More

    ಬರಿದಾಗಿದ್ದ KRS​ ಡ್ಯಾಂನಲ್ಲಿ ಮತ್ತೆ ಜೀವಕಳೆ: 100 ಅಡಿ ತಲುಪಿದ ನೀರಿನ ಮಟ್ಟ, ರೈತರ ಮುಖದಲ್ಲಿ ಸಂತಸ

    ಮಂಡ್ಯ: ಮುಂಗಾರು ಆಗಮನವಾದರೂ ಮಳೆಯಾಗದೇ ರೈತರ ಮೊಗದಲ್ಲಿ ಆತಂಕ ಮೂಡಿಸಿದ್ದ ಮಳೆರಾಯ ಇದೀಗ ನಿರಂತವಾರವಾಗಿ ಅಬ್ಬರಿಸುವ ಮೂಲಕ ಆತಂಕವನ್ನು ದೂರ ಮಾಡಿದ್ದಾನೆ. ಮಳೆಯಿಲ್ಲದೆ ಬರಿದಾಗಿದ್ದ ಕೃಷ್ಣರಾಜ ಸಾಗರ ಅಣೆಕಟ್ಟಿಗೆ ಮತ್ತೆ ಜೀವ ಕಳೆ ಬಂದಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಕೆಆರ್​ಎಸ್​ ಡ್ಯಾಂಗೆ ಹರಿದು ಬರುತ್ತಿರುವ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

    ಎರಡೇ ದಿನದಲ್ಲಿ 8 ಅಡಿ ಭರ್ತಿ

    ಆತಂಕದ ಮಟ್ಟಕ್ಕೆ ಕುಸಿದಿದ್ದ ಕೆಆರ್​ಎಸ್ ಡ್ಯಾಂನ​ ನೀರಿನ ಮಟ್ಟ ಇದೀಗ ಸುಧಾರಿಸಿದ್ದು 100 ಅಡಿಗೆ ತಲುಪಿದೆ. ಕೇವಲ ಎರಡೇ ದಿನದಲ್ಲಿ 8 ಅಡಿ ಭರ್ತಿಯಾಗಿದೆ. ಕೆಆರ್​ಎಸ್​ ಗರಿಷ್ಠ 124.80 ಅಡಿ ಹೊಂದಿದ್ದು, ಸದ್ಯ 100 ಅಡಿಗೆ ನೀರಿನ ಮಟ್ಟ ತಲುಪಿದೆ. ಮಳೆ ಹೀಗೆ ಮುಂದುವರಿದರೆ ಡ್ಯಾಂ ಭರ್ತಿಯಾಗಲಿದೆ.

    ಇದನ್ನೂ ಓದಿ: ಅರೆಬರೆ ಡ್ರೆಸ್​ ಬಗ್ಗೆ ವ್ಯಕ್ತಿಯೊಬ್ಬ ಆಡಿದ ಮಾತು ಕೇಳಿ ಕೆರಳಿದ ಉರ್ಫಿ: ಮುಂಬೈ ಏರ್ಪೋರ್ಟ್​ನಲ್ಲಿ ಹೈಡ್ರಾಮ!

    ಕೃಷಿ ಚಟುವಟಿಕೆಗಳತ್ತ ಮುಖ 

    ಇನ್ನು ಡ್ಯಾಂ ಭರ್ತಿಯತ್ತ ಸಾಗುತ್ತಿರುವುದಕ್ಕೆ ಮಂಡ್ಯ ಜಿಲ್ಲೆ ರೈತರಲ್ಲಿ ಸಂತಸ ಮನೆ ಮಾಡಿದೆ. ಒಂದೂವರೆ ತಿಂಗಳಿಂದ‌ ಮಳೆಯಿಲ್ಲದೇ ಸಕ್ಕರೆ ನಾಡಿನ ಅನ್ನದಾತರು ಕಂಗಾಲಾಗಿದ್ದರು. ಇದೀಗ ಮಳೆ ಹಿನ್ನೆಲೆಯಲ್ಲಿ ರೈತರು ಮತ್ತೆ ಕೃಷಿ ಚಟುವಟಿಕೆಗಳತ್ತ ಮುಖ ಮಾಡಿದ್ದಾರೆ.

    10 ದಿನದಲ್ಲಿ ಸಂಪೂರ್ಣ ಭರ್ತಿ ಸಾಧ್ಯತೆ

    ಸದ್ಯ ಕೆಆರ್​ಎಸ್​ ಡ್ಯಾಂಗೆ 48,025 ಕ್ಯೂಸೆಕ್ ಒಳ ಹರಿವು ಇದೆ. ಮಧ್ಯಾಹ್ನದ ವೇಳೆಗೆ ಒಳ ಹರಿವಿನ ಪ್ರಮಾಣ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. 48 ಗಂಟೆಯಲ್ಲಿ 5 ಟಿಎಂಸಿ ನೀರು ಡ್ಯಾಂಗೆ ಹರಿದು ಬಂದಿದೆ. ಗರಿಷ್ಠ 49.452 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಕೆಆರ್​ಎಸ್​ ಡ್ಯಾಂನಲ್ಲಿ ಸದ್ಯ 22.809 ಟಿಎಂಸಿ ನೀರು ಶೇಖರಣೆಯಾಗಿದೆ. ಇದೇ ರೀತಿ ಒಳಹರಿವು ಬಂದಲ್ಲಿ, ಮುಂದಿನ 10 ದಿನದಲ್ಲಿ ಡ್ಯಾಂ ಸಂಪೂರ್ಣ ಭರ್ತಿಯಾಗುವ ಸಾಧ್ಯತೆ ಇದೆ. (ದಿಗ್ವಿಜಯ ನ್ಯೂಸ್​)

    ಬೆಳ್ಳಂಬೆಳಗ್ಗೆಯೇ ತಂದೆಯ ಜತೆ ಕೃಷಿ ಹೊಂಡದಲ್ಲಿ ಈಜಲು ಹೋದ ಯುವತಿ ದುರಂತ ಸಾವು

    ಮಣಿಪುರ ಕಲಹಕ್ಕೆ ಸಂಸತ್ ಕಲಾಪ ಬಲಿ: ಉಭಯ ಸದನ ಮುಂದೂಡಿಕೆ; ಆಪ್ ಸಂಸದ ಅಮಾನತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts