಮ ಕೈಗೊಳ್ಳಲಿ. ನಾವೇನು ಬೇಡ ಅಂದಿದ್ದೇವಾ? ಈ ಬಗ್ಗೆ ತನಿಖೆ ಆಗಲಿ, ನ್ಯಾಯಾಲಯದಿಂದ ತೀರ್ಪು ಬರಲಿ. ಈಗ ಮಂಗಳೂರ ಘಟನೆಗೆ ಅವರೇ ಹೊಣೆ. ಯಾಕೆ ಸಾಯಬೇಕು? ಎಲ್ಲದಕ್ಕೂ ಕಾನೂನಿದೆ. ಮತಾಂತರಕ್ಕೆ ಬಲವಂತ ಮಾಡಿದ್ರೆ ರಕ್ಷಣೆ ಕೇಳಬೇಕಿತ್ತು. ಆತ್ಮಹತ್ಯೆ ಮಾಡಿಕೊಂಡಿದ್ದು ಹೇಡಿತನ ಎಂದು ಕಾಂಗ್ರೆಸ್ ಮುಖಂಡ ಎಚ್.ಆಂಜನೇಯ ಹೇಳಿದರು.

    ತೆರೆಯಲಿವೆ ಡ್ರೋನ್​ ಶಾಲೆ​ಗಳು! ಹೊಸ ಉದ್ಯೋಗ ಸೃಷ್ಟಿಯತ್ತ ಸರ್ಕಾರದ ಹೆಜ್ಜೆ

    ಮೆಡಿಕಲ್​​ ಕಾಲೇಜಿಗಾಗಿ ಚಳುವಳಿ: ‘ಬೂಟ್ ಪಾಲಿಶ್’ ಮಾಡಿ ಸಾಥ್​ ನೀಡಿದ ಸ್ಯಾಂಡಲ್​​ವುಡ್ ನಟಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts