More

    ಆರ್‌ಸಿಬಿ ಸತತ 2ನೇ ಗೆಲುವಿಗೆ ಕಾರಣ ವಿವರಿಸಿದ ನಾಯಕ ವಿರಾಟ್ ಕೊಹ್ಲಿ

    ದುಬೈ: ರಾಜಸ್ಥಾನ ರಾಯಲ್ಸ್ ತಂಡವನ್ನು 7 ವಿಕೆಟ್‌ಗಳಿಂದ ಮಣಿಸುವ ಮೂಲಕ ಐಪಿಎಲ್ 14ನೇ ಆವೃತ್ತಿಯ ಯುಎಇ ಚರಣದಲ್ಲಿ ಸತತ 2ನೇ ಗೆಲುವು ದಾಖಲಿಸಿ ಪ್ಲೇಆ್ಗೆ ಸನಿಹವಾದ ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ, ಬೌಲರ್‌ಗಳಿಗೆ ಗೆಲುವಿನ ಶ್ರೇಯ ಸಲ್ಲಿಸಿದ್ದಾರೆ. ಭರ್ಜರಿ ಆರಂಭ ಕಂಡ ರಾಜಸ್ಥಾನ ತಂಡವನ್ನು 150 ರನ್ ಒಳಗೆ ಕಟ್ಟಿಹಾಕಿದ ಬೌಲರ್‌ಗಳ ಪರಿಶ್ರಮಕ್ಕೆ ಕೊಹ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ‘ನಾವೂ ಎರಡೂ ಪಂದ್ಯಗಳಲ್ಲಿ ಬೌಲರ್‌ಗಳ ಬಲಿಷ್ಠ ತಿರುಗೇಟಿನಿಂದ ಮೇಲುಗೈ ಸಾಧಿಸಿದೆವು. ಎರಡೂ ಪಂದ್ಯಗಳಲ್ಲಿ ಎದುರಾಳಿ ತಂಡ ಪವರ್‌ಪ್ಲೇನಲ್ಲಿ ವಿಕೆಟ್ ನಷ್ಟವಿಲ್ಲದೆ 56 ರನ್ ಪೇರಿಸಿತ್ತು. ಆದರೆ ಬಳಿಕ ಮಧ್ಯಮ ಓವರ್‌ಗಳಲ್ಲಿ ವಿಕೆಟ್‌ಗಳನ್ನು ಕಬಳಿಸುವ ಮೂಲಕ ಬೌಲರ್‌ಗಳು ಎದುರಾಳಿ ತಂಡ ಬೃಹತ್ ಮೊತ್ತ ಪೇರಿಸದಂತೆ ನೋಡಿಕೊಂಡರು. ನಿರ್ಭೀತಿ ಮತ್ತು ಆತ್ಮವಿಶ್ವಾಸದ ಆಟಕ್ಕೆ ನಾವು ತಕ್ಕ ಪ್ರತಿಲವನ್ನು ಪಡೆದಿದ್ದೇವೆ’ ಎಂದು ಕೊಹ್ಲಿ ಹೇಳಿದರು.

    ರಾಜಸ್ಥಾನದ 150 ರನ್ ಸವಾಲಿಗೆ ಪ್ರತಿಯಾಗಿ ವಿರಾಟ್ ಕೊಹ್ಲಿ (25) ಮತ್ತು ದೇವದತ್ ಪಡಿಕಲ್ (22) ಆರ್‌ಸಿಬಿಗೆ ಉತ್ತಮ ಬುನಾದಿ ಹಾಕಿಕೊಟ್ಟರೆ, ಕೆಎಸ್ ಭರತ್ (44) ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ (50*) ತಂಡವನ್ನು ಸುಲಭ ಜಯದತ್ತ ಮುನ್ನಡೆಸಿದರು. ಆರ್‌ಸಿಬಿ 17.1 ಓವರ್‌ಗಳಲ್ಲಿ 3 ವಿಕೆಟ್‌ಗೆ 153 ರನ್ ಪೇರಿಸಿ ಹಾಲಿ ಟೂರ್ನಿಯಲ್ಲಿ ಒಟ್ಟಾರೆ 7ನೇ ಗೆಲುವಿನ ಸಂಭ್ರಮ ಕಂಡಿತು.

    ಯಜುವೇಂದ್ರ ಚಾಹಲ್ ಐಪಿಎಲ್‌ನಲ್ಲಿ 4ನೇ ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಎಲ್ಲವೂ ಯುಎಇಯಲ್ಲೇ ನಡೆದ ಪಂದ್ಯದಲ್ಲೇ ಆಗಿರುವುದು ವಿಶೇಷ. ಗ್ಲೆನ್ ಮ್ಯಾಕ್ಸ್‌ವೆಲ್ ಟಿ20 ಕ್ರಿಕೆಟ್‌ನಲ್ಲಿ 7 ಸಾವಿರ ರನ್ ಪೂರೈಸಿದ 5ನೇ ಆಸೀಸ್ ಬ್ಯಾಟರ್ ಎನಿಸಿದರು. ವಾರ್ನರ್, ಫಿಂಚ್, ಹಾಜ್, ವ್ಯಾಟ್ಸನ್ ಮೊದಲ ನಾಲ್ವರು. ಸಂಜು ಸ್ಯಾಮ್ಸನ್ (452) ಐಪಿಎಲ್ ಆವೃತ್ತಿಯೊಂದರಲ್ಲಿ ತಮ್ಮ ಗರಿಷ್ಠ ರನ್ ಗಳಿಸಿದರು. 2018ರಲ್ಲಿ 441 ರನ್ ಗಳಿಸಿದ್ದು ಹಿಂದಿನ ಗರಿಷ್ಠ.

    ಟೂರ್ನಿಯ ಮೊದಲ ಭಾಗದಲ್ಲಿ ನಾನು ಹೆಚ್ಚಿನ ವಿಕೆಟ್ ಗಳಿಸಿರಲಿಲ್ಲ. ಬಳಿಕ ಶ್ರೀಲಂಕಾ ಪ್ರವಾಸದಲ್ಲಿ ನಾನು ಉತ್ತಮ ದಾಳಿ ನಡೆಸಿದ್ದೆ. ಅದರಿಂದ ಮತ್ತೆ ಆತ್ಮವಿಶ್ವಾಸ ಪಡೆದಿದ್ದೆ. ಇಲ್ಲಿ ಅದೇ ಲಯದಲ್ಲಿ ಮುಂದುವರಿಯಲು ಬಯಸಿದ್ದೆ ಎಂದು ಯಜುವೇಂದ್ರ ಚಾಹಲ್ ಹೇಳಿದರು.

    ಟೀಮ್ ಇಂಡಿಯಾ ಕೋಚ್ ಹುದ್ದೆಯ ರೇಸ್‌ನಿಂದ ಕುಂಬ್ಳೆ ಔಟ್​, ಪಂಜಾಬ್​ ಕಿಂಗ್ಸ್​ ನೀರಸ ನಿರ್ವಹಣೆಯೇ ಕಾರಣ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts