More

    ಇಸ್ರೇಲ್​ನಲ್ಲಿ ಸದ್ಯದಲ್ಲೇ ನಡೆಯಲಿದೆ ಭಾರಿ ದಾಳಿ; ಸ್ಥಳಾಂತರವಾಗುವಂತೆ ನಾಗರಿಕರಿಗೆ ಸೂಚನೆ

    ನವದೆಹಲಿ: ಹಮಾಸ್​ ಉಗ್ರರ ರಣಭೀಕರ ದಾಳಿಯಿಂದ ತತ್ತರಿಸಿರುವ ಇಸ್ರೇಲ್​ನಲ್ಲಿ ಇನ್ನೂ ಪರಿಸ್ಥಿತಿ ಸಂಪೂರ್ಣ ಹತೋಟಿಗೆ ಬಂದಿಲ್ಲ. ಈ ನಡುವೆ ಇನ್ನೊಂದು ಭಾರಿ ದಾಳಿ ನಡೆಯಲಿದ್ದು, ಸ್ಥಳಾಂತರ ಆಗುವಂತೆ ನಾಗರಿಕರಿಗೆ ಸೂಚನೆಯನ್ನೂ ನೀಡಲಾಗಿದೆ.

    ಇಸ್ರೇಲ್ ವಿದೇಶಾಂಗ ಸಚಿವಾಲಯ ಅಧಿಕೃತ ಎಕ್ಸ್ ಹ್ಯಾಂಡಲ್​ನಿಂದ ಇಂಪಾರ್ಟೆಂಟ್​ ಮೆಸೇಜ್ ಎಂಬ ಒಕ್ಕಣೆಯೊಂದಿಗೆ ಸೂಚನೆಯೊಂದನ್ನು ನೀಡಲಾಗಿದ್ದು, ಸ್ಥಳಾಂತರಗೊಳ್ಳುವಂತೆ ಸ್ಥಳೀಯ ಜನರಿಗೆ ತಿಳಿ ಹೇಳಲಾಗಿದೆ.

    ಉತ್ತರ ಗಾಜಾದಲ್ಲಿರುವ ನಾಗರಿಕರು ಆ ಪ್ರದೇಶವನ್ನು ತೆರವು ಮಾಡಿ ಗಾಜಾ ಪಟ್ಟಿಯ ದಕ್ಷಿಣ ಪ್ರದೇಶದ ಕಡೆಗೆ ಹೋಗಿ ಸ್ಥಳಾಂತರವಾಗುವಂತೆ ಕರೆ ನೀಡುತ್ತೇವೆ. ನಮ್ಮ ಹೋರಾಟ ಅವರ ಜೊತೆ ಅಲ್ಲ. ಇದು ಅನಾಗರಿಕ ಹಮಾಸ್ ಭಯೋತ್ಪಾದಕ ಸಂಘಟನೆಯೊಂದಿಗೆ ಎಂದಿರುವ ಇಸ್ರೇಲ್, ನಾಗರಿಕರ ಸಾವು-ನೋವುಗಳನ್ನು ತಪ್ಪಿಸಲು ಮತ್ತು ಅಮಾಯಕರನ್ನು ಹಾನಿಯಾಗದಂತೆ ತಡೆಯಲು ಪ್ರಯತ್ನಿಸುತ್ತಿದ್ದೇವೆ ಎಂದಿದೆ.

    ಇದನ್ನೂ ಓದಿ: ಯಾವುದಕ್ಕೂ ನಾಳೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದಾ?; ವ್ಯಕ್ತಿಯೊಬ್ಬರಿಂದ ಆತಂಕಕಾರಿ ಪೋಸ್ಟ್​!

    ಇಸ್ರೇಲ್​ನ ಈ ಸೂಚನೆಯಿಂದಾಗಿ ಸದ್ಯದಲ್ಲೇ ಹಮಾಸ್ ಉಗ್ರರ ಮತ್ತೆ ಇಸ್ರೇಲ್ ರಕ್ಷಣಾಪಡೆಯ ಭಯಂಕರ ದಾಳಿ ನಡೆಯುವ ಲಕ್ಷಣಗಳು ಗೋಚರಿಸಿವೆ. ಹಮಾಸ್ ಉಗ್ರರು ಇಸ್ರೇಲ್​ ಮೇಲೆ ದಾಳಿ ಮಾಡಿ ನಾಳೆಗೆ ಒಂದು ವಾರ ಪೂರ್ಣಗೊಳ್ಳುತ್ತಿದೆ. ಅದಾಗ್ಯೂ ಪರಿಸ್ಥಿತಿ ಇನ್ನೂ ಪ್ರಕ್ಷುಬ್ಧವಾಗಿದೆ.

    ಹಮಾಸ್ ದಾಳಿ: ಇದು ಬರ್ಬರ ಕ್ರೌರ್ಯದ ಅಬ್ಬರ; ದುರ್ಬಲ ಹೃದಯದವರು ಈ ಲಿಂಕ್ ತೆರೆಯಬೇಡಿ!

    ಭಿಕ್ಷೆ ಬೇಡುತ್ತಿದ್ದ ವಿದೇಶಿ ಮಹಿಳೆಯ ಬದುಕು ಬದಲಿಸಿದ ಭಾರತೀಯ; ಯಾರೀಕೆ, ಈಗೇನು ಮಾಡುತ್ತಿದ್ದಾರೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts