More

    ಪೆಟ್ರೋಲ್​ಗೆ ನೀರು ಮಿಶ್ರಣ: ಕೋರ್ಟ್​ ಮೆಟ್ಟಿಲೇರಿದ ಗ್ರಾಹಕನಿಗೆ ಬಂಪರ್​, ಬಂಕ್​ ಮಾಲೀಕನಿಗೆ ಬಿಗ್​ ಶಾಕ್​!

    ಭಟ್ಕಳ: ಕಾರಿಗೆ ನೀರು ಮಿಶ್ರಣಗೊಂಡ ಪೆಟ್ರೋಲ್ ಹಾಕಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕಾರವಾರ ಗ್ರಾಹಕ ನ್ಯಾಯಾಲಯವು ಭಟ್ಕಳದ ಸರ್ಕಲ್​ನಲ್ಲಿರುವ ಪೆಟ್ರೋಲ್ ಬಂಕ್ ಮಾಲೀಕರಿಗೆ 15 ಲಕ್ಷ 13 ಸಾವಿರದ 475 ರೂ. ಗಳನ್ನು ವಾರ್ಷಿಕ ಶೇ. 6ರ ಬಡ್ಡಿ ದರ ಸೇರಿಸಿ ಕಾರಿನ ಮಾಲೀಕರಿಗೆ ಪಾವತಿಸುವಂತೆ ಆದೇಶಿಸಿದೆ.

    ಭಟ್ಕಳ ಸರ್ಕಲ್​ನಲ್ಲಿರುವ ಜೆ. ಅಬ್ದುರ್ರಹೀಮ್ ಪೆಟ್ರೋಲ್ ಬಂಕ್ ಮಾಲೀಕರಾದ ಫೈಮಾನ್ ಅಲಿ ಮುರ್ತಝಾ ಹಾಗೂ ಸಿರಾಜುದ್ದೀನ್ ಎಂಬುವವರಿಗೆ ಗ್ರಾಹಕ ನ್ಯಾಯಾಲಯ ದಂಡ ವಿಧಿಸಿದೆ. ಅಲ್ಲದೆ, ಘಟನೆಯಿಂದಾಗಿ ಕಾರಿನ ಮಾಲೀಕ ಅನುಭವಿಸಿದ ಮಾನಸಿಕ ಹಿಂಸೆಗೆ ಪರಿಹಾರವಾಗಿ 50 ಸಾವಿರ ರೂ. ಹಾಗೂ ದೂರು ದಾಖಲಿನ ಖರ್ಚು ವೆಚ್ಚವಾಗಿ 10 ಸಾವಿರ ರೂ. ನೀಡಬೇಕು ಮತ್ತು ಒಟ್ಟು ಪರಿಹಾರದ ಹಣವನ್ನು 30 ದಿನಗಳ ಒಳಗಾಗಿ ಪಾವತಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

    ಪ್ರಕರಣದ ವಿವರ : ಕಳೆದ 2018ರ ಮಾರ್ಚ್ ತಿಂಗಳಿನಲ್ಲಿ ಇಲ್ಲಿನ ಸಂಶುದ್ದೀನ್ ಸರ್ಕಲ್​ನಲ್ಲಿರುವ ಜೆ. ಅಬ್ದುರ್ರಹೀಮ್ ಪೆಟ್ರೋಲ್ ಬಂಕ್​ನಲ್ಲಿ ಉದ್ಯಮಿ ಮಹ್ಮದ್ ಅನ್ಸಾರ್ ಎಂಬುವರು ತಮ್ಮ ಕಾರಿಗೆ 47 ಲೀಟರ್ ಪೆಟ್ರೋಲ್ ಹಾಕಿಸಿಕೊಂಡಿದ್ದರು. ನಂತರ ಸಾಗರ ರೋಡ್ ಮಾರ್ಗವಾಗಿ 1.5 ಕಿ.ಮೀ. ತೆರಳುವಷ್ಟರಲ್ಲಿ ಕಾರು ಬಂದ್ ಆಗಿತ್ತು. ನಂತರ ಅನ್ಸಾರ್ ಸಾಗರ ರೋಡ್ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದವರ ಸಹಕಾರದೊಂದಿಗೆ ಮೆಕ್ಯಾನಿಕ್ ಅನ್ನು ಸ್ಥಳಕ್ಕೆ ಕರೆಯಿಸಿಕೊಂಡು ತಪಾಸಣೆ ಮಾಡಿದಾಗ ಪೆಟ್ರೋಲ್​ಗೆ ನೀರು ಮಿಶ್ರಣವಾದ ಬಗ್ಗೆ ತಿಳಿದು ಬಂದಿತ್ತು. ನಂತರ ತಾಲೂಕಿನ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪೊಲೀಸರು ಬಂಕ್ ಮಾಲೀಕ ಪೈಮಾನ್ ಅವರನ್ನು ಬಂಧಿಸಿದ್ದರು. ನಂತರ ಉದ್ಯಮಿ ಪರಿಹಾರಕ್ಕಾಗಿ ಗ್ರಾಹಕ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts